ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ವಿಮಾನಯಾನ ಸಂಸ್ಥೆಗಳು ನಿರಾಳ:ಇಂಧನ ಆಮದಿಗೆ ಅನುಮತಿ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ,ಐಎಎನ್‌ಎಸ್): ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿಮಾನ ಯಾನ ರಂಗಕ್ಕೆ ಚೇತರಿಕೆ ನೀಡಲು ದೇಶಿ ವಿಮಾನ ಯಾನ ಸಂಸ್ಥೆಗಳು ವಿದೇಶಗಳಿಂದ ವಿಮಾನ ಇಂಧನ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ವಿರೋಧದ ಹೊರತಾಗಿಯೂ  ಈ ನಿರ್ಧಾರಕ್ಕೆ ಬರಲಾಗಿದೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿಯು, ಈ ನಿರ್ಧಾರ ತೆಗೆದುಕೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯಕ್ಕೆ ರಾಜ್ಯ ಸರ್ಕಾರಗಳು ವಿಧಿಸುವ ಗರಿಷ್ಠ ಪ್ರಮಾಣದ ಮಾರಾಟ ತೆರಿಗೆ ಮತ್ತು ಇತರ ತೆರಿಗೆಗಳು ದೇಶಿ ವಿಮಾನ ಯಾನ ರಂಗಕ್ಕೆ ಹೊರೆಯಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ವಿಮಾನ ಇಂಧನ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು.

ವಿಮಾನ ಯಾನ ಸಂಸ್ಥೆಗಳು ವಿಮಾನ ಇಂಧನವನ್ನು ವಿದೇಶಗಳಿಂದ ನೇರವಾಗಿ ಆಮದು ಮಾಡಿಕೊಳ್ಳುವುದರಿಂದ ಶೇ 20ರಿಂದ ಶೇ 35ರಷ್ಟು ಮಾರಾಟ ತೆರಿಗೆ ಉಳಿಸಬಹುದು. ಇದರಿಂದ ವಿಮಾನಗಳ ಹಾರಾಟ ವೆಚ್ಚದಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯ ಸಾಧ್ಯವಾಗಲಿದೆ.
 
ಸದ್ಯಕ್ಕೆ ದೇಶದಲ್ಲಿ ವಿಮಾನ ಯಾನ ಸಂಸ್ಥೆಗಳು ಮಾಡುವ ಒಟ್ಟು ವೆಚ್ಚದಲ್ಲಿ ವಿಮಾನಗಳ ಇಂಧನ ವೆಚ್ಚವು ಶೇ 50ರಷ್ಟಿದೆ.ದುಬಾರಿ ಇಂಧನ ಬೆಲೆಯ ಕಾರಣಕ್ಕೆ, ದೇಶಿ ವಿಮಾನ ಯಾನ ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ  ್ಙ 3000 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿರುವ ಅಂದಾಜು ಇದೆ.

ಇಂಧನ ಆಮದಿಗೆ ಸರ್ಕಾರವು ಅನುಮತಿ ನೀಡಿದರೂ, ಆಮದು ಮಾಡಿಕೊಳ್ಳುವ ಮತ್ತು ಸಂಗ್ರಹಿಸುವ ಬಗ್ಗೆ ವಿಮಾನ ಯಾನ ಸಂಸ್ಥೆಗಳು ಇನ್ನೂ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ.

ಮರು ಹೊಂದಾಣಿಕೆ:
ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಸಾಲ ಮರು ಹೊಂದಾಣಿಕೆಯನ್ನೂ ಸಚಿವರ ಸಮಿತಿಯು ಅನುಮೋದಿಸಿದೆ. ಬಾಂಡ್‌ಗಳ ಮೂಲಕ ರೂ,400 ಕೋಟಿಗಳ ನೆರವು ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಬೇಕಾಗಿದೆ.
ಸದ್ಯಕ್ಕೆ `ಏಐ~ನ ಒಟ್ಟು ಸಾಲದ ಮೊತ್ತವು ರೂ,777 ಕೋಟಿಗಳಷ್ಟಿದೆ.
 

 ವಿಮಾನ ಇಂಧನ
 ಮಾರಾಟ ಬೆಲೆ
 (ಪ್ರತಿ ಕಿಲೊ ಲೀಟರ್‌ಗೆ ನಗರ ರೂಳಲ್ಲಿ)
ಚೆನ್ನೈ 71,155
ಮುಂಬೈ 63,864
ನವದೆಹಲಿ 62,908
ಕ್ವಾಲಾಲಂಪುರ
ಮಲೇಷ್ಯಾ) 41,000
ಸಿಂಗಪುರ 42,000
ದುಬೈ 43,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT