ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ವೈದ್ಯ ಪದ್ಧತಿ ಕಡೆಗಣಿಸದಿರಿ:ಗಜೇಂದ್ರ

Last Updated 19 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಾವಿರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾ ಡಿರುವ ದೇಸಿ ವೈದ್ಯ ಪದ್ಧತಿಯನ್ನು ನಿರ್ಲಕ್ಷಿಸಬಾರದು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಗಜೇಂದ್ರ ಗೊರಸುಕೂಡಿಗೆ ಅಭಿಪ್ರಾಯಪಟ್ಟರು.

ಮತ್ತಾವರದ ಅರಣ್ಯ ಮಾಹಿತಿ ಕೇಂದ್ರದಲ್ಲಿ ಗುರುವಾರ ಪಶ್ಚಿಮಘಟ್ಟ ಕಾರ್ಯಪಡೆ ಮತ್ತು ಅರಣ್ಯಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಡೂರು ಮತ್ತು ಚಿಕ್ಕಮಗಳೂರು ವಲಯದ ನಾಟಿವೈದ್ಯರ ಸಮ್ಮೇಳನ, ಹಸಿರು-ಆರೋಗ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿಗೆ ಮಾತೆ ಸ್ಥಾನ ನೀಡಿ ಗೌರವಿಸುತ್ತಿರುವ ಸಂಸ್ಕೃತಿ ನಮ್ಮದು. ಪ್ರಕೃತಿ ಜತೆಯೇ ಪಾರಂಪರಿಕವಾದ ಗಿಡಮೂಲಿಕೆ ಆಧರಿತ ಔಷಧ ಪದ್ಧತಿಯನ್ನು ಪೂರ್ವಿಕರು ಅನುಸರಿ ಸಿಕೊಂಡು ಬಂದಿದ್ದಾರೆ. ಈಗಲೂ ದೇಶದಲ್ಲಿ ಬಹುಸಂಖ್ಯಾತ ಜನರು ನಾಟಿ, ಆಯುರ್ವೇದ ಪದ್ಧತಿಯನ್ನೆ ಸಾಮಾನ್ಯ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಿದ್ದಾರೆ.

ಅಡ್ಡಪರಿಣಾಮವಿಲ್ಲದ, ಸೇವಾ ಸ್ವರೂಪದ ಇಂತಹ ಪದ್ಧತಿ ಇಂದು ಕವಲುದಾರಿಯಲ್ಲಿದೆ. ಕಳೆದ ಎರಡು- ಮೂರು ದಶಕಗಳಿಂದ ಅಮೂಲ್ಯ 361 ಔಷಧಿಯುಕ್ತ ಗಿಡಮೂಲಿಕೆಗಳು ವಿನಾಶದ ಅಂಚಿಗೆ ತಲುಪಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಬದುಕು ಮತ್ತು ಬದುಕಲು ಬಿಡು ಎಂಬ ಪ್ರಕೃತಿಯ ಸಂದೇಶವನ್ನು ಯಾರೂ ಕೂಡ ಮರೆಯಬಾರದು ಎಂದರು.

ಪಾರಂಪರಿಕ ವೈದ್ಯಪದ್ಧತಿಯ ಅತಿ ರಂಜನೆ ಬೇಡ. ಸಸ್ಯದ ಔಷಧಗುಣ- ಅಡ್ಡಪರಿಣಾಮ, ದ್ರವ್ಯಸಾಂದ್ರತೆ ಅರಿತು ಶಾಸ್ತ್ರಬದ್ಧ ಕಲಿಕೆಯೊಂದಿಗೆ ಔಷಧ ನೀಡುವುದರಲ್ಲಿ ನಿಖರತೆ ಹೊಂದ ಬೇಕು. ಅಲ್ಲದೆ ಇಂತಹ ಜ್ಞಾನವನ್ನು ಹಂಚಿಕೊಳ್ಳಬೇಕು. ಧನ್ವಂತರಿ ಋಷಿಯ ಸಂದೇಶ ಪಾಲಿಸುವುದರಿಂದ ಹೆಚ್ಚಿನ ಯಶಸ್ಸು ಪಡೆಯಬಹುದು ಎಂದರು.

ಋಷಿಮುನಿಗಳ ಕಾಲದಿಂದ ಹಳ್ಳಿಗಳಲ್ಲಿ ಆಳವಾಗಿ ಬೇರೂರಿರುವ ಅಗಾಧ ಮತ್ತು ಜಟಿಲ ವಿದ್ಯೆ ಪಾರಂಪರಿಕ ವೈದ್ಯಪದ್ಧತಿ. 70ರ ದಶಕದ ನಂತರ ಹಸಿರು ಕ್ರಾಂತಿಯಿಂದ ಕೀಟನಾಶಕ-ರಸಗೊಬ್ಬರ ಹೆಚ್ಚಾಗಿ ಬಳಸಿ, ಜಮೀನನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಿದ ಪರಿಣಾಮ ಅತಿಸೂಕ್ಷ್ಮ ಸಸ್ಯ ಪ್ರಬೇಧಗಳು ಕಣ್ಮರೆಯಾಗಿವೆ. ಈ ಬಗ್ಗೆ ಗಮನಹರಿಸಿ ಅಮೂಲ್ಯ ಸೂಕ್ಷ್ಮ ಸಸ್ಯ ಸಂರಕ್ಷಿಸಲು ಆದ್ಯತೆ ನೀಡಬೇಕಿದೆ ಎಂದು ಭದ್ರಾವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ಉದುಪುಡಿ ಹೇಳಿದರು.

ಜೀವವೈವಿಧ್ಯ- ವೈದ್ಯಕೀಯ ತಾಣವೆನಿಸಿದ ಪಶ್ಚಿಮಘಟ್ಟದ ತಪ್ಪಲಿ ನಲ್ಲಿ ಹಸಿರು-ಆರೋಗ್ಯ ಆಂದೋಲನ ಅರ್ಥಪೂರ್ಣವೆನಿಸಿದೆ. ಆಯುರ್ವೇದ ಪಾರಂಪರಿಕ ನಾಟಿ ವೈದ್ಯ ಪದ್ಧತಿ ಒಂದು ರೀತಿಯಲ್ಲಿ ಮುಚ್ಚಿದ ಬಾಗಿಲಾಗಿ ಹೆಚ್ಚು ಪ್ರಚಾರದಲ್ಲಿಲ್ಲ. ಆದರೆ ಅಲೋಪತಿ ತೆರೆದ ಬಾಗಿಲಾ ಗಿದ್ದು ವ್ಯಾಪಕ ಪ್ರಚಾರ ಪಡೆದಿದೆ. ಈ ಸಮಾವೇಶ ನಾಟಿ ವೈದ್ಯರಲ್ಲಿ ಆತ್ಮವಿಶ್ವಾಸ-ಅರಿವು ಹೆಚ್ಚಿಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್ ಹೇಳಿದರು.

ಬ್ರಿಟಿಷರ ದಾಸ್ಯದಲ್ಲಿ ಪರಂಪರಾ ನುಗತ ಸಂಗತಿಗಳು ಹಿನ್ನಡೆ ಕಂಡಿವೆ. ಸ್ಥಳೀಯವಾದ ಪದ್ಧತಿಗಳನ್ನು ಬ್ರಿಟಿಷರು ನೇಟೀವ್ ಎನ್ನುತ್ತಿದ್ದರು. ಕಾಲಕ್ರಮೇಣ ನೇಟೀವ್ ಎನ್ನುವುದು ನಾಟಿ ಆಗಿದೆ. ವಾಸ್ತವವಾಗಿ ನಾಟಿವೈದ್ಯರೆಂಬ ಶಬ್ದವೇ ದಾಸ್ಯದ ಸಂಕೇತವೆಂದು ಡಾ.ಉಪೇಂದ್ರ ಶೆಣೈ ಹೇಳುತ್ತಿದ್ದರು ಎಂದು ರಾಜ್ಯ ಪಾರಂಪರಿಕ ವೈದ್ಯಪರಿಷತ್ತು ಅಧ್ಯಕ್ಷ ಡಾ.ಮಲ್ಲಪ್ಪ ನೆನಪು ಮಾಡಿಕೊಂಡರು.

ಸುಮಾರು 3ಸಾವಿರ ಔಷಧ ಗಿಡಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಕೇವಲ 300 ಸಸ್ಯ ಸಾಮಾನ್ಯ ವಾಗಿ ಗೊತ್ತಿದೆ. ಅದರಲ್ಲೂ 100ಮಾತ್ರ ಹೆಚ್ಚಿನ ಬಳಕೆಯಲ್ಲಿವೆ. ಸಾಮಾನ್ಯ ಕಾಯಿಲೆಗೆ ನಾಟಿಪದ್ಧತಿಯೇ ಮನೆಗಳಲ್ಲಿ ಇಂದೂ ಜಾರಿಯಲ್ಲಿದೆ. ಸರ್ಜರಿಯಂತಹ ದೊಡ್ಡಚಿಕಿತ್ಸೆಗಳಿಗೆ ಮಾತ್ರ ಅಲೋಪತಿಯನ್ನು ಜನರು ಅವಲಂಬಿಸಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕ್ ಫೈಯಾಜ್ ಹೇಳಿದರು.

ನಾಟಿ ವೈದ್ಯರಾದ ಲಕ್ಷ್ಮೀಪುರದ ಬೋರೇಗೌಡ, ಬಿಳೇಕಲ್ಲಳ್ಳಿ ಲಕ್ಷ್ಮೇಗೌಡ, ಸುಶೀಲಮ್ಮ, ಅಲ್ಲಂಪುರದ ಲಕ್ಷ್ಮಣಶೆಟ್ಟಿ, ದೇವಗೊಂಡನಹಳ್ಳಿಯ ಮಹಮ್ಮದ್‌ಜಾಫರ್, ಲಕ್ಯಾದ ಮೋರೇಕಲ್ಲಪ್ಪ,
ಹಿರೇಬಿದರೆಲಕ್ಷ್ಮಣಗೌಡ, ಚಟ್ನಳ್ಳಿ

ರೇಣುಕಯ್ಯ, ಅತ್ತಿಗುಂಡಿಯ ಅಮೀರ್‌ಜಾನ್, ಸಖರಾಯಪಟ್ಟಣದ ಶಿವಕುಮಾರ, ಡಾ.ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಪಾರಂಪರಿಕ ವೈದ್ಯಪರಿಷತ್ ಖಜಾಂಚಿ ದಾಂಡೇಲಿಯ ಶ್ರೀಧರ ದೇಸಾಯಿ, ತರೀಕೆರೆ ಘಟಕದ ಹುಣಸಘಟ್ಟದ ಎಂ.ಜಯಶ್ರೀ ಸದಾಶಿವಯ್ಯ, ಆಯುಷ್ ವೈದ್ಯರಾದ ಡಾ.ವಿಕ್ರಂ, ಡಾ.ಹೇಮಲತಾ, ಡಾ. ಶೋಭಾ, ಡಾ.ಗೌತಮ್, ಉಪ ಅರಣ್ಯ ಸಂಕ್ಷಣಾಧಿಕಾರಿಗಳಾದ ಎಂ.ಶಶಿಧರ, ರಮೇಶ್‌ಬಾಬು, ವಲಯ ಅರಣ್ಯಾ ಧಿಕಾರಿ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT