ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿಕರಣಗಳು ನೃತ್ಯ ಪ್ರಾತ್ಯಕ್ಷಿಕೆ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಲಾಪ್ರೇಮಿ ಫೌಂಡೇಷನ್‌ ಆಶ್ರಯದಲ್ಲಿ ಮಲ್ಲೇಶ್ವರದ ಸೇವಾ ಸದನದಲ್ಲಿ ಇತ್ತೀಚೆಗೆ ‘ದೇಸಿಕರಣಗಳು’ ನೃತ್ಯ ಪ್ರಾತ್ಯಕ್ಷಿಕೆ ನಡೆಯಿತು.
ಕಲಾವಿದೆ ಸುಂದರಿ ಸಂತಾನಂ ಅವರು ಕರ್ನಾಟಕದ ದೇವಾಲಯಗಳಲ್ಲಿರುವ ನೃತ್ಯ ಭಂಗಿಗಳ ಶಿಲ್ಪಗಳನ್ನು ಆಳವಾಗಿ ಅಧ್ಯಯನ ನಡೆಸಿ, ಅವನ್ನು ದೇಸಿಕರಣಗಳ ಹೆಸರಿನಲ್ಲಿ ನೃತ್ಯಗಳಲ್ಲಿ ಅಳವಡಿಸಿದ್ದಾರೆ.

ದೇವಾಲಯಗಳಲ್ಲಿರುವ ನೃತ್ಯ ಭಂಗಿಗಳ ಅಧ್ಯಯನದ ಹಿನ್ನೆಲೆ ಮತ್ತು ಭಾವದ ಬಗ್ಗೆ ಸಂಶೋಧನೆಯ ಕುರಿತು ಶತಾವಧಾನಿ ಆರ್‌.ಗಣೇಶ್‌ ವಿಸ್ತೃತ ಮಾಹಿತಿ ನೀಡಿದರು.

ನಾಟ್ಯದ ಭಂಗಿಗಳನ್ನು ಭರತ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. 

ಸುಂದರಿ ಸಂತಾನಂ ಅವರ ಪುತ್ರಿ ಹರಿಣಿ ಸಂತಾನಂ ಅವರು ನಟವಾಂಗದಲ್ಲಿ ನೆರವಾದರು. ಆಯ್ದ ಕರಣಗಳನ್ನು ವಿವರಣೆಯೊಂದಿಗೆ ತೋರಿಸಿದರು. ಆನಂತರ ಅವನ್ನು ನೃತ್ಯದಲ್ಲಿ ಹೇಗೆ ಅಳವಡಿಸಬಹುದು ಎಂಬುದನ್ನೂ ತೋರಿಸಲಾಯಿತು. ಜೊತೆಗೆ ಶಾಸ್ತ್ರೀಯ ನೃತ್ಯದಲ್ಲಿ ಬಳಸಲಾಗುವ ಕರಣಗಳಿಗೂ ಇರುವ ವ್ಯತ್ಯಾಸವನ್ನೂ ಪ್ರಾತ್ಯಕ್ಷಿಕೆಯ ಮೂಲಕ ತಿಳಿಯಪಡಿಸಿದರು.

ಸುಂದರಿ ಅವರು ತಾವು ಬದುಕಿದ್ದಾಗ ಮಾಡಿದ ಸಂಯೋಜನೆಯನ್ನೇ ಈ ಕಾರ್ಯಕ್ರಮದಲ್ಲೂ ಪ್ರದರ್ಶಿಸಲಾಯಿತು. ಪ್ರತಿಯೊಂದು ಕರಣವನ್ನೂ ಪ್ರತ್ಯೇಕವಾಗಿ ಕಲಾವಿದರು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT