ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾರ್ಢ್ಯ: ಮಧುಸೂದನ್‌ಗೆ ಟ್ರೋಫಿ

Last Updated 13 ಜೂನ್ 2011, 9:20 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೈಸೂರು ಪವರ್‌ಹೌಸ್ ವ್ಯಾಯಾಮ ಶಾಲೆಯ ಆರ್. ಮಧುಸೂದನ್ ಅವರು `ಸ್ನೇಹ ಮಿಲನ ಟ್ರೋಫಿ~ ಗೆದ್ದುಕೊಂಡಿದ್ದಾರೆ.

ನಾಗಮಂಗಲದ  ಮಲ್ಲಿಕಾರ್ಜುನ ಬೆಸ್ ಪೋಸರ್ ಪ್ರಶಸ್ತಿ ಪಡೆದರೆ, ಖಾದರ ಪಾಶಾ ಅವರು ಮೋಸ್ಟ್ ಮಸ್ಕುಲರ್ ಮ್ಯಾನ್ ಪ್ರಶಸ್ತಿ ಪಡೆದರು ಎಂದು ಸ್ಪರ್ಧೆ ಸಂಘಟಿಸಿದ್ದ ಸ್ನೇಹ ಮಿಲನ ಯುವ ಮಿತ್ರ ಬಳಗದ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಐದು ಜಿಲ್ಲೆಗಳಿಂದ ಸುಮಾರು 72 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ವಿವಿಧ ವಿಭಾಗ ಗಳಲ್ಲಿನ ಅಂತಿಮ ಫಲಿತಾಂಶ. (ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಿಸಿದವರನ್ನು ನೀಡಲಾಗಿದೆ.)

ಶಾರ್ಟ್ ಕ್ಲಾಸ್:  ಖಾದರ್ ಪಾಶಾ, ಮೈಸೂರು; ಎಂ.ಆರ್. ವಿನಯ್‌ಕುಮಾರ್, ಮಂಡ್ಯ; ನಟರಾಜ್, ಮೈಸೂರು; ಸಿ.ಎಸ್.ಮಹೇಶ್,  ಮೈಸೂರು.

ಟಾಲ್ ಕ್ಲಾಸ್: ಎಂ. ಮಲ್ಲಿ ಕಾರ್ಜುನ, ನಾಗಮಂಗಲ; ನಿಕಾರ್ ಅಲಿ, ಮೈಸೂರು; ಬಿ.ವಿ.ನವೀನ್, ಮಂಡ್ಯ; ಸೈಯದ್ ಸಲ್ಮಾಂ,ಮೈಸೂರು; ಕೆ.ಎಸ್.ವಿನೋದ್‌ಕುಮಾರ್, ಮಂಡ್ಯ.

ಮೀಡಿಯಂಕ್ಲಾಸ್: ಆರ್. ಮಧುಸೂದನ್, ಮೈಸೂರು, ಉಮೇಶ್, ನಾಗಮಂಗಲ, ಎಂ.ಆರ್. ನದೀಮ್, ಮೈಸೂರು, ಶಾರುಕ್ ಖಾನ್, ಮೈಸೂರು.

ಸೂಪರ್ ಟಾಲ್ ಕ್ಲಾಸ್: ಜಿ.ಗುರು, ಮೈಸೂರು, ಮಹ್ಮದ್ ಸಲ್ಮಾಂ, ಮೈಸೂರು, ಹುಸೇನ್, ಮೈಸೂರು, ವಿ.ನವೀನ್, ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT