ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಶಿಕ್ಷಕರಿಗೆ ಅನ್ಯಾಯ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಪಠ್ಯಕ್ರಮದ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ ದೈಹಿಕ ಶಿಕ್ಷಣವನ್ನು ಕಡ್ಡಾಯ ಪಠ್ಯ ಕ್ರಮವನ್ನಾಗಿ ಮಾಡುವ ಕುರಿತಂತೆ ಸರ್ಕಾರ (ಆದೇಶ ಸಂಖ್ಯೆ: ಇಡಿ 290 ಎಸ್‌ಎಲ್ಬಿ 2006) 2006- 07ರ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲು ಆದೇಶಿಸಿದೆ.

ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಹಿ ಮಾಡಿರುವ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಇದರ ಜೊತೆಗೆ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರು ಎಂದು ಪರಿಗಣಿಸಬೇಕು ಎಂದು ವೈದ್ಯನಾಥನ್ ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಆದರೆ ಈ ವರದಿ ಅನುಷ್ಠಾನಕ್ಕೆ ಬರಲು ಎಷ್ಟು ವರ್ಷಗಳು ಬೇಕಾದೀತೋ ದೇವರಿಗೇ ಗೊತ್ತು.

 1967ರಲ್ಲಿ ಶಿಕ್ಷಣ ಇಲಾಖೆಯ ವೃಂದ-ನೇಮಕಾತಿಯ ಬಗ್ಗೆ (ಸಂಖ್ಯೆ ಜಿ.ಎ.ಡಿ. 53 ಓ.ಆರ್.ಆರ್. 64. ದಿನಾಂಕ 22 ಫೆಬ್ರುವರಿ 1967) ಎಲ್ಲಾ ವಿವರಗಳನ್ನು ನೀಡಲಾಗಿದೆ.
ಶಿಕ್ಷಣ ಸಚಿವರು ಇದನ್ನು ಗಮನಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಅನುಕೂಲಗಳನ್ನು ದೈಹಿಕ ಶಿಕ್ಷಕರಿಗೂ ಸಿಗುವಂತೆ ಮಾಡುತ್ತಾರೆ ಎಂದು ಆಶಿಸಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT