ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಕೆರೆಯಲ್ಲಿ ಶವಪತ್ತೆ

Last Updated 7 ಜನವರಿ 2014, 19:36 IST
ಅಕ್ಷರ ಗಾತ್ರ

ಹೊಸಕೋಟೆ: ಪಟ್ಟಣದ ಹೊರ ವಲಯ­ದ ಅಮಾನಿ ದೊಡ್ಡಕೆರೆಯಲ್ಲಿ ತೇಲು­ತ್ತಿದ್ದ ವೃದ್ಧರೊಬ್ಬರ ಶವವನ್ನು ಪೊಲೀಸರು ಸೋಮವಾರ ಹೊರತೆಗೆದಿ­ದ್ದಾರೆ. ಮೃತರನ್ನು ಗಾಣಿಗರಪೇಟೆ ವಾಸಿ ಗೋಪಾಲ್ (68) ಎಂದು ಗುರುತಿಸ­ಲಾಗಿದೆ. ಮದ್ಯವ್ಯಸನಿಯಾಗಿದ್ದ ಅವರು ಅನಾರೋಗ್ಯದಿಂದ ಬೇಸತ್ತು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ­ಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

ಶವ ಪತ್ತೆ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಮೇಲ್ಸೇತುವೆ ಕೆಳಗೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ಆ ವ್ಯಕ್ತಿ ಮಾಸಲು ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದು ಯಾವುದೋ ಕಾಯಿಲೆಯಿಂದ ಸತ್ತಿರ­ಬಹುದು ಎಂದು ಶಂಕಿಸಲಾಗಿದೆ. ಆತ ಚಿಂದಿ ಪೇಪರ್ ಆಯುತ್ತಿದ್ದು ತಮಿಳು ಮಾತನಾಡುತ್ತಿದ್ದ ಎಂದು ಸಾರ್ವಜನಿ­ಕರು ತಿಳಿಸಿದ್ದಾರೆ. ವಿಳಾಸ ಪತ್ತೆಯಾಗಿಲ್ಲ. ಶವವನ್ನು ಎಂವಿಜೆ ಆಸ್ಪತ್ರೆ ಶವಾಗಾರ­ದಲ್ಲಿ ಇಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು ವಾರಸುದಾರರು ಹೊಸಕೋಟೆ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT