ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಯದ ವೇತನ: ಜಲಮಂಡಲಿ ನೌಕರರ ಪರದಾಟ

Last Updated 27 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು:  ನಿಗದಿತ ಸಮಯಕ್ಕೆ ಸರಿಯಾಗಿ ಮಾಸಿಕ ವೇತನ ಪಡೆಯಲಾ ಗದೆ ಬೆಂಗಳೂರು ಜಲಮಂಡಲಿಯ ಗುತ್ತಿಗೆ ನೌಕರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾಸಿಕ ವೇತನ ನೀಡಿಕೆಯಲ್ಲಿ ಜಲಮಂಡಲಿ ಹಾಗೂ ಗುತ್ತಿಗೆ ಏಜೆನ್ಸಿಗಳ ನಡುವೆ ಸಮನ್ವಯ ಇಲ್ಲದೆ ಸಿಬ್ಬಂದಿಯ ಭವಿಷ್ಯ ಡೋಲಾ ಯಮಾನವಾಗಿದೆ. ವೇತನ ಸಮಸ್ಯೆಯ ಜತೆಗೆ ಭವಿಷ್ಯ ನಿಧಿ ಮತ್ತಿತರ ಸೌಲಭ್ಯ ಗಳಿಂದಲೂ ನೌಕರರು ವಂಚಿತರಾಗಿದ್ದಾರೆ.

ಒಟ್ಟು ಏಳು ಏಜೆನ್ಸಿಗಳ ಮೂಲಕ 1874 ಗುತ್ತಿಗೆ ನೌಕರರು ಜಲ ಮಂಡಲಿಯಲ್ಲಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಡೇಟಾ ಎಂಟ್ರಿ ನಿರ್ವಾಹಕರು, ಸಹಾಯಕರು, ಭದ್ರತಾ ಸಿಬ್ಬಂದಿ, ಫಿಟ್ಟರ್, ವಾಲ್ವ್‌ಮನ್, ಕೈತೋಟ ಕೆಲಸಗಾರರು, ಕ್ಲೀನರ್, ಅಟೆಂಡರ್, ಲೋಡರ್ ಸೇರಿದಂತೆ ವಿವಿಧ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಸೇವೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಕೆಲವರು ನೇಮಕಗೊಂಡು ಹತ್ತು ಹದಿ ನೈದು ವರ್ಷಗಳೇ ಸಂದಿದ್ದು ಅಂದಿ ನಿಂದಲೂ ವೇತನ ಮತ್ತಿತರ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಕಾನೂನಿನ ಪ್ರಕಾರ ಇವರನ್ನು ಕಾಯಂ ಮಾಡಿ ಕೊಳ್ಳುವ ಸೌಲಭ್ಯ ಇಲ್ಲ. ಜಲ ಮಂಡಲಿಯ ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ನಗರದ ನೌಕರರಿಗಿಂತಲೂ ಕಡಿಮೆ ಸಂಬಳ ನೀಡಲಾಗುತ್ತಿದೆ.

ಈ ಸಮಸ್ಯೆಗಳ ಮಧ್ಯೆ `ದೇವರು ಕೊಟ್ಟರೂ ಪೂಜಾರಿ ಕೊಡ~ ಎಂಬಂತೆ ಮಂಡಲಿ ಕಾಲಕಾಲಕ್ಕೆ ಹಣ ಬಿಡುಗಡೆ ಮಾಡಿದರೂ ಏಜೆನ್ಸಿಗಳು ವೇತನ ನೀಡುತ್ತಿಲ್ಲ. ಮೂರು ನಾಲ್ಕು ತಿಂಗಳ ನಂತರ ವೇತನ ನೀಡಿದ ಉದಾಹರಣೆ ಗಳಿವೆ. ಅನೇಕ ವರ್ಷಗಳಿಂದ ಇದೇ ಸ್ಥಿತಿ ಮುಂದುವರಿದಿದೆ. ಮೂರು ನಾಲ್ಕು ತಿಂಗಳು ಸಂಬಳ ನೀಡಬೇಕಾದ ಏಜೆನ್ಸಿ ಗಳು ಕೇವಲ ಒಂದೆರಡು ತಿಂಗಳ ಸಂಬಳ ನೀಡಿ ಕೈ ತೊಳೆದುಕೊಳ್ಳುತ್ತಿವೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

`ಏಜೆನ್ಸಿಗಳು ಕೊಡುವುದೇ ಕಡಿಮೆ ಸಂಬಳ. ಅದರಲ್ಲೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ತಿಂಗಳ ಮೊದಲ ಒಂದು ವಾರದಲ್ಲಿ ಸಂಬಳ ದೊರೆಯುವುದೇ ಅಪರೂಪ. ಹೀಗಾ ದರೆ ಸಂಸಾರ ನಡೆಸುವುದು ಹೇಗೆ?~ ಎಂದು ಜಲಮಂಡಲಿಯ ಮಹಿಳಾ ಗುತ್ತಿಗೆ ನೌಕರರೊಬ್ಬರು `ಪ್ರಜಾವಾಣಿ~ಯೊಂದಿಗೆ ಅಳಲು ತೋಡಿಕೊಂಡರು.

ಎಲ್ಲಾ ನೌಕರರಿಂದ ಭವಿಷ್ಯ ನಿಧಿ ಹಾಗೂ ವಿಮೆಗಾಗಿ ಹಣವನ್ನು ಪಡೆಯ ಲಾಗುತ್ತಿದೆ. ಆದರೆ ಅರ್ಧಕ್ಕೂ ಹೆಚ್ಚು ಮಂದಿಗೆ ಈ ಸೌಲಭ್ಯಗಳನ್ನು ನೀಡು ತ್ತಿಲ್ಲ. ಮಾಸಿಕ ಎಷ್ಟು ಹಣ ಭವಿಷ್ಯ ನಿಧಿ ಮತ್ತಿತರ ಸೌಲಭ್ಯಗಳಿಗೆ ಸಂದಾಯ ವಾಗುತ್ತಿದೆ ಎಂಬ ಬಗ್ಗೆ ಏಜೆನ್ಸಿಗಳು ನೌಕರರಿಗೆ ಮಾಹಿತಿ ನೀಡುತ್ತಿಲ್ಲ. ಹಣ ಕಟ್ಟುತ್ತಿರುವುದರ ಬಗ್ಗೆ ದಾಖಲೆಗಳನ್ನು ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

`ಏಜೆನ್ಸಿಗಳು ಭವಿಷ್ಯ ನಿಧಿ ಮತ್ತಿತರ ಸೌಲಭ್ಯಗಳಿಗಾಗಿ ಪಡೆದ ಹಣ ಏನಾಯಿತು ಎಂಬುದನ್ನು ಹೇಳಬೇಕು.  ಮಂಡಲಿಯಿಂದ ಹಣ ಬಿಡುಗಡೆ ಯಾದರೂ ಸಂಬಳ ಸರಿಯಾಗಿ ಕೊಡುತ್ತಿಲ್ಲ. ಕೆಲಸ ಕಳೆದು ಕೊಳ್ಳುವ ಭೀತಿ ಇರುವುದರಿಂದ ಯಾರನ್ನೂ ಒತ್ತಾಯಿಸುವುದು ಕೂಡ ಸಾಧ್ಯವಾ ಗುತ್ತಿಲ್ಲ~ ಎಂದು ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸಂಬಳ ಸಮಸ್ಯೆಯ ಬಗ್ಗೆ ಮಂಡಲಿ ಬೊಟ್ಟು ಮಾಡುವುದು ಏಜೆನ್ಸಿಗಳತ್ತ. ಮಂಡಲಿಯ ಕಾರ್ಮಿಕ ಅಧಿಕಾರಿ ರಾಘವೇಂದ್ರ, `ತಿಂಗಳಿಗೆ ಸರಿಯಾಗಿ ಸಂಬಳ ನೀಡಲು ಮಂಡಲಿ ಸಿದ್ಧವಿದೆ. ಆದರೆ ಸಮಸ್ಯೆ ಉದ್ಭವಿಸಿರುವುದು ಏಜೆನ್ಸಿಗಳಿಂದ. ಅವರು ಕಾಲಕಾಲಕ್ಕೆ ಬಿಲ್ ನೀಡಿದರೆ ಸಹಜವಾಗಿ ವೇತನ ಬಿಡುಗಡೆ ಮಾಡಲಾಗುತ್ತದೆ~ ಎನ್ನುತ್ತಾರೆ.

ಆದರೆ ಏಜೆನ್ಸಿಗಳು ಹೇಳುವುದೇ ಬೇರೆ. `ಮಂಡಲಿಯಲ್ಲಿ ಸರಳವಾಗಿ ವೇತನ ಪ್ರಕ್ರಿಯೆ ನಡೆಯುವುದಿಲ್ಲ. ಹಣ ಬಿಡುಗಡೆಯಾದರೂ ವಿವಿಧ ಪ್ರಕ್ರಿಯೆಗಳನ್ನು ಅನುಸರಿಸಬೇಕು. ವೇತನವನ್ನು ನೇರವಾಗಿ ನೌಕರರಿಗೆ ತಲುಪಿಸುವ ಅಧಿಕಾರ ನಮಗಿಲ್ಲ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿ ಯರ್ ಅಥವಾ ಸಹಾಯಕ ಎಂಜಿನಿ ಯರ್‌ಗಳಿಗೆ ನಾವು ಹಣವನ್ನು ವರ್ಗಾಯಿಸುತ್ತೇವೆ. ಒಮ್ಮಮ್ಮೆ ಮಂಡಲಿಯಿಂದ ಬಿಲ್ ಆಗುವುದು ತಡವಾಗುತ್ತದೆ. ಆಗಲೂ ನೌಕರರು ಹಾಗೂ  ಏಜೆನ್ಸಿ ತೊಂದರೆ ಅನುಭವಿಸ ಬೇಕಾಗುತ್ತದೆ~ ಎನ್ನುತ್ತವೆ ಖಾಸಗಿ ಗುತ್ತಿಗೆ ಸಂಸ್ಥೆಯ ಮೂಲಗಳು.

ಮಂಡಲಿ ಹಾಗೂ ಏಜೆನ್ಸಿಗಳ ನಡುವಿನ ಸಮನ್ವಯತೆ ಕೊರತೆ ಯಿಂದಾಗಿ ಬಡವಾಗುತ್ತಿ ರುವುದು ಹೊರ ಗುತ್ತಿಗೆ ನೌಕರರು. ಸಿಬ್ಬಂದಿಯ ವೇತನ ಸಮಸ್ಯೆ ಪರಿಹರಿಸಲು ಉನ್ನತ ಅಧಿಕಾರಿಗಳು ಇನ್ನಾದರೂ ಆಸಕ್ತಿ ತೋರಬೇಕು ಎಂಬ ಒತ್ತಾಯ ಮಂಡಲಿಯಲ್ಲಿ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT