ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಯದ ವೈದ್ಯಕೀಯ ನೆರವು: ಆರೋಪ

Last Updated 14 ಜನವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ನಗರದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಡವರು ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ಬಿಬಿಎಂಪಿ ವತಿಯಿಂದ ಯಾವುದೇ ನೆರವು ದೊರೆಯದಂತಾಗಿದೆ. ಮೇಯರ್ ಅವರ ವೈದ್ಯಕೀಯ ಪರಿಹಾರ ನಿಧಿಯಡಿ ಬಿಡುಗಡೆಯಾಗಿರುವ 3.50 ಕೋಟಿ ರೂಪಾಯಿ ಈಗಾಗಲೇ ಖಾಲಿಯಾಗಿದ್ದು, ಮುಂದೆ ಅರ್ಹರಿಗೆ ಸೌಲಭ್ಯವೇ ದೊರೆಯದಂತಾಗಿದೆ~ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೇಯರ್ ವೈದ್ಯಕೀಯ ಪರಿಹಾರ ನಿಧಿಯಡಿ ಈವರೆಗೆ 3.50 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ 6,000 ರೂಪಾಯಿ ಮಾತ್ರ ಉಳಿದಿದೆ. ಆದರೆ ಈ ಹಣ ಅರ್ಹರಿಗೆ ತಲುಪಿಲ್ಲ ಎಂಬ ಶಂಕೆ ಮೂಡಿದೆ ಎಂದರು.

`ಪ್ರತಿ ಸದಸ್ಯರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ವೈದ್ಯಕೀಯ ಪರಿಹಾರ ಅನುದಾನ ನೀಡಲಾಗಿದೆ. ಆದರೆ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಸದಸ್ಯರ ವೈದ್ಯಕೀಯ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಬೇಕು~ ಎಂದು ಒತ್ತಾಯಿಸಿದರು.

ಆರ್‌ಎಸ್‌ಎಸ್ ಮಧ್ಯ ಪ್ರವೇಶಿಸಲಿ: `ರಾಜ್ಯ ಬಿಜೆಪಿ ಮುಖಂಡರಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಆರ್‌ಎಸ್‌ಎಸ್ ನಾಯಕರು ಮಧ್ಯಪ್ರವೇಶಿಸಿ ಬಿಕ್ಕಟ್ಟು ನಿವಾರಿಸುತ್ತಾರೆ. ಅದೇ ರೀತಿಯಲ್ಲಿ ಆರ್‌ಎಸ್‌ಎಸ್ ಮುಖಂಡರು ಪಾಲಿಕೆಗೆ ಬರಲಿ. ಮೇಯರ್ ಹಾಗೂ ಉಪಮೇಯರ್ ನಡುವಿನ ಭಿನ್ನಾಭಿಪ್ರಾಯ ನಿವಾರಿಸಲಿ~ ಎಂದು ವ್ಯಂಗ್ಯವಾಡಿದರು.

`ಆಡಳಿತ ಪಕ್ಷವು ಮೇಯರ್ ಪಿ.ಶಾರದಮ್ಮ ಅವರನ್ನು ನಿರ್ಲಕ್ಷಿಸಿದೆ. ಉಪ ಮೇಯರ್ ಎಸ್. ಹರೀಶ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ~ ಎಂದು ಆರೋಪಿಸಿದರು.

`ಮಹದೇವಪುರ ವಲಯದಲ್ಲಿ ಇತ್ತೀಚೆಗೆ ಸಮನ್ವಯ ಸಭೆ ನಡೆಸಿ ಮಳೆ ನೀರು ಕಾಲುವೆ ಅಭಿವೃದ್ಧಿಗೆ 53 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಂಡು ಕೆಎಂಸಿ ಕಾಯ್ದೆ ಉಲ್ಲಂಘಿಸಿದ್ದಾರೆ. ಅವರ ವರ್ತನೆಗೆ ಕಡಿವಾಣ ಹಾಕಲಿ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT