ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಈಗ ಡಾ. ದೋನಿ

Last Updated 30 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಲೀಸ್ಟರ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಇಲ್ಲಿನ ಪ್ರತಿಷ್ಠಿತ ಡೇ ಮೌಂಟ್‌ಫೋರ್ಟ್ ವಿಶ್ವವಿದ್ಯಾಲಯ `ಗೌರವ ಡಾಕ್ಟರೇಟ್~ ನೀಡಿದೆ.

ಅತ್ಯುತ್ತುಮ ನಾಯಕತ್ವ ಗುಣ ಹೊಂದಿರುವ ದೋನಿ, ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಜಯಿಸಿ ಕೊಟ್ಟಿದ್ದಾರೆ. ಆದ್ದರಿಂದ ಅವರಿಗೆ ಈ ಗೌರವ ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ದೋನಿ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಐಸಿಸಿ ಟ್ವೆಂಟಿ- 20 ಚಾಂಪಿಯನ್‌ಷಿಪ್, 2007-08ರಲ್ಲಿ ಕಾಮನ್‌ವೆಲ್ತ್ ಏಕದಿನ ಸರಣಿ ಜಯಿಸಿದೆ. 2008 ಹಾಗೂ 09ನೇ ಸಾಲಿನಲ್ಲಿ ದೋನಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.
 
`ಇದೊಂದು ಅಮೂಲ್ಯವಾದ ಕ್ಷಣ. ಈ ಗೌರವ ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ. ಡಾಕ್ಟರೇಟ್ ಸಿಗುತ್ತಿರುವುದು ಕೇವಲ ನನಗಲ್ಲ. ನಾನು ಸಾಧನೆ ಮಾಡಲು ನೆರವಾದ ಇಡೀ ಭಾರತ ತಂಡಕ್ಕೆ~ ಎಂದು ಡಾ. ದೋನಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT