ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೋನಿ ರನ್‌ಔಟ್ ಫಲಿತಾಂಶ ಬದಲಾಯಿಸಬಹುದು'

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನಾಗಪುರ: `ಕೊಹ್ಲಿ ಹಾಗೂ ದೋನಿ ಐದು ಗಂಟೆಗೂ ಹೆಚ್ಚು ಸಮಯ ಒಟ್ಟಿಗೆ ಆಡಿದ ರೀತಿ ಅದ್ಭುತ. ಏಕೆಂದರೆ ಈ ಪಿಚ್‌ನಲ್ಲಿ ಆ ರೀತಿ ಆಡುವುದು ಕಷ್ಟ. ಆದರೆ ನಾವು ವಿಶ್ವಾಸ ಕಳೆದುಕೊಳ್ಳಲಿಲ್ಲ. ಅದು ದಿನದಾಟದ ಅಂತ್ಯಕ್ಕೆ ಫಲ ನೀಡಿತು' ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಜೊನಾಥನ್ ಟ್ರಾಟ್ ನುಡಿದರು.

`ಕೊಹ್ಲಿ ಹಾಗೂ ದೋನಿ ನಡುವಿನ ಜೊತೆಯಾಟ ಬೇರ್ಪಡಿಸಲು ತುಂಬಾ ಕಷ್ಟಪಡಬೇಕಾಯಿತು. ಆದರೆ ದಿನದಾಟ ಮುಗಿಯಲು ಕೆಲವೇ ನಿಮಿಷ ಇದ್ದಾಗ ದೋನಿ ಅವರನ್ನು ರನ್‌ಔಟ್ ಮಾಡಿದ್ದು ಪಂದ್ಯವನ್ನು ನಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಾಗಿದೆ. ಅವರ ರನ್‌ಔಟ್ ಈ ಪಂದ್ಯ ಗೆಲ್ಲಲು ನಮಗೆ ಸಹಾಯವಾಗಬಹುದು. ಜೊತೆಗೆ ಸರಣಿಯ ಫಲಿತಾಂಶ ಬದಲಾಯಿಸಬಹುದು ಎಂಬ ವಿಶ್ವಾಸ ನಮಗಿದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT