ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಬೆಳೆಯುವ ಪ್ರದೇಶ: ಕಾವೇರಿ ಕಣಿವೆಗೆ ಮಾನ್ಯತೆ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು - ಬೆಂಗಳೂರು ಮಧ್ಯೆ  ಇರುವ ಕಾವೇರಿ ನದಿ ಹರಿಯುವ ಪ್ರದೇಶದಲ್ಲಿ ಅಲ್ಪೈನ್ ವೈನರೀಸ್ ಆರಂಭವಾದ ನಾಲ್ಕು ವರ್ಷಗಳಲ್ಲಿಯೇ ಕಾವೇರಿ ಕಣಿವೆ ಪ್ರದೇಶವನ್ನು ದ್ರಾಕ್ಷಿ ಬೆಳೆಯುವ ಪ್ರದೇಶ ಎಂದು ರಾಜ್ಯ ಸರ್ಕಾರ ಮಾನ್ಯತೆ ನೀಡಿರುವುದನ್ನು ಅಲ್ಪೈನ್ ವೈನರೀಸ್ ಸ್ವಾಗತಿಸಿದೆ.

ಸರ್ಕಾರ ಕೈಗೊಂಡ ನಿರ್ಧಾರವು ಸಂಸ್ಥೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅಲ್ಪೈನ್ ವೈನರೀಸ್ ಪ್ರತಿಕ್ರಿಯಿಸಿದೆ. ದ್ರಾಕ್ಷಾರಸ ತಯಾರಿಕೆಯಲ್ಲಿ ಸಂಸ್ಥೆಯು ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿರುವುದಕ್ಕೆ ಮತ್ತು ದೇಶಿ ವೈನ್ ಉದ್ಯಮಕ್ಕೆ ಹೊಸ ಆಯಾಮ ನೀಡುತ್ತಿರುವುದಕ್ಕೂ ಇದು ನಿದರ್ಶನವಾಗಿದೆ ಎಂದು ಸಂಸ್ಥೆ ಹೇಳಿದೆ.

ದ್ರಾಕ್ಷಾರಸ ಉತ್ಪಾದನೆ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು, ದ್ರಾಕ್ಷಾರಸ ಬೆಳೆಯಲು ಸೂಕ್ತವಾದ ಪ್ರದೇಶಗಳನ್ನು  `ನಂದಿ ಕಣಿವೆ, ಕೃಷ್ಣಾ ಕಣಿವೆ  ಎಂದು ಘೋಷಿಸಿತ್ತು. ರೈತರಿಗೆ ಪ್ರೋತ್ಸಾಹ ನೀಡಲು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನೂ ಈಗ `ಕಾವೇರಿ ಕಣಿವೆ~ ಎಂದೂ ಸರ್ಕಾರ ಘೋಷಿಸಿದೆ.

ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಮತ್ತು ದ್ರಾಕ್ಷಾರಸ ತಯಾರಿಸುವ ಉದ್ದಿಮೆಗಳಿಗೆ ಹಲವಾರು ಪ್ರಯೋಜನಗಳು ದೊರೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT