ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್ ಎಂಬ ಆಪತ್ಕಾಲದ ಟಾರ್ಚ್

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಯಶಸ್ವಿ ವ್ಯಕ್ತಿಗಳು ಬೇರೆಯವರು ತಮ್ಮ ಮೇಲೆ ಎಸೆದ ಇಟ್ಟಿಗೆಗಳಿಂದಲೇ ಸುಭದ್ರ ಅಡಿಪಾಯ ಕಟ್ಟಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಈ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡರು.
 
ಏಕದಿನ ಕ್ರಿಕೆಟ್‌ಗೆ ರಾಹುಲ್ ಸೂಕ್ತ ವ್ಯಕ್ತಿ ಅಲ್ಲ ಎನ್ನುತ್ತಿದ್ದರು. ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ನೆನಪಾಗುತ್ತಿದ್ದದ್ದು ಈ ದ್ರಾವಿಡ್.


`ಯಾವಾಗಲೂ ಬದ್ಧತೆ ಉಳಿಸಿಕೊಳ್ಳಿ. 100ರಷ್ಟು ಪ್ರಯತ್ನ ಹಾಕಿ. ಯಶಸ್ಸು ಖಂಡಿತ ಸಿಗುತ್ತೆ. ಅದು ಕೆಲವರಿಗೆ ನಿಧಾನ, ಇನ್ನು ಕೆಲವರಿಗೆ ಬೇಗ ಸಿಗುತ್ತೆ ಅಷ್ಟೆ. ಆದರೆ ಅದು ಖಂಡಿತ ಸಿಕ್ಕೇಸಿಗುತ್ತೆ~

ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಈ ರೀತಿ ಒಂದು ಮಾತು ಹೇಳಿದ್ದರು. ಆ ಮಾತಿಗೆ ಸರಿಯಾಗಿ ನಡೆದುಕೊಂಡವರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು.
ಟೆಸ್ಟ್‌ಗೆ ಹೊಸ ಭಾಷ್ಯ ಬರೆದ ಈ ಆಟಗಾರನ ಏಕದಿನ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ.

ಇನ್ನು ಏಕದಿನ ಉಡುಪಿನಲ್ಲಿ ಅವರನ್ನು ನಾವು ಕಾಣಲು ಸಾಧ್ಯವಿಲ್ಲ. ನಿಜ, ಟೆಸ್ಟ್‌ನಲ್ಲಿ ಸಿಕ್ಕ ಮೆಚ್ಚುಗೆ ಏಕದಿನ ಕ್ರಿಕೆಟ್‌ನಲ್ಲಿ ಅವರಿಗೆ ಸಿಗಲಿಲ್ಲ. ಬದಲಾಗಿ ಪ್ರತಿ ಹಂತದಲ್ಲೂ ಅವರು ತಮ್ಮ ಸಾಮರ್ಥ್ಯ ತೋರಿಸುತ್ತಾ ಸಾಗಬೇಕಾಯಿತು. ದಾರಿಯುದ್ದಕ್ಕೂ ಟೀಕೆಗಳನ್ನು ಎದುರಿಸಿ ನಿಲ್ಲಬೇಕಾಯಿತು.

`ಟೆಸ್ಟ್‌ಗಿಂತ ಏಕದಿನ ಕ್ರಿಕೆಟ್‌ಗೆ ನಾನು ಹೆಚ್ಚು ಶ್ರಮ ಹಾಕಬೇಕಾಯಿತು~ ಎಂದು ದ್ರಾವಿಡ್ ಹೇಳಿರುವ ಮಾತೇ ಅದಕ್ಕೆ ಸಾಕ್ಷಿ.ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ಹಾಗೂ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. 

ವೇಗದ ಬೌಲರ್‌ಗಳಿಗೆ ನೆರವಾಗುವ ವಿದೇಶದ ಪಿಚ್‌ಗಳಲ್ಲಿ ತಂಡವನ್ನು ಮುಜುಗರದಿಂದ ಪಾರು ಮಾಡಲು ಇವರಿಗೆ ರಾಹುಲ್ ಬೇಕಾಗುತಿತ್ತು. ಹಾಗಾಗಿಯೇ `ವಿದ್ಯುತ್ ಕೈಕೊಟ್ಟಾಗ ಕೈಗೆ ಸಿಗುತಿದ್ದ ಟಾರ್ಚ್ ಈ ದ್ರಾವಿಡ್~ ಎನ್ನಲಾಗುತ್ತದೆ.

ಹಾಗೇ, ತಂಡದಲ್ಲಿ ಯಾರಾದರೂ ಗಾಯಗೊಂಡಾಗ ನಾಯಕನಿಗೆ ನೆನಪಾಗುತ್ತ್ದ್ದಿದದ್ದು    ದ್ರಾವಿಡ್. ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸುತ್ತಿದ್ದರು.
 
ಒತ್ತಡದ ಸನ್ನಿವೇಶದಲ್ಲಿ ಕೆಳ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಬಂದ ಉದಾಹರಣೆ ಇದೆ. ತಮ್ಮ ಎಂದಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮಾನಸಿಕವಾಗಿ ಸಜ್ಜಾಗಿರುತ್ತಿದ್ದ ಅವರಿಗೆ ಇದು ಕೊಂಚ ಕಿರಿಕಿರಿ ಎನಿಸುತಿತ್ತು.

ಆದರೆ ತಂಡದ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಹಾಗೇ, ಫೈನಲ್ ತಲುಪಿದ್ದ 2003ರ ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು.

ದ್ರಾವಿಡ್ ಕ್ರಿಕೆಟ್ ಜೀವನ ಎಂಬುದು ಒಂದು ಚುಕ್ಕೆಯೂ ಇಲ್ಲದ ಬಿಳಿ ಹಾಳೆ ಎನ್ನಬಹುದು. ಅವರದ್ದು ಸ್ವಾರ್ಥ ರಹಿತ ಆಟ. ಸಚಿನ್    ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗಬಹುದು.

ಆದರೆ ದ್ರಾವಿಡ್ ಕ್ರೀಸ್‌ನಲ್ಲಿದ್ದಾಗ ಏನೋ ಒಂಥರಾ ಭರವಸೆ. `ದ್ರಾವಿಡ್ ಜನಿಸಿದ್ದು ಟೆಸ್ಟ್ ಆಡಲು. ಆದರೆ ಏಕದಿನ ಕ್ರಿಕೆಟ್‌ಗೂ ಹೊಂದಿಕೊಂಡರು~ ಎಂಬ ಮಾತು ಸತ್ಯ.
ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ ಎಷ್ಟು ಸಲ ಯಾತನದಾಯಕ ಕ್ಷಣಗಳನ್ನು ಎದುರಿಸಿಲ್ಲ ಹೇಳಿ? ಕಾರಣ ಹೇಳದೇ ಅವರನ್ನು ಕೈಬಿಡಲಾಗುತಿತ್ತು.

ಆದರೆ ಪ್ರತಿ ಬಾರಿ ಫಿನಿಕ್ಸ್‌ನಂತೆ ಎ್ದ್ದದು ಬರುತಿದ್ದರು. `ನೀವು ನನ್ನನ್ನು ಕೈಬಿಟ್ಟಿದ್ದು ತಪ್ಪು~ ಎಂಬುದನ್ನು ತಮ್ಮ ಪ್ರದರ್ಶನದ ಮೂಲಕವೇ ಹೇಳುತ್ತಿದ್ದರು. ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ರಾವಿಡ್ ಏಳನೇ ಸ್ಥಾನದಲ್ಲಿದ್ದಾರೆ.

ಅದೇ ಅವರ ಶ್ರೇಷ್ಠತೆಗೆ ಸಾಕ್ಷಿ. `ಏಕದಿನ ಕ್ರಿಕೆಟ್‌ನಲ್ಲಿ ಇಷ್ಟು ಸಾಧನೆ ಮಾಡುತ್ತೇನೆ ಎಂಬುದು ಖಂಡಿತ ನನಗೆ ಗೊತ್ತಿರಲಿಲ್ಲ~ ಎನ್ನುತ್ತಾರೆ ಬೆಂಗಳೂರಿನ ಈ ಬ್ಯಾಟ್ಸ್‌ಮನ್.

ಆಡಿದ್ದು ಏಕೈಕ ಟ್ವೆಂಟಿ-20 ಪಂದ್ಯ. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಎತ್ತಿ ಮಿಂಚಿದರು. ಅದು ಟೀಕಾಕಾರರಿಗೆ ನೀಡಿದ ಉತ್ತರ ಕೂಡ. `ಒಬ್ಬ ವ್ಯಕ್ತಿ ಯಾವ ರೀತಿ ಶಿಖರವೇರಿದ ಎಂಬುದು ಯಶಸ್ಸು ಆಗಲಾರದು.

ಕೆಳಗೆ ಬಿದ್ದಾಗ ಮತ್ತೆ ಮೇಲೆದ್ದು ನಿಲ್ಲುವುದಕ್ಕೆ ನಡೆಸುವ ಪ್ರಯತ್ನವಿದೆಯಲ್ಲ, ಅದು ನಿಜವಾದ ಯಶಸ್ಸು~ ಎನ್ನುವ ನುಡಿಯನ್ನು ದ್ರಾವಿಡ್ ಕ್ರಿಕೆಟ್ ಜೀವನಕ್ಕೆ ಅನ್ವಯಿಸಬಹುದು.

ದ್ರಾವಿಡ್ ಏಕದಿನ ಕ್ರಿಕೆಟ್‌ಗೆ 1996ರಲ್ಲಿ ಶ್ರೀಲಂಕಾ ಎದುರು ಪದಾರ್ಪಣೆ ಮಾಡಿದ್ದರು. 344 ಏಕದಿನ ಪಂದ್ಯಗಳಿಂದ 10889 ರನ್ ಗಳಿಸಿದ್ದಾರೆ. ಅದರಲ್ಲಿ 12 ಶತಕ ಹಾಗೂ 83 ಅರ್ಧ ಶತಕಗಳು ಸೇರಿವೆ.

ಎರಡು ಬಾರಿ 300ಕ್ಕೂ ಅಧಿಕ ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡ್ದ್ದಿದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ. ಟೆಸ್ಟ್ ಪರಿಣತ ರಾಹುಲ್ ಒಮ್ಮೆ 22 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದು ವಿಶೇಷ.
 
79 ಏಕದಿನ ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಸಚಿನ್‌ಗಿಂತ ಯಶಸ್ವಿ ಬ್ಯಾಟ್ಸ್‌ಮನ್ ಈ `ವಾಲ್~.

ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಗಿದ ಏಕದಿನ ಸರಣಿಗೆ ಆಯ್ಕೆ ಆದಾಗ ದ್ರಾವಿಡ್‌ಗೆ ಅಚ್ಚರಿಯಾಗಿತ್ತು. ಇದೇ ಅವಕಾಶ ಬಳಸಿಕೊಂಡ ಅವರು `ಇದೇ ನನ್ನ ಕೊನೆಯ ಏಕದಿನ ಸರಣಿ~ ಎಂದರು.

ಅದಕ್ಕೂ ಮುನ್ನ 2009ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ಎದುರು ಅವರು ಕೊನೆಯ ಪಂದ್ಯ ಆಡಿದ್ದರು. ವಿಶೇಷವೆಂದರೆ ಆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೂಡ ಎರಡು ವರ್ಷಗಳ ಬಳಿಕ ವಾಪಸಾಗಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆಡಿದ್ದು ಎರಡು ಸರಣಿಗಳಲ್ಲಿ ಮಾತ್ರ. ಆಗಲೇ ಅವರ ಏಕದಿನ ಬದುಕು ಬಹುತೇಕ ಅಂತ್ಯಗೊಂಡಿತ್ತು. ಅದಕ್ಕೆ ಈಗ ಅಧಿಕೃತವಾಗಿ ತೆರೆ ಎಳೆದಿದ್ದಾರೆ ಅಷ್ಟೆ.

ಒಂದು ಕೊರಗು ಎಂದರೆ ದ್ರಾವಿಡ್ ಅವರಂತಹ ನಂಬಿಕಸ್ತ ಬ್ಯಾಟ್ಸ್‌ಮನ್ ಈಗ  ಕಾಣುತ್ತಿಲ್ಲ. ಅದೇನೇ ಇರಲಿ, ಏಕದಿನ ಹಾಗೂ ಟೆಸ್ಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಪೇರಿಸಿರುವ ದ್ರಾವಿಡ್ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರ ಆಟವನ್ನು ಇನ್ನು ಟೆಸ್ಟ್‌ನಲ್ಲಿ ಸವಿಯೋಣ...
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT