ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್ ಏಕದಿನ ಆಟಕ್ಕೆ ತೆರೆ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಾರ್ಡಿಫ್: ತಾನೊಬ್ಬ ಶ್ರೇಷ್ಠ ಬ್ಯಾಟ್ಸ್ ಮನ್ ಏಕೆ ಎಂಬುದನ್ನು ರಾಹುಲ್ ದ್ರಾವಿಡ್ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯದಲ್ಲೂ ತೋರಿಸಿಕೊಟ್ಟರು. ಏಕದಿನ ಕ್ರಿಕೆಟ್‌ನ ಕಟ್ಟಕಡೆಯ ಇನಿಂಗ್ಸ್‌ನಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ 69 ರನ್ ಗಳಿಸಿದರು. 

ಇಂಗ್ಲೆಂಡ್ ವಿರುದ್ಧ ಕಾರ್ಡಿಫ್‌ನಲ್ಲಿ ಶುಕ್ರವಾರ ನಡೆದ ಪಂದ್ಯದೊಂದಿಗೆ ದ್ರಾವಿಡ್ ಏಕದಿನ ಕ್ರಿಕೆಟ್ ಜೀವನಕ್ಕೆ ತೆರೆಬಿತ್ತು. ಕರ್ನಾಟಕದ ಬ್ಯಾಟ್ಸ್‌ಮನ್ ಅಂತಿಮ ಇನಿಂಗ್ಸ್ ಆಡಲು ಕ್ರೀಸ್‌ನತ್ತ ಹೆಜ್ಜೆಯಿಟ್ಟಾಗ  ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರು ಎದ್ದುನಿಂತು ಗೌರವ ಸಲ್ಲಿಸಿದರು.

ತಾನು ಕೊನೆಯ ಪಂದ್ಯ ಆಡುತ್ತಿದ್ದೇನೆ ಎಂಬ ಒತ್ತಡ ದ್ರಾವಿಡ್ ಅವರನ್ನು ಕಾಡಲಿಲ್ಲ. ಎಂದಿನಂತೆ ಕಲಾತ್ಮಕ ಇನಿಂಗ್ಸ್ ಕಟ್ಟಿದರು. ನಿಗದಿತ ಓವರ್‌ಗಳ ಪಂದ್ಯವನ್ನಾಡುವ ಸಾಮರ್ಥ್ಯ ನನ್ನಲ್ಲಿ ಇನ್ನೂ ಇದೆ ಎಂಬುದನ್ನು ಈ ಇನಿಂಗ್ಸ್ ಮೂಲಕ ತೋರಿಸಿಕೊಟ್ಟರು.

ಸ್ವಾನ್ ಬೌಲಿಂಗ್‌ನಲ್ಲಿ ದ್ರಾವಿಡ್ ಕ್ಲೀನ್‌ಬೌಲ್ಡ್ ಆದರು. ಔಟಾಗಿ ಪೆವಿಲಿಯನ್‌ಗೆ ಮರಳುವ ಸಂದರ್ಭ ಸ್ವಾನ್ ಒಳಗೊಂಡಂತೆ ಇಂಗ್ಲೆಂಡ್‌ನ ಆಟಗಾರರು ಅವರಿಗೆ ಹಸ್ತಲಾಘವ ನೀಡಿದರು.

ದ್ರಾವಿಡ್ 344 ಪಂದ್ಯಗಳಿಂದ 10,889 ರನ್ ಪೇರಿಸಿದ್ದಾರೆ. 12 ಶತಕ ಹಾಗೂ 83 ಅರ್ಧಶತಕ ಇದರಲ್ಲಿ ಒಳಗೊಂಡಿವೆ. ಒಂದೂವರೆ ದಶಕದ ಏಕದಿನ ಕ್ರಿಕೆಟ್ ಜೀವನದಲ್ಲಿ ಹಲವು ಸ್ಮರಣೀಯ ಇನಿಂಗ್ಸ್‌ಗಳು ಅವರಿಂದ ದಾಖಲಾಗಿವೆ. ಏಕದಿನ ಪಂದ್ಯಗಳಲ್ಲಿ ಇನ್ನು ಭಾರತ ತಂಡಕ್ಕೆ `ಗೋಡೆ~ಯ ಬಲ ದೊರೆಯದು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸೇವೆ ಮುಂದುವರಿಯಲಿದೆ.

ದ್ರಾವಿಡ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಏಕದಿನ ಪಂದ್ಯ ಆಡಿರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT