ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದ್ರೋಹವಾಗದಂತೆ ಆಡಳಿತ ನಡೆಸಿ'

Last Updated 27 ಡಿಸೆಂಬರ್ 2012, 10:05 IST
ಅಕ್ಷರ ಗಾತ್ರ

ಹುಣಸಗಿ: ಸುರಪುರ ಮತಕ್ಷೇತ್ರದ ವಿವಿಧ ಹೋಬಳಿಗಳು ದೇಹದ ಇತರರ ಭಾಗಗಳಾದರೆ ಹುಣಸಗಿ ಹೃದಯ ಭಾಗವಿದ್ದಂತೆ. ಹೃದಯ ಇತರ ಭಾಗಗಳಿಗೆ ಶುದ್ಧ ರಕ್ತ ಕಳಿಸಿ ಆರೋಗ್ಯ ಕಾಪಾಡುವಂತೆ ಮಾಡುತ್ತದೆ. ಮತದಾರರು  ಭರವಸೆ ಇಟ್ಟು ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದಾರೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ನುಡಿದರು.

ಬುಧವಾರ ಹುಣಸಗಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಸುರೇಶ ನೀರಲಗಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಕೇವಲ 6 ಸದಸ್ಯರಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅಚ್ಚರಿ ಫಲಿತಾಂಶವನ್ನು ಹುಣಸಗಿ ಸದಸ್ಯರು ನೀಡಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಕೋಟಿ ನಮಸ್ಕಾರ ಎಂದರು.

ಜನತೆ ಹೊಸತನಕ್ಕಾಗಿ ಕಾಯುತ್ತಿದ್ದಾರೆ ಅದಕ್ಕೆ ಹುಣಸಗಿ ಗ್ರಾಮ ಪಂಚಾಯಿತಿ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು.
ಅಧ್ಯಕ್ಷ ಸುರೇಶ ನೀರಲಗಿ ಮಾತನಾಡಿ, ಹಿರಿಯ ಮಾರ್ಗದರ್ಶನದಲ್ಲಿ ್ನ ಅಧಿಕಾರವಧಿಯಲ್ಲಿ ಒಳ್ಳೆಯ ಆಡಳಿತ ನಡೆಸುತ್ತೇನೆ. ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡುತ್ತೇನೆಂದು ತಿಳಿಸಿದರು.

ಸೂಲಪ್ಪ ಕಮತಗಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಎಪಿಎಂಸಿ ತಿಪ್ಪರಾಜಗೌಡ ಬಾಚಿಮಟ್ಟಿ, ಸದಸ್ಯರಾದ ಸೂಗಪ್ಪ ಚಂದಾಬಾಬು ಚೌದ್ರಿ, ಮಲ್ಲು ಹೆಬ್ಬಾಳ, ಬಸವರಾಜ, ನಾನಾಗೌಡ ಪಾಟೀಲ, ಶರಣಗೌಡ ವಜ್ಜಲ ಶಿವನಗೌಡ ಚನ್ನೂರ, ಬಸವರಾಜ ಸಜ್ಜನ,  ಮಲ್ಲಣ್ಣ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT