ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು; ಕಂಚಿಕೆರೆ ಸರ್ಕಾರಿ ಕಾಲೇಜು ಶತ ಸಾಧನೆ

Last Updated 25 ಮೇ 2012, 6:00 IST
ಅಕ್ಷರ ಗಾತ್ರ

ದಾವಣಗೆರೆ: ಪಿಯು ಫಲಿತಾಂಶದಲ್ಲಿ ಹರಪನಹಳ್ಳಿ ತಾಲ್ಲೂಕು ಕಂಚಿಕೆರೆ ಸರ್ಕಾರಿ ಪಿಯು ಕಾಲೇಜು ಶೇ 100 ಫಲಿತಾಂಶ ಸಾಧಿಸಿದೆ. ಈ ಕಾಲೇಜಿನಿಂದ  ಪರೀಕ್ಷೆಗೆ ಹಾಜರಾದ ಕಲಾವಿಭಾಗದ ಎಲ್ಲ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12 ಪ್ರಥಮ, 5 ಮಂದಿ ದ್ವಿತೀಯ ಹಾಗೂ 6 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಗೆ ಪ್ರಥಮ

ಕಲಾ ವಿಭಾಗದಲ್ಲಿ ಹರಪನಹಳ್ಳಿ ಎಸ್‌ಯುಜೆಎಂ ಪಿಯು ಕಾಲೇಜಿನ ವಾಣಿ ವಾಲಿ ಹಾಗೂ ಅದೇ ಕಾಲೇಜಿನ ಗಾಯತ್ರಿ ದಬ್ಬಗಳ್ಳಿ ಅವರು ತಲಾ 561(ಶೇ 93.5) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರೆ, ಇದೇ ತಾಲ್ಲೂಕಿನ ಶಿಂಗ್ರಿಹಳ್ಳಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಡಿ.ಎಂ.ವಿ ಮಂಜುಳಾ 559 (ಶೇ 93.1) ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ  ಹರಿಹರದ ಸಂತ ಅಲೋಷಿಯಸ್ ಪಿಯು ಕಾಲೇಜಿನ ಪಿ.ಕೆ. ರಜನಿ 567(ಶೇ 94.5) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ ಇದೇ ವಿಭಾಗದಲ್ಲಿ  ದಾವಣಗೆರೆ ಎಸ್‌ಟಿಜೆ ಕಾಲೇಜಿನ ಕೆ.ಆರ್ ಪೂಜಾ ಹಾಗೂ ಹಳೇ ಕುಂದುವಾಡ ಸರ್ಕಾರಿ ಪಿಯು ಕಾಲೇಜಿನ ಎಚ್. ನೇತ್ರಾವತಿ ತಲಾ 562 (ಶೇ 93.6) ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ನಗರದ ತರಳಬಾಳು ಜಗದ್ಗುರು ಪಿಯು ಕಾಲೇಜಿನ ಅಭಿಷೇಕ್ ಎಸ್. ಗೌಡರ್ 583(ಶೇ 97.1) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರೆ, ಅನುಭವ ಮಂಟಪ ಪಿಯು ಕಾಲೇಜಿನ ಪ್ರಫುಲ್ ಎನ್. ಕುಲಕರ್ಣಿ 581 (ಶೇ 96.83) ಅಂಕ ಗಳಿಸಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 

ಸರ್ ಎಂ.ವಿ. ಕಾಲೇಜು:  ನಗರದ ಸರ್‌ಎಂ.ವಿ. ಕಾಲೇಜಿಗೆ  ಶೇ 94 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 205 ವಿದ್ಯಾರ್ಥಿಗಳಲ್ಲಿ 192 ಮಂದಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಬಿ.ಪಿ. ಪೂಜಾ 579 (ಶೇ 96.51), ಶ್ರೇಯಸ್ ವಿ. ಹಂಡೆ 576(ಶೇ 96), ಅನುಷಾ ಜಿ. ಕಡೆಮನೆ 563(ಶೇ 93.84) ಅಂಕ ಗಳಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ 34 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 100 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲ ಡಾ.ವಿ. ರಾಜೇಂದ್ರ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋತಿವೀರಪ್ಪ ಸರ್ಕಾರಿ ಪಿಯು ಕಾಲೇಜು: ನಗರದ ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ 57 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಕೆ.ಎನ್. ಲಿಂಗರಾಜಪ್ಪ 544( ಶೇ 90.5), ಕಲಾ ವಿಭಾಗದಲ್ಲಿ  ಟಿ. ಕೀರ್ತಿಕುಮಾರ್ 542 (ಶೇ 90), ಎಸ್.ಆರ್. ಸುಕನ್ಯಾ 511( ಶೇ 85) ಅಂಕ ಗಳಿಸಿದ್ದಾರೆ. 135 ಮಂದಿ ಪ್ರಥಮ, 114 ಮಂದಿ ದ್ವಿತೀಯ, 65 ಮಂದಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲ ಜಿ.ಬಿ. ಚಂದ್ರಶೇಖರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶ: ಜಿಲ್ಲೆಯಿಂದ ಪರೀಕ್ಷೆ ಬರೆದ ಒಟ್ಟು 21,37 ವಿದ್ಯಾರ್ಥಿಗಳ ಪೈಕಿ 11,941 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆ ಶೇ 56.76 ಫಲಿತಾಂಶ ದಾಖಲಿಸಿದೆ. ಪ್ರಥಮಬಾರಿಗೆ ಪರೀಕ್ಷೆ ಬರೆದ 15,578 ವಿದ್ಯಾರ್ಥಿಗಳ ಪೈಕಿ 10,431(ಶೇ 66.96) ಮಂದಿ ಉತ್ತೀರ್ಣರಾಗಿದ್ದಾರೆ. ಮರು ಪರೀಕ್ಷೆ ಬರೆದ 4,814 ವಿದ್ಯಾರ್ಥಿಗಳ ಪೈಕಿ 1,310(ಶೇ 21.21) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದ 645 ವಿದ್ಯಾರ್ಥಿಗಳ ಪೈಕಿ 200 (ಶೇ 31.01) ಮಂದಿ ಉತ್ತೀರ್ಣರಾಗಿದ್ದಾರೆ.

ಬಾಲಕಿಯರೇ ಮೇಲುಗೈ

11,323 ಬಾಲಕರ ಪೈಕಿ  5,959( ಶೇ 52.63) ಮಂದಿ, 9,714 ಬಾಲಕಿಯರ ಪೈಕಿ 5,982 (ಶೇ 61.58) ಮಂದಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು ಫಲಿತಾಂಶ

ಕಲಾವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 10,996 ವಿದ್ಯಾರ್ಥಿಗಳ ಪೈಕಿ 6,045 (ಶೇ 54.97) ಮಂದಿ, ವಾಣಿಜ್ಯ ವಿಭಾಗದಿಂದ ಹಾಜರಾದ 3,659 ವಿದ್ಯಾರ್ಥಿಗಳ ಪೈಕಿ 2,309 (63.1) ವಿಜ್ಞಾನ ವಿಭಾಗದಿಂದ ಹಾಜರಾದ 6,382 ವಿದ್ಯಾರ್ಥಿಗಳ ಪೈಕಿ 3,857 (56.2) ಮಂದಿ ತೇರ್ಗಡೆಯಾಗಿದ್ದಾರೆ.

ನಗರ ಪ್ರದೇಶದಿಂದ ಹಾಜರಾದ 16,678 ವಿದ್ಯಾರ್ಥಿಗಳ ಪೈಕಿ 9,402 (ಶೇ 56.37), ಗ್ರಾಮೀಣ ಪ್ರದೇಶದಿಂದ ಹಾಜರಾದ 4,359 ವಿದ್ಯಾರ್ಥಿಗಳ ಪೈಕಿ 2,539 (58.25) ಮಂದಿ ತೇರ್ಗಡೆಯಾಗಿದ್ದಾರೆ.

ಹೊನ್ನಾಳಿ ವರದಿ

ಇಲ್ಲಿನ ಹಿರೇಕಲ್ಮಠದ ಚನ್ನಪ್ಪ ಸ್ವಾಮಿ ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಎಂ.ಎಸ್. ಗೀತಾ 543 ಅಂಕ ಗಳಿಸಿದ್ದಾರೆ.
ಭೌತಶಾಸ್ತ್ರ 96, ರಸಾಯನ ಶಾಸ್ತ್ರ 93, ಗಣಿತ ಶಾಸ್ತ್ರ 89 ಮತ್ತು ಜೀವಶಾಸ್ತ್ರ 94 ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಎಂ.ಎಸ್. ಗೀತಾ ಅವರನ್ನು ವಿದ್ಯಾಪೀಠದ ಅಧ್ಯಕ್ಷರಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ - ನಿರ್ದೇಶಕರು, ಕಾಲೇಜಿನ ಬೋಧಕ ಸಿಬ್ಬಂದಿ, ಪೋಷಕರು ಅಭಿನಂದಿಸಿದ್ದಾರೆ.

ಹರಿಹರ ವರದಿ

ನಗರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪದವಿಪೂರ್ವ ಕಾಲೇಜಿಗೆ 2012ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ 85.39ರಷ್ಟು ಫಲಿತಾಂಶ ಲಭಿಸಿದೆ.

ಕಲಾ ವಿಭಾಗದಿಂದ 152, ವಾಣಿಜ್ಯ ವಿಭಾಗದಿಂದ 74, ಒಟ್ಟು 226 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಕಲಾ ವಿಭಾಗದಿಂದ 128, ವಾಣಿಜ್ಯ ವಿಭಾಗದಿಂದ 65, ಒಟ್ಟು 193 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಎಂ. ದಿವ್ಯಶ್ರೀ  ಶೇ 91.83 ಎಸ್. ಅಶ್ವಿನಿ  ಶೇ 88.83 ಟಿ.ಡಿ. ಅಂಬಿಕಾ ಶೇ 87.83 ಎಂ. ಪೂಜಾ ಶೇ 85.83 ಹಾಗೂ ಕಲಾ ವಿಭಾಗದಿಂದ ಎಸ್.ಜಿ. ವಿದ್ಯಾ ಶೇ 86ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚನ್ನಗಿರಿ ವರದಿ

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದೆ.

ಮಣ್ಣಮ್ಮ ಸ್ವತಂತ್ರ ಪದವಿ ಪೂರ್ವ ಕಾಲೇಜು: ಪಟ್ಟಣದ ಈ ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ 167 ವಿದ್ಯಾರ್ಥಿಗಳಲ್ಲಿ 99  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದರಲ್ಲಿ ಉನ್ನತಶ್ರೇಣಿ 2, ಪ್ರಥಮ ದರ್ಜೆ 51, ದ್ವಿತೀಯ ದರ್ಜೆ 23, ತೃತೀಯ ದರ್ಜೆಯಲ್ಲಿ 26 ವಿದ್ಯಾರ್ಥಿಗಳು ಪಾಸಾಗಿ ಶೇ. 60ರಷ್ಟು ಫಲಿತಾಂಶ ಬಂದಿರುತ್ತದೆ. ಪಿ. ಆಶಾ ಎಂಬ ವಿದ್ಯಾರ್ಥಿನಿ 521 ಅಂಕ ಪಡೆದುಕೊಂಡು ಉನ್ನತಶ್ರೇಣಿಯಲ್ಲಿ ತೇರ್ಗಡೆಯಾದ್ದಾರೆ.

ಜಿಜೆಸಿ: ಪರೀಕ್ಷೆಗೆ ಕುಳಿತ 471 ವಿದ್ಯಾರ್ಥಿಗಳಲ್ಲಿ  234 ವಿದ್ಯಾರ್ಥಿಗಳು ಪಾಸಾಗಿದ್ದು, ಇದರಲ್ಲಿ 5 ಉನ್ನತಶ್ರೇಣಿ, 96 ಪ್ರಥಮ, 69 ದ್ವಿತೀಯ ಹಾಗೂ 64 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾದ್ದಾರೆ.

ಮಣ್ಣಮ್ಮ ಸಂಯುಕ್ತ ಕಾಲೇಜು: 80 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 2 ಉನ್ನತಶ್ರೇಣಿ, 26 ಪ್ರಥಮ, 15 ದ್ವಿತೀಯ ಹಾಗೂ 19 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಜಿಜೆಸಿ ನಲ್ಲೂರು: ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 114 ವಿದ್ಯಾರ್ಥಿಗಳಲ್ಲಿ 58 ವಿದ್ಯಾರ್ಥಿಗಳು ಪಾಸಾಗಿದ್ದು, 30 ಪ್ರಥಮ, 16 ದ್ವಿತೀಯ ಹಾಗೂ 12 ಸಾಮಾನ್ಯ ದರ್ಜೆ, ವಿಜ್ಞಾನ ವಿಭಾಗದಲ್ಲಿ 16 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 3 ಪ್ರಥಮ, 2 ದ್ವಿತೀಯ ಹಾಗೂ 2 ಸಾಮಾನ್ಯ ದರ್ಜೆ, ವಾಣಿಜ್ಯ ವಿಭಾಗದಲ್ಲಿ 80 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಇದರಲ್ಲಿ 2 ಉನ್ನತಶ್ರೇಣಿ, 26 ಪ್ರಥಮ, 15 ದ್ವಿತೀಯ ಹಾಗೂ 19 ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ಜಿಜೆಸಿ ತ್ಯಾವಣಿಗೆ:  ಕಲಾ ವಿಭಾಗದಲ್ಲಿ 63 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 18 ಪ್ರಥಮ, 16 ದ್ವಿತೀಯ ಹಾಗೂ 5 ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 13 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಪಾಸಾಗಿದ್ದು, 8 ಪ್ರಥಮ ಹಾಗೂ 3 ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 6 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು  ತೇರ್ಗಡೆಯಾದ್ದಾರೆ.

ಜಿಜೆಸಿ ಚಿಕ್ಕಗಂಗೂರು: ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 21 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಜೆಸಿ ಹಿರೇಕೋಗಲೂರು:  ಒಟ್ಟು 55 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಪಾಸಾಗಿದ್ದು, ಇದರಲ್ಲಿ 23 ಪ್ರಥಮ, 17 ದ್ವಿತೀಯ ಹಾಗೂ 6 ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಎಂ. ಮಂಜುಳಾ 518 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT