ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ ಫಲಿತಾಂಶ: ಜಿಲ್ಲೆಯಲ್ಲೂ ಬಾಲಕಿಯರೇ ಮೇಲುಗೈ

Last Updated 25 ಮೇ 2012, 5:50 IST
ಅಕ್ಷರ ಗಾತ್ರ

ಕೋಲಾರ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾದ 17,772 ಮಂದಿ ಪೈಕಿ 9008 ಮಂದಿ ತೇರ್ಗಡೆ ಹೊಂದಿ ದ್ದಾರೆ. ಶೇ 50.69 ರಷ್ಟು ಫಲಿತಾಂಶ ದೊರೆತಿದೆ ಎಂದು  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ತಿಳಿಸಿದ್ದಾರೆ.

ಮೊದಲ ಬಾರಿಗೆ ಪರೀಕ್ಷೆಗೆ ಹಾಜ ರಾದ 11,815 ವಿದ್ಯಾರ್ಥಿಗಳ ಪೈಕಿ 7,745 ಮಂದಿ ತೇರ್ಗಡೆಯಾಗಿದ್ದು. ರೆಗ್ಯುಲರ್ ಅಭ್ಯರ್ಥಿಗಳ ಅಂಕಿ ಅಂಶ ಗಮನಿಸಿದಾಗ ಶೇ 65.5 ಫಲಿತಾಂಶ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 4192 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1,991 ಮಂದಿ ತೇರ್ಗಡೆ ಯಾ ಗುವ ಮೂಲಕ ಶೇ 47.5 ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 5,619 ಮಂದಿ ಪೈಕಿ 3265 ಮಂದಿ ತೇರ್ಗಡೆಯಾಗುವ ಮೂಲಕ ಶೇ.58.11 ಫಲಿತಾಂಶ ದೊರಕಿದೆ. ಕಲಾ ವಿಭಾಗದಲ್ಲಿ 7,961 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 3,752 ಮಂದಿ ತೇರ್ಗಡೆ ಹೊಂದಿ ಶೇ 47.13 ರಷ್ಟು ಫಲಿತಾಂಶ ಬಂದಿದೆ.

ಬಾಲಕಿಯರ ಮೇಲುಗೈ: ಈ ಬಾರಿ ಯೂ ಬಾಲಕಿಯರು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿ ದ್ದಾರೆ. ಪರೀಕ್ಷೆಗೆ ಹಾಜರಾದ 7962 ಬಾಲಕಿಯರ ಪೈಕಿ 4820 ಮಂದಿ ತೇರ್ಗಡೆ ಹೊಂದಿ ಶೇ 60.54 ಫಲಿತಾಂಶ ದೊರಕಿದೆ. 9810 ಬಾಲಕರ ಪೈಕಿ 4188 ಮಂದಿ ತೇರ್ಗಡೆ ಹೊಂದಿ ಶೇ 42.69 ಫಲಿತಾಂಶ ಬಂದಿದೆ.

ಗ್ರಾಮೀಣರ ಮೇಲುಗೈ: ಎಸ್‌ಎಸ್‌ಎಲ್‌ಸಿ ಫಲಿತಾಂಶದಂತೆ ಈ ಬಾರಿ ದ್ವಿತೀಯ ಪಿಯುಸಿಯಲ್ಲೂ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ 3162 ಮಂದಿ ಪೈಕಿ 1763 ಮಂದಿ ತೇರ್ಗಡೆಯಾಗಿ ಶೇ 55.76 ಫಲಿತಾಂಶ ಬಂದಿದೆ. ನಗರ ಪ್ರದೇಶದ 14,610 ವಿದ್ಯಾರ್ಥಿಗಳ ಪೈಕಿ 7,245 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ 49.59 ಫಲಿತಾಂಶ ದೊರೆತಿದೆ.

ಪ್ರತಿಭಾನ್ವಿತರು:ನಗರದ ದಾನಮ್ಮ ಚನ್ನಬಸವಯ್ಯ ಪದವಿ ಪೂರ್ವ ಕಾಲೇ ಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮೇಘಶ್ರೀ (587) ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದರೆ, ಸಹ್ಯಾದ್ರಿ ಕಾಲೇಜಿನ ಬಿಂದು (586) ದ್ವಿತೀಯ ಸ್ಥಾನ ದ ್ಲಲಿ ದ್ದಾರೆ. ಮಹಿಳಾ ಸಮಾಜ ಕಾಲೇಜಿನ ಎನ್. ಬಬಿತಾ (562), ಸಿ.ಜೆ.ಬಿಂದು (562), ಕಾಮರಾಜ್ ಕನ್ನೆಲ್ (562) ಮೂರನೇ ಸ್ಥಾನದಲ್ಲಿದ್ದಾರೆ.

ನಗರದ ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅರ್ಚನಾ ಕೆ.ರೆಡ್ಡಿ 583 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

 ಅದೇ ಕಾಲೇಜಿನ ಪಿ.ಆರ್. ಆದರ್ಶ (578), ಎಂ.ಸಿಂಧು (572) ಮತ್ತು ಮಹಿಳಾ ಸಮಾಜ ಕಾಲೇಜಿನ ಕೆ.ಎಸ್.ಚೈತ್ರ (572) ವಿಶೇಷ ಗಮನ ಸೆಳೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 84 ಪದವಿ ಪೂರ್ವ ಕಾಲೇಜುಗಳಿವೆ ಸರ್ಕಾರಿ  ಕಾಲೇ ಜು 32 ಅನುದಾನಿತ 5 ಮತ್ತು ಅನು ದಾನ ರಹಿತ 47 ಕಾಲೇಜುಗಳಿವೆ. ಉತ್ತಮ ಫಲಿತಾಂಶಕ್ಕಾಗಿ ಹಲವು ಕಾರ್ಯಕ್ರಮ, ಸಭೆಗಳನ್ನು ನಡೆಸಲಾಗಿತ್ತು. ಮುಂದಿನ ಶೈಕ್ಷಣಿಕ ವರ್ಷ ದಲ್ಲಿ ಇನ್ನಷ್ಟು ಉತ್ತಮ ಫಲಿ ತಾಂಶ ಪಡೆಯಲು ಅಗತ್ಯ ಕ್ರಮ ಕೈಗೊಳ್ಳ ಲಾ ಗುವುದು ಎಂದು ದೊರೆಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT