ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನಂಜಯ ಸಂಗೀತ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಪ್ರತಿಷ್ಠಾನ: ಗುರುವಾರ ಧನಂಜಯ ಹೆಗಡೆ ಅವರಿಂದ ಸುಗಮ ಸಂಗೀತ.

ಯುವ ಹಿಂದುಸ್ತಾನಿ ಗಾಯಕರಾದ ಧನಂಜಯ ಹೆಗಡೆ ಉತ್ತರ ಕನ್ನಡ ಜಿಲ್ಲೆ ಗುಣವಂತೆಯ ಸಂಗೀತ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲೇ ಅವರ ಸಂಗೀತ ಆಸಕ್ತಿ ಪಾಲಕರ ಗಮನಕ್ಕೆ ಬಂತು.ತಾಯಿ ಗೀತಾ ಇವರಿಗೆ ಮೊದಲ ಗುರುವಾದರು.

ಇದಕ್ಕೆಲ್ಲ ತಂದೆ ಜಿ. ಎಸ್. ಹೆಗಡೆ ಅವರ ಒತ್ತಾಸೆ ಇತ್ತು. 1989ರಿಂದ ಧನಂಜಯ ಅವರು ಪಂಡಿತ್ ವಿನಾಯಕ ತೊರವಿ ಅವರ ಬಳಿ ಗುರುಕುಲ ಪದ್ಧತಿಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಲಾರಂಭಿಸಿದರು.

ಕುಂದಗೋಳದ ಸವಾಯ್ ಗಂಧರ್ವ ಸಂಗೀತ ಉತ್ಸವ, ಮೈಸೂರು ದಸರಾ ಉತ್ಸವ, ಗೋವಾ ಕಲಾ ಅಕಾಡೆಮಿ ದೆಹಲಿಯ ಇಂಡಿಯನ್ ಹ್ಯಾಬಿಟೆಟ್ ಸೆಂಟರ್ ಇತ್ಯಾದಿ ವೇದಿಕೆಗಳಲ್ಲಿ ಧನಂಜಯ ಕಾರ್ಯಕ್ರಮ ನೀಡಿದ್ದಾರೆ. ಅಮೆರಿಕ, ಥಾಯ್ಲೆಂಡ್‌ಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆಕಾಶವಾಣಿಯ ಗ್ರೇಡೆಡ್ ಕಲಾವಿದರು ಹೌದು. ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ `ಸಂಗೀತ ವಿಶಾರದ~ ಪದವಿ ಪಡೆದಿದ್ದಾರೆ.

ಬೆಂಗಳೂರು ವಿವಿಯ ವಾಣಿಜ್ಯ ಸ್ನಾತಕೋತ್ತರ ಪದವೀಧರ. ಪ್ರಸ್ತುತ ಮುಂಬೈನಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT