ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣೇಂದ್ರ ಸಾಹಿತ್ಯ: ವಿಚಾರ ಸಂಕಿರಣ 9ರಂದು

Last Updated 7 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಶಿರಸಿ: ಹಿಂದಿ ಪ್ರಾಧ್ಯಾಪಕರಾಗಿ, ಕನ್ನಡ ಹಾಗೂ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಧರಣೇಂದ್ರ ಕುರಕುರಿ ಸಾಹಿತ್ಯ ಕುರಿತ ವಿಚಾರ ಸಂಕಿರಣ ನಗರದ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ಸೆ.9ರ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಸನ್ಮತಿ ಸಾಹಿತ್ಯ ಪೀಠ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಉದ್ಘಾಟಿಸುವರು. ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು.

ಧರಣೇಂದ್ರ ಕುರಕುರಿ ಅಧ್ಯಾಪಕರಾಗಿ 25 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದವರು. ಹಲವಾರು ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ, ಪ್ರಬಂಧ ಮಂಡಿಸಿ ಮೆಚ್ಚುಗೆ ಗಳಿಸಿದವರು. ಶೋಷಿತ, ದುರ್ಬಲ ವರ್ಗದ ಧ್ವನಿಯಾಗಿ ಅವರ ಕಾವ್ಯ ಹೊರಹೊಮ್ಮುತ್ತದೆ. 1996ರಲ್ಲಿ ಹಿಂದಿ ಪುಸ್ತಕಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಹರಕು ಪುಸ್ತಕ, ನೀರಾಗ ಕುಂತೇನ ನೆನಕೊಂತ, ಹೊಸಾ ಕಾಲ ಬರತಾವ, ನಾ ಕವಿ ಅಲ್ಲ, ಶಬ್ದವಾಯಿತು ನಕ್ಷತ್ರ, ಆಯ್ದ ಕವನಗಳು, ಕುಂಚ ಮತ್ತು ಬಣ್ಣ ಅವರ ಪ್ರಮುಖ ಪ್ರಕಟಿತ ಕೃತಿಗಳು.

ಪರ್ಯಟನ, ಅಂತ, ಚಾವುಂಡರಾಯ ಅನುಭವ, ಪತ್ತರ್ ಪಿಘಲನೇ ಕಿ ಘಡಿ, ಓಂ ಣಮೋ, ಜುರ್ಮಾನಾ ಅವರು ಅನುವಾದಿತ ಕೃತಿಗಳು. ಧರಣೇಂದ್ರ ಕುರಕುರಿ ಅವರಿಗೆ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ರಾಷ್ಟ್ರೀಯ ಪ್ರಶಸ್ತಿ, ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ, ಕದಂಬ ಸೇವಾ ರತ್ನ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT