ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಗ್ರಂಥಗಳನ್ನು ಪಾಲಿಸಿದರೆ...

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಜಾತಿಯು ಅನಿವಾರ್ಯ, ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ನಾನು ಆ ಧರ್ಮದಲ್ಲಿಯೇ ಸಾಯುವ ತನಕ ಮುಂದುವರೆಯಲು ಇಷ್ಟ ಪಡುತ್ತೆನೆ. ನಾನಿರುವ ಜಾತಿಯು ಬೇರೆ ಜಾತಿಗಿಂತ ಕೀಳು ಅಥವಾ ಮೇಲೆಂದು ನಂಬುವುದಿಲ್ಲ. ಪ್ರತಿಯೊಬ್ಬರು ಅವರ ಧರ್ಮಗ್ರಂಥಗಳನ್ನು ಓದಿ ಅದರಂತೆ ನಡೆದರೆ ಎಲ್ಲಾ ಜಾತಿಯವರೂ ಮೇಲ್ಜಾತಿಯಾಗಬಹುದು.

ಸರಿಯಾಗಿ ಪಾಲನೆ ಮಾಡಿದರೆ ಎಲ್ಲರೂ ಉನ್ನತ ಸ್ಥಾನಿಯಾಗಬಹುದು. ಯಾವ ಗ್ರಂಥಗಳಲ್ಲಿಯೂ, ಅಸೂಯೆ, ಅನಾಚಾರ, ಸುಳ್ಳು ಹೇಳುವುದು, ದಬ್ಬಾಳಿಕೆ, ಕೊಲೆ ಸುಲಿಗೆಗಳನ್ನು ಪುರಸ್ಕರಿಸಿರುವುದಿಲ್ಲ. ಬದಲಾಗಿ  ಎಲ್ಲವೂ ಇಂಥವನ್ನು ವಿರೋಧಿಸಿವೆ.
ಪ್ರತಿಯೊಬ್ಬರೂ ನ್ಯಾಯ, ನೀತಿ, ಧರ್ಮದಿಂದ ನಡೆದರೆ ಅವರೇ  ಮೇಲ್ಜಾತಿಯವರೂ ಉನ್ನತ ವ್ಯಕ್ತಿಗಳು ಆಗಿರುತ್ತಾರೆ. ಯಾವ ಧರ್ಮದವನು ಅಥವಾ ಜಾತಿಯವನೇ ಆಗಿರಲಿ ಅವನವನ ಧರ್ಮವನ್ನು ಪಾಲಿಸದೆ, ಅನ್ಯಾಯ, ಅನೀತಿ, ಅಧರ್ಮ, ಕಳ್ಳತನ

ಮಾಡುವುದು, ಸುಳ್ಳು ಹೇಳುವುದು, ದ್ರೋಹ ಮಾಡುವುದು, ಕೊಲೆ, ಸುಲಿಗೆ, ವ್ಯಭಿಚಾರ ಮಾಡುವುದು ಇತರರನ್ನು ನಿಂದಿಸುವುದು,  ಸಾಕಿ ಸಲುಹಿದ ತಂದೆ ತಾಯಿಯರನ್ನು ದೂರ ಮಾಡುವುದು ಸರಿಯಲ್ಲ. ಹೆಂಡತಿ, ಮಕ್ಕಳು, ಕೆಲಸಗಾರರಿಗೆ ನೀರು, ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡದೆ ವಂಚಿಸುವವನೇ ಅತೀ ಕೀಳು ಮಟ್ಟದವನಾಗಿರುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT