ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಧರ್ಮದ ದಾರಿ ಶ್ರೇಯಸ್ಕರ'

ಹಿರೇ ಬಜಾರದ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವಕ್ಕೆ ಚಾಲನೆ
Last Updated 4 ಸೆಪ್ಟೆಂಬರ್ 2013, 8:24 IST
ಅಕ್ಷರ ಗಾತ್ರ

ಗಜೇಂದ್ರಗಡ: `ಮನುಷ್ಯ ಜೀವನ ಸಜ್ಜನರ ಸತ್ಸಂಗದ ತೋಟದಲ್ಲಿ ಬಾಳಬೇಕು. ಹೂದೋಟ ಪ್ರವೇಶಿಸಿದ ಮನುಷ್ಯ ಒಳ್ಳೆಯವನೇ ಇರಲಿ ಅಥವಾ ಕೆಟ್ಟವನೇ ಇರಲಿ ಹೂಗಳು ಯಾವಾಗಲೂ ಸುಗಂಧವನ್ನೇ ಸೂಸುತ್ತವೆ' ಎಂದು ವೀರಶೈವ ಸಮಾಜದ ಮುಖಂಡರ ಶರಣಪ್ಪ ಹಿರೇಮನಿ ಅಭಿಪ್ರಾಯಪಟ್ಟರು.

ಶ್ರಾವಣ ಮಾಸದ ಪ್ರಯುಕ್ತ ನಗರದ ಹಿರೇ ಬಜಾರದ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ   ಮಾತನಾಡಿದರು.

ಹೂವು ಒಳ್ಳೆಯವರಿಗೆ ಸುಗಂಧ, ಕೆಟ್ಟವರಿಗೆ ದುರ್ಗಂಧ ಕೊಡುವುದಿಲ್ಲ. ಎಲ್ಲರಿಗೂ ಸುಗಂಧಯುಕ್ತ ಸುವಾಸನೆಯನ್ನೇ ಬೀರುತ್ತದೆ. ಅದರಂತೆ ಆಚಾರ್ಯರು, ಶರಣರು, ಸಂತ ಮಹಂತರು ಯಾವಾಗಲೂ ನೋವು ನುಂಗಿ ನಲಿವನ್ನು ಉಂಟು ಮಾಡುತ್ತಾರೆ. ಅವರ ಬೋಧನೆ, ಮಾರ್ಗದರ್ಶನ ಮನುಷ್ಯನಿಗೆ ಅಗತ್ಯ. ಧರ್ಮದ ಹಾದಿ ಕಷ್ಟ. ಅಧರ್ಮದ ಹಾದಿ ಬಲು ಸುಲಭ. ಧರ್ಮದಾರಿ ಕಷ್ಟವಾದರೂ ಸಿಗುವ ಫಲ ಶಾಶ್ವತ ಎಂದರು. 

ಶರಣಪ್ಪ ಹಿರೇಮನಿ, ಬಿ.ಎಸ್.ಹೊನವಾಡ, ಅಜೀತ ವಂದಕುದರಿ, ವಿಜಯಕುಮಾರ ಹೊನವಾಡ, ಈರಣ್ಣ ಸಕ್ರಿ, ಈರಪ್ಪ ಅರಕೆರಿ, ಬಸವರಾಜ ಅರಕೆರಿ, ರುದ್ರಪ್ಪ ಶೆಟ್ಟರ, ಸಿ.ಎಸ್.ವಾಲಿ, ಲಿಂಗರಾಜ ಹಿರೇಮನಿ, ವೀರಣ್ಣ ಸಕ್ರಿ, ಶ್ರೀನಿವಾಸ ಸೌವದಿ, ವಿಠಲ ಸವದಿ, ಅಶೋಕ ಜಾಧವ, ಐ.ಸಿ.ಅಂಗಡಿ, ಕುಮಾರ ಹೊನವಾಡ, ಈಶಪ್ಪ ಅಂಬೋರೆ, ರುದ್ರಪ್ಪ ಮಡಿವಾಳರ, ಶೇಖಣ್ಣ ಸಕ್ರಿ, ಮಹೇಶ   ಮಹಾವೀರ, ಬಾಹುಬಲಿ ಹುಲಿ, ಬಿ.ಸಿ.ಪಟ್ಟೇದ್  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT