ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮನಿಂದನೆ ಆರೋಪ: ಪ್ರಾಧ್ಯಾಪಕನ ಬಂಧನ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಇಸ್ಲಾಮಾಬಾದ್(ಪಿಟಿಐ): ಪುಸ್ತಕದಲ್ಲಿ ಧರ್ಮನಿಂದನೆಯ ಅಂಶಗಳು ಪ್ರಕಟವಾಗಿರುವ ಆರೋಪದ ಮೇಲೆ ಪೊಲೀಸರು ಸೋಮವಾರ ಇಸ್ಲಾಮಾಬಾದ್‌ನಲ್ಲಿ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ್ದಾರೆ.
ಲೇಖಕರೂ ಆಗಿರುವ ಪ್ರಾಧ್ಯಾಪಕ ಇಫ್ತಿಕಾರ್ ಖಾನ್ (60) ಬಂಧಿತರು.

ಇಫ್ತಿಕಾರ್ ಅವರು ಬರೆದಿರುವ ಪುಸ್ತಕದಲ್ಲಿ ಧರ್ಮನಿಂದನೆಯ ಅಂಶಗಳಿವೆ ಎಂದು ರಾವಲ್ಪಿಂಡಿಯಲ್ಲಿರುವ ಅವರ ಅಳಿಯ ಶೇಖ್ ಉಸ್ಮಾನ್ ಆರೋಪಿಸಿದ್ದರು.ಅಲ್ಲದೇ ಸ್ಥಳೀಯರು, ಧರ್ಮಗುರುಗಳು ಹಾಗೂ ನೂರಾರು ಮದರಸಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಇಫ್ತಿಕಾರ್ ಬಂಧನಕ್ಕೆ ಆಗ್ರಹಿಸಿದ್ದರು. 

ಉಸ್ಮಾನ್ ಮತ್ತು ಇಫ್ತಿಕಾರ್ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT