ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಮಹಾ ಮಳೆ, ಅಪಾರ ನಷ್ಟ

Last Updated 13 ಸೆಪ್ಟೆಂಬರ್ 2013, 6:07 IST
ಅಕ್ಷರ ಗಾತ್ರ

ಧರ್ಮಪುರ: ಹೋಬಳಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಅಪಾರ ನಷ್ಟ ಸಂಭವಿಸಿದ ಘಟನೆಗಳು ನಡೆದಿವೆ.
ಹೋಬಳಿಯ ಶ್ರವಣಗೆರೆ, ಅರಳಿಕೆರೆ, ಸಕ್ಕರ, ಖಂಡೇನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಸೂಗೂರು, ಮುಂಗಸವಳ್ಳಿ, ಅಬ್ಬಿನಹೊಳೆ, ಈಶ್ವರಗೆರೆ, ಹೊಸಕೆರೆ, ಬೇತೂರು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.

ನೀರುಪಾಲು: ಸಮೀಪದ ಸಾಲುಣಿಸೆ ಗ್ರಾಮದಲ್ಲಿ 35ಎಕರೆ ಪ್ರದೇಶದಲ್ಲಿನ ಭಾಗ್ಯ ಮೀನು ಮರಿ ಪಾಲನ ಕೇಂದ್ರ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಈ ಮೀನು ಮರಿ ಪಾಲನ ಕೇಂದ್ರದಲ್ಲಿ 1.50 ಕೋಟಿ ಫಿಂಗರ್ ಲಿಂಕ್ಸ್, ಕಾಟ್ಲ್, ಮಗಾಲ ಮತ್ತಿತರ ಜಾತಿಯ ಮೀನು ಮರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ 6 ಫಿಷ್ ಪಾಂಡ್ ಸಂಪೂರ್ಣವಾಗಿ ನಾಶವಾಗಿವೆ ಪೈಪ್‌ಲೈನ್ ಕೊಳವೆಬಾವಿ, ಏರಿ ಹೊಡೆದು ಸುಮಾರು `50 ಲಕ್ಷ ನಷ್ಟ ಸಂಭವಿಸಿದೆ. ಕಳೆದ 6ವರ್ಷಗಳಿಂದ ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಮೀನು ಮರಿ ಪೂರೈಕೆ ಮಾಡುತ್ತಿದ್ದು ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಸಾಲ ಮಾಡಿ ಈಗ ಬೀದಿಗೆ ಬಿದ್ದ ಪರಿಸ್ಥಿತಿ ಉಂಟಾಗಿದೆ ಎಂದು ಮಾಲೀಕ ಸಿ.ನಟರಾಜ್ ತಮ್ಮ ಅಳಲು ತೊಡಿಕೊಂಡರು.

ಬೆಳೆ ಹಾನಿ: ಧರ್ಮಪುರ ಹೋಬಳಿಯ ಕುರಿದಾಸನಹಟ್ಟಿ, ಬೇತೂರು, ಅರಳಿಕೆರೆ, ಕಣಜನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಈರುಳ್ಳಿ, ಹತ್ತಿಗಿಡ, ರಾಗಿ, ಸೂರ್ಯಕಾಂತಿ, ಜೋಳ ನೀರು ಪಾಲಾಗಿ ಅಪಾರ ನಷ್ಟ ಸಂಭವಿಸಿದೆ.

ಕುರಿದಾಸನಹಟ್ಟಿಯ ಈರಣ್ಣ ಅವರ 5 ಎಕರೆ ಜಮೀನಿನಲ್ಲಿ ಕಿತ್ತು ಹಾಕಿದ್ದ ಈರುಳ್ಳಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸುಮಾರು ` 20 ಲಕ್ಷ ನಷ್ಟ ಸಂಭವಿಸಿದೆ.

ಅರಳಿಕೆರೆ, ಹಲಗಲದ್ದಿ ಮತ್ತು ಮದ್ದಿಹಳ್ಳಿ ಕೆರೆಗಳು ಭರ್ತಿಯಾಗಿ ಏರಿ ಹೊಡೆಯುವ ಅಪಾಯದ ಸ್ಥಿತಿಯಲ್ಲಿವೆ. ಈಗಾಗಲೇ ನೀರಾವರಿ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಭೆೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT