ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳಕ್ಕೆ ಟೊಮೆಟೊ ಉಚಿತ ರವಾನೆ!

ಬೆಲೆ ಕುಸಿತದಿಂದ ನಷ್ಟ ಕಂಡ ರೈತ; ಕಷ್ಟದಲ್ಲೂ ಸದ್ಬಳಕೆ ಯತ್ನ
Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಚಳ್ಳಕೆರೆ: ಎಕರೆಗಟ್ಟಲೆ ಟೊಮೆಟೊ ಬೆಳೆದು ಭಾರಿ ಲಾಭದ ಆಸೆಯಲ್ಲಿದ್ದ ರೈತರಿಬ್ಬರು, ದಿಢೀರ್ ಬೆಲೆ ಕುಸಿತ ದಿಂದಾಗಿ ಅಪಾರ ನಷ್ಟ ಅನುಭವಿಸಿ ದ್ದಾರೆ. ಅಂತಹ ಕಷ್ಟದಲ್ಲೂ ನೆಮ್ಮದಿ ಕಾಣುವ ಉದ್ದೇಶದಿಂದ ರಾಶಿ ಟೊಮೆ ಟೊವನ್ನು ಧರ್ಮಸ್ಥಳ ದೇವಸ್ಥಾನಕ್ಕೆ ಉಚಿತವಾಗಿ ಒಪ್ಪಿಸಲು ಮುಂದಾಗಿದ್ದಾರೆ.

ಪಟ್ಟಣದ ಕಾಟಪ್ಪನಹಟ್ಟಿಯ ರೈತ ಯರ್ರಪ್ಪ ಮತ್ತು ಮಹಾಂತೇಶ್‌, ಟೊಮೆಟೊ ಬೆಳೆಯಲ್ಲಿ ನಷ್ಟ ಅನುಭವಿ ಸಿದವರು. ಕೊಯ್ಲಿನ ನಂತರ ಸಿಕ್ಕ 400 ಕ್ರೇಟ್‌ ಟೊಮೆಟೊವನ್ನು ಧರ್ಮಸ್ಥಳಕ್ಕೆ ಗುರುವಾರ ರವಾನಿಸಿದ್ದಾರೆ.

‘ಟೊಮೆಟೊ ಸಸಿಗಳನ್ನು ನೆಟ್ಟ ದಿನ ದಿಂದಲೂ ಭಾರಿ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಲಾರಿಗೆ  ₨18 ಸಾವಿರ ಬಾಡಿಗೆ ನೀಡಿ ಟೊಮೆಟೊ ಮಾರಲು ಸೋಮವಾರ ಕೋಲಾರಕ್ಕೂ ತೆರಳಿದ್ದೆವು. ಬೆಲೆ ಕುಸಿತದಿಂದ ಬರಿಗೈಯಲ್ಲಿ ಹಿಂದಿರುಗಿದೆವು’ ಎಂದು ಯರ್ರಪ್ಪ ಅಳಲು ತೋಡಿಕೊಂಡರು.

‘ಎರಡು ಎಕರೆಯಲ್ಲಿ 18 ಸಾವಿರ ಸಸಿ ನಾಟಿ ಮಾಡಿದ್ದೆವು.  ಒಂದು ಟೊಮೆಟೊ ಸಸಿಗೇ 50 ಪೈಸೆ ವೆಚ್ಚವಾ ಗಿತ್ತು. ಕೂಲಿಯಾಳು ವೆಚ್ಚವೇ ₨2 ಲಕ್ಷ ದಾಟಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ನಮ್ಮ ಎಲ್ಲ ಶ್ರಮ, ಹಣ ವ್ಯರ್ಥವಾಗಿದೆ. ಕಷ್ಟಪಟ್ಟರೂ ಯಾವುದೇ ಫಲ ದೊರೆಯಲಿಲ್ಲ’ ಎಂದು ನೋವು ತೋಡಿಕೊಂಡರು.   

‘ಐದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಒಟ್ಟು ₨8 ಲಕ್ಷ ವೆಚ್ಚ ಮಾಡಿ ದ್ದೇವೆ. ಆದರೆ ನಯಾಪೈಸೆ ಲಾಭ ಬರ ಲಿಲ್ಲ. ಕಷ್ಟಪಟ್ಟು ಬೆಳೆದ ಫಸಲನ್ನು ರಸ್ತೆಗೆ ಸುರಿಯಲು ಇಷ್ಟವಾಗಲಿಲ್ಲ. ನಮ್ಮ ಶ್ರಮ ಹೀಗಾದರೂ ಸದ್ಬಳಕೆಯಾಗಲಿ ಎಂದು ಧರ್ಮಸ್ಥಳಕ್ಕೆ ಉಚಿತವಾಗಿ ಕಳು ಹಿಸಿಕೊಡುತ್ತಿದ್ದೇವೆ’ ಎಂದು ರೈತ ಮಹಾಂತೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT