ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರೇಶ್ವರ ಯಕ್ಷಧಾರೆ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮೂವತ್ತನಾಲ್ಕು ವರ್ಷ  ಹಿರಿಯ-ಕಿರಿಯ ಯಕ್ಷಗಾನ ಕಲಾವಿದರನ್ನು ಕುಣಿಸಿದ್ದ ಬಡಗುತಿಟ್ಟಿನ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮೇಳದಿಂದ ನಿವೃತ್ತರಾಗಿದ್ದಾರೆ. ಮೇಳಗಳ ತಿರುಗಾಟದಲ್ಲಿ ಧಾರೇಶ್ವರ `ಯಕ್ಷ ರಸಧಾರೆ'ಯಿಂದ ವಂಚಿತರಾದೆವು ಎಂದು ಬೇಸರದಿಂದ ಇದ್ದ ಕಲಾಪ್ರೇಮಿಗಳಿಗೆ ಸಂತಸದ ಸುದ್ದಿ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 8ರಂದು ರಾತ್ರಿ 10ರಿಂದ `ಧಾರೇಶ್ವರ ಯಕ್ಷಧಾರೆ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಧಾರೇಶ್ವರ ಅವರನ್ನು ಅಭಿನಂದಿಸಲಾಗುವುದು.

ಸನ್ಮಾನದ ನೆಪದಲ್ಲಿ ಬಡಗುತಿಟ್ಟು ಹಾಗೂ ತೆಂಕುತಿಟ್ಟಿನ ಪ್ರಮುಖ ಕಲಾವಿದರ ಸಮ್ಮಿಲನದಲ್ಲಿ ರಾತ್ರಿಯಿಂದ ಬೆಳಿಗ್ಗೆವರೆಗೂ `ಭಸ್ಮಾಸುರ-ಶಶಿಪ್ರಭೆ-ರಾಜಾ ವತ್ಸಾಖ್ಯ' ಪ್ರಸಂಗಗಳ ಪ್ರದರ್ಶನವಿದೆ. ಯಕ್ಷಭೂಮಿಯ `ಚಿರಯುವಕ' 78ರ ಹರೆಯದ ಚಿಟ್ಟಾಣಿ ರಾಮಚಂದ್ರ ಹೆಗಡೆ `ಭಸ್ಮಾಸುರ-2'ನಾಗಿ ಕಾಣಿಸಿಕೊಳ್ಳುವುದು ಪ್ರದರ್ಶನದ ವಿಶೇಷ. ನರಸಿಂಹ ಚಿಟ್ಟಾಣಿ ಭಸ್ಮಾಸುರ-1, ಶಿವನಾಗಿ ಆರ‌್ಗೋಡು ಮೋಹನದಾಸ ಶೆಣೈ, ಮೋಹಿನಿಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಶ್ರೀಹರಿಯಾಗಿ ಕಾರ್ತಿಕ್ ಚಿಟ್ಟಾಣಿ, ಬ್ರಾಹ್ಮಣನಾಗಿ ರಮೇಶ್ ಭಂಡಾರಿ ಮೂರೂರು ಪಾತ್ರ ವಹಿಸುವರು.

`ಶಶಿಪ್ರಭೆ' ಪ್ರಸಂಗದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ-ಮಾರ್ತಾಂಡತೇಜ, ತೋಟಿಮನೆ ಗಣಪತಿ ಭಟ್-ಕಮಲಧ್ವಜ, ಕೆದಿಲ ಜಯರಾಮ ಭಟ್-ಶಶಿಪ್ರಭೆ, ಅಶೋಕ್ ಭಟ್ ಸಿದ್ದಾಪುರ-ಪದ್ಮಗಂಧಿನಿ ಪಾತ್ರಕ್ಕೆ ಮೆರುಗು ನೀಡಲಿದ್ದಾರೆ. `ರಾಜಾ ವತ್ಸಾಖ್ಯ' ಪ್ರಸಂಗದಲ್ಲಿ ಚಿಟ್ಟಾಣಿ ಪರಂಪರೆಯ ಪ್ರತಿನಿಧಿ ಸುಬ್ರಹ್ಮಣ್ಯ ಚಿಟ್ಟಾಣಿ-ವತ್ಸಾಖ್ಯ, ಗಣಪತಿ ಭಟ್ ಕಣ್ಣಿಮನೆ-ಭದ್ರಸೇನ ಪಾತ್ರ ವಹಿಸುವರು.

ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ಸರ್ವೇಶ್ವರ ಭಟ್ ಅವರ ಗಾನ ವೈವಿಧ್ಯ ಇರಲಿದೆ. ಹೆಚ್ಚಿನ ಮಾಹಿತಿಗೆ: 9448321871.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT