ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ನಂಬಿಕೆಯಲ್ಲಿ ಮಾತ್ರ ನೈತಿಕತೆ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: `ಜಗತ್ತಿನಲ್ಲಿ ನೈತಿಕತೆ ಎಂಬುದು ಧಾರ್ಮಿಕ ನಂಬಿಕೆಯಲ್ಲಿ ಮಾತ್ರ ಅಡಗಿದೆ~ ಎಂದು ಶಿರಸಿ ಮಠ ದೇವಳ ಸೊಂದಾ ಪೀಠಾಧ್ಯಕ್ಷ ಮಜ್ಜಗದ್ಗುರು ಶಂಕರಾಚಾರ್ಯ ಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿ ಅಭಿಪ್ರಾಯ ಪಟ್ಟರು.

ಪಟ್ಟಣದ ಕೋಟೆ ನಾಗದೇವತೆ ಪ್ರತಿಷ್ಠಾನ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಪ್ರವಚನ ನೀಡಿದರು.`ಉಪನ್ಯಾಸದ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಿ, ಸಂಘಟಿಸಿಬೇಕಿದೆ.

ನಿತ್ಯದ ಬದುಕಿನಲ್ಲಿ ಜಂಜಡತೆ ಕಾಣುತ್ತಿರುವ ಮಾನವ ಕ್ರಿಯಾಶೀಲನಾಗಿ ಭಗವದ್ಗೀತೆಯ ತತ್ವ ಆದರ್ಶ ಅನುಸರಿಸಿದ್ದಲ್ಲಿ ನವಸಮಾಜ ನಿರ್ಮಾಣದ ಜೊತೆಗೆ ಮಾನಸಿಕ ನೆಮ್ಮದಿ ಸಿಗಲಿದೆ~.

`ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಮನುಷ್ಯ ನೆಮ್ಮದಿ ಕಾಣುವ ಕಾತುರದಲ್ಲಿದ್ದಾನೆ. ಆದರೆ ನಿಜವಾದ ನೆಮ್ಮದಿ ಧಾರ್ಮಿಕ ಭಾವಗಳಲ್ಲಿ ಅಡಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಭಗವದ್ಗೀತೆ ಸಾರದಲ್ಲಿ ಕರ್ಮ, ಯೋಗ, ಭಕ್ತಿ, ಜ್ಞಾನಗಳು ಅಡಗಿವೆ.  ಸರ್ವಕಾಲಿಕ ಸತ್ಯಗಳು ಭಗವದ್ಗೀತೆ ಯಮೂಲಕ ಬಹಿರಂಗ ವಾಗಿದೆ ಎಂದರು.

ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ಅಭಿಯಾನದ ಸಂಚಾಲಕ ದೇ.ಸು.ನಾಗರಾಜ್, ಬಿ.ಜೆ.ಪಿ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಮಾಚಪ್ಪ ಹಾಗೂ ಇತರರು ಪ್ರವಚನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT