ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಧಾರ್ಮಿಕತೆ ಕುಸಿತ: ದುಷ್ಕೃತ್ಯ ಹೆಚ್ಚಳ'

Last Updated 1 ಡಿಸೆಂಬರ್ 2012, 5:26 IST
ಅಕ್ಷರ ಗಾತ್ರ

ಶಿರಾ: ಪ್ರಸ್ತುತ ಎಲ್ಲರ ಬದುಕು ಯಾಂತ್ರಿಕವಾಗಿದೆ. ಇದರಿಂದ ಧಾರ್ಮಿಕ ಭಾವನೆ ಕುಗ್ಗಿ ಸಮಾಜದಲ್ಲಿ ದುಷ್ಕೃತ್ಯ ಹೆಚ್ಚುತ್ತಿವೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ಅನ್ನ ಸಂತರ್ಪಣಾ ಸೇವಾ ಸಮಿತಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜಮುಖಿ ಕಾರ್ಯಗಳ ಮೂಲಕ ಮನುಷ್ಯ ಸಾರ್ಥಕತೆ ಪಡೆದರೆ ದೇವರ ಋಣ ತೀರಿಸಿದಂತೆ ಎಂದು ತಿಳಿಸಿದರು.

ಕೊಡಗಿನ ಕಲ್ಮಠದ ಮಹಂತೇಶ್ವರ ಸ್ವಾಮೀಜಿ ಮಾತನಾಡಿದರು. ಶಾಸಕ ಟಿ.ಬಿ.ಜಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಟಿ.ರಘು, ಮಾಜಿ ಶಾಸಕರಾದ ಪಿ.ಎಂ.ರಂಗನಾಥಪ್ಪ, ಎಸ್.ಕೆ.ದಾಸಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ಸಿ.ನಾಗೇಂದ್ರಕುಮಾರ್, ಲೋಕೇಶ್, ಹರ್ಷವರ್ಧನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT