ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನಿ ಪಕ್ಕವಿದ್ದರೆ 16ಪಟ್ಟು ಅಧಿಕ ಅಪಾಯ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್ (ಐಎಎನ್‌ಎಸ್): ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಸೇವಿಸುವವರ ಪಕ್ಕ ನೀವು ನಿಂತಿದ್ದೇ ಆದರೆ, ಅಪಾಯಕಾರಿ ಸೂಕ್ಷ್ಮ ಕಣಗಳು ದೇಹ ಪ್ರವೇಶಿಸುವ ಸಾಧ್ಯತೆ ಅನತಿ ದೂರದಲ್ಲಿರುವ ವ್ಯಕ್ತಿಗಿಂತ 16 ಪಟ್ಟು ಅಧಿಕವಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ನ್ಯೂಜಿಲೆಂಡ್‌ನ ಒಟಾಗೊ ವಿ.ವಿ. ಸಂಶೋಧಕರು ಐದು ವಾರಗಳ ಕಾಲ ಸಾರ್ವಜನಿಕ ಸ್ಥಳದಲ್ಲಿ ಸೂಕ್ಷ್ಮಗ್ರಾಹಿ ವಾಯು ವಿಶ್ಲೇಷಕ ಸಾಧನದ ನೆರವಿನಿಂದ ನಡೆಸಿದ ಸಮೀಕ್ಷೆಯಿಂದ ಇದು ಪತ್ತೆಯಾಗಿದೆ.
ಅದೇ ರೀತಿ, ಧೂಮಪಾನ ಮಾಡುವ ವ್ಯಕ್ತಿ ಸರಾಸರಿ 2.6 ಮೀಟರ್ ದೂರದಲ್ಲಿದ್ದಾಗ, ಅಲ್ಲಿನ ಗಾಳಿಯಲ್ಲಿ, ಧೂಮಪಾನಿ ಇಲ್ಲದ ವೇಳೆಗಿಂತ ಶೇ 70ರಷ್ಟು ಹೆಚ್ಚು ಅಪಾಯಕಾರಿ ಸೂಕ್ಷ್ಮ ಕಣಗಳು ಇರುವುದು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT