ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ- ಪ್ರತಿಧ್ವನಿಯ ಬಂಡೆಗಲ್ಲು!

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತಿ.ನರಸೀಪುರ: ಆ ಬಂಡೆ ಕಲ್ಲಿನ ಮೇಲೆ ನಿಂತು ಹೋಯ್ ಎಂದು ಕೂಗಿದರೆ ಸಾಕು ಆ ಕಡೆಯಿಂದ ಹೋಯ್ ಎನ್ನುವ ಪ್ರತಿಧ್ವನಿ ನಿಮಗೆ ಕೇಳಿಸುತ್ತದೆ. ಬಂಡೆ ಮೇಲೆ ನಿಂತು ಹೇಳುವ ಪ್ರತಿ ಮಾತು ಪ್ರತಿಧ್ವನಿಸುತ್ತದೆ. ಇಂತಹ ಅಚ್ಚರಿಯ ಘಟನೆ ಕಾಣ ಬೇಕಿದ್ದರೆ ತಾಲ್ಲೂಕಿನ ಚಿದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಬೇಕು.

ಚಿದರಹಳ್ಳಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಸಮೀಪದ ಕಾಲುವೆಯ ರಸ್ತೆಯಲ್ಲಿ ಮಾರ್ಗದಲ್ಲಿ ಕ್ರಮಿಸಿದರೆ ಸಾಕು, ಅಲ್ಲಿ ಕಾಲುವೆಯ ಪಕ್ಕದ ಜಮೀನೊಂದರಲ್ಲಿ ಭಾರಿ ಗಾತ್ರದ ಹೆಬ್ಬಂಡೆ ಕಾಣುತ್ತವೆ. ಆ ಕ್ಲ್ಲಲು ಬಂಡೆ ಸುತ್ತ ಗಿಡಗಂಟೆ ಬೆಳೆದು ಬಂಡೆಯ ಬಹುತೇಕ ಭಾಗ ಆವರಿಸಿವೆ. ಈ ಬಂಡೆಯ ಸುಮಾರು 300 ಮೀಟರ್ ಅಂತರದಲ್ಲಿ ಒಂದು ಮರವಿದೆ. ಆ ಮರದ ಬುಡವನ್ನೂ ಕಲ್ಲು ಬಂಡೆಗಳು ಆವರಿಸಿವೆ. ಮರದ ಕೆಳಗೆ ನಿಂತು ಕೂಗಿದರೆ ನಮ್ಮ ಧ್ವನಿ ಪ್ರತಿಧ್ವನಿಯಾಗಿ ಹೊಮ್ಮತ್ತದೆ. ನಿಮ್ಮ ಶಬ್ದ ಜೋರಾದಂತೆ ಆ ಕಡೆಯಿಂದ ಬರುವ ಧ್ವನಿಯೂ ಜೋರಾಗಿಯೇ ಕೇಳುತ್ತದೆ. ಆದರೆ, ಆ ಬಂಡೆಯ ಅಕ್ಕಪಕ್ಕ ನಿಂತು ಕೂಗಿದರೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ.
ಚಿದರಹಳ್ಳಿ ಗ್ರಾಮ ನಾರಾಯಣಸ್ವಾಮಿ, ಸಿದ್ದೇಶ್ವರ, ಬೀರೇಶ್ವರ ಹಾಗೂ ಚಿಕ್ಕಮ್ಮ ತಾಯಿ, ಅಜ್ಜಮ್ಮ ಗುಜ್ಜಮ್ಮ ದೇವತೆಗಳ ನೆಲೆಬೀಡು. ಈ ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. `ನಮ್ಮೂರಿನಿಂದ ಜಮೀನಿಗೆ ಬರುವ ಕೃಷಿಕರು, ದನಗಾಯಿಗಳು ಇಲ್ಲಿ ನಿಂತು ಕೂಗುತ್ತ ಪ್ರತಿಧ್ವನಿಯನ್ನು ಕೇಳುತ್ತಾ ಮನರಂಜನೆ ಪಡುತ್ತಾರೆ~ ಎನ್ನುತ್ತಾರೆ ಗ್ರಾಮದ ರೈತ ಮುಖಂಡ ನಾಗೇಂದ್ರ ಸ್ವಾಮಿ.

ಈ ಎರಡು ಬಂಡೆ ಕಲ್ಲುಗಳನ್ನು ಕೆಲವರು ಒಡೆದು ಹಾಕಲು ಯತ್ನಸಿದ್ದಾರೆ. ಆಗ ಇಲ್ಲಿ ಸರ್ಪ ಕಾಣಿಸಿಕೊಂಡದ್ದರಿಂದ ಯಾರು ಇವುಗಳನ್ನು ಮುಟ್ಟುವ ಪ್ರಯತ್ನ ಮಾಡಿಲ್ಲ. ಗಿಡಗಂಟೆ ತೆಗೆದು ಹಾಕಿದರೆ ಇದೊಂದು ಆಕರ್ಷಣೀಯ ಕೇಂದ್ರವಾಗುತ್ತದೆ. ತಾಲ್ಲೂಕು ಆಡಳಿತ ಅಥವಾ ಪಂಚಾಯಿತಿ ಇದನ್ನು ಆಕರ್ಷಣೀಯ ತಾಣ ಮಾಡಬಹುದು ಎನ್ನುತ್ತಾರೆ ಸ್ಥಳೀಯರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT