ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಹಾಲು, ಮೊಸರು ರೂ 2 ತುಟ್ಟಿ

Last Updated 11 ಸೆಪ್ಟೆಂಬರ್ 2013, 13:54 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಮಾದರಿಯ ನಂದಿನ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಲಾಗಿದೆ. ಇದು ಬುಧವಾರದಿಂದ (ಸೆ.11) ಜಾರಿಗೆ ಬರಲಿದೆ ಎಂದು ಕೆಎಂಎಫ್‌ ತಿಳಿಸಿದೆ. ಪ್ರತಿ ಲೀಟರ್‌ ಟೋನ್ಡ್‌ ಹಾಲಿಗೆ ದಕ್ಷಿಣ ಕರ್ನಾಟಕದಲ್ಲಿ ರೂ 29 ಆದರೆ, ಉತ್ತರ ಕರ್ನಾಟಕದಲ್ಲಿ ರೂ 30 ಆಗಲಿದೆ.

ಚಿಲ್ಲರೆ ಸಮಸ್ಯೆ ತಪ್ಪಿಸಲು ಅರ್ಧ ಲೀಟರ್‌ ಹಾಲಿನ ದರವನ್ನು  25 ಮತ್ತು 50 ಪೈಸೆ ಬದಲಿಗೆ, ಮುಂದಿನ ಒಂದು ರೂಪಾಯಿಗೆ ಸರಿಮಾಡ­ಲಾಗಿದೆ. ಈ ಕಾರಣಕ್ಕಾಗಿ 15 ರಿಂದ 20 ಎಂ.ಎಲ್‌. ಹಾಲನ್ನು ಹೆಚ್ಚುವರಿ­ಯಾಗಿ ಪ್ಯಾಕ್‌ ಮಾಡಲಾ­ಗುವುದು ಎಂದು ಕೆಎಂಎಫ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT