ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಯಿಲ್ಲದೇ ಹೋದರೆ ಬದುಕು ದುಸ್ತರ

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಮನುಷ್ಯ - ಮನುಷ್ಯನ ನಡುವೆ ನಂಬಿಕೆಯಿಲ್ಲದೇ ಹೋದರೆ ಬದುಕು ದುಸ್ತರವಾಗುತ್ತದೆ~ ಎಂದು ಹಿರಿಯ ವಿದ್ವಾಂಸ ಡಾ.ರಂಗನಾಥ ಭಾರದ್ವಾಜ್ ಹೇಳಿದರು.

ನಗರದಲ್ಲಿ ಮಂಗಳವಾರ ಕರ್ನಾಟಕ ಹರಿದಾಸ ವೈಜ್ಞಾನಿಕ ಸಂಶೋಧನಾ ಕೇಂದ್ರ ಆಯೋಜಿಸಿದ್ದ `ವಿಜ್ಞಾನ ವೈಜಯಂತಿ -2012~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಒಬ್ಬ ಮನುಷ್ಯನೊಳಗೇ ಉತ್ತಮ ಹಾಗೂ ನೀಚ ಗುಣಗಳಿರುತ್ತವೆ. ಸಮಾಜದಲ್ಲಿ ಬಾಳುವ ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವವೂ ವಿಭಿನ್ನವಾಗಿದೆ. ಹೀಗಾಗಿ ಮನುಷ್ಯ ತನ್ನನ್ನು ತಾನು ಅರಿಯುವುದರ ಜೊತೆಗೆ ಸಮಾಜದಲ್ಲಿನ ಇತರರನ್ನೂ ತಿಳಿಯುವ ಹಾಗೂ ನಂಬುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹರಿದಾಸ ಸಾಹಿತ್ಯದ ಮೂಲ ಆಶಯವೂ ಇದೇ ಆಗಿದೆ~ ಎಂದು ಅವರು ನುಡಿದರು.

`ಜಾತಿ ಹಾಗೂ ಭಾಷೆಗಳ ಕಾರಣದಿಂದ ಸಮಾಜದಲ್ಲಿ ತಾರತಮ್ಯಗಳು ಏರ್ಪಡುತ್ತವೆ. ಆದರೆ ವ್ಯಕ್ತಿಯೊಳಗೇ ಇರುವ ತಾರತಮ್ಯಗಳನ್ನು ಗುರುತಿಸಿ, ಅದನ್ನು ಕಳೆದುಕೊಳ್ಳುವ ಕಾರ್ಯಗಳಾಗಬೇಕು~ ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿ ಸುಧಾ ದೇಶಪಾಂಡೆ ಅವರು `ದೈತ್ಯ ತಾರತಮ್ಯ~ ವಿಷಯವಾಗಿ ಮಾತನಾಡಿದರು.

ವಿವಿಧ ಮಹಿಳಾ ತಂಡಗಳ ಸದಸ್ಯರು ದೇವರನಾಮಗಳನ್ನು ಹಾಡಿದರು. ನಂತರ ವಿದ್ಯಾಪ್ರಸನ್ನ ತೀರ್ಥರು ರಚಿಸಿರುವ `ಜಿಹ್ವಾಚಾಪಲ್ಯ~ ನಾಟಕದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT