ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿದವರನ್ನು ಬೆಳೆಸಿದ ಬಂಗಾರಪ್ಪ

Last Updated 13 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಶಿರಸಿ: ಹಿಂದುಳಿದ ಸಮಾಜದ ನಾಯಕರಾಗಿ ಎಲ್ಲ ವರ್ಗದ ಜನರ ಪ್ರೀತಿ ಪಾತ್ರರಾಗಿದ್ದ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ರೈತ ಪರ ಕಾಳಜಿ, ಮಾದರಿ ಯೋಜನೆ ಗಳು ಇಂದಿನ ಜನಪ್ರತಿನಿಧಿಗಳಿಗೆ ಮಾದರಿ ಯಾಗಿವೆ ಎಂಬ ಅಭಿಪ್ರಾಯ ತಾಲ್ಲೂ ಕಿನ ಅಂಡಗಿ ಕ್ಯಾದಗಿಕೊಪ್ಪದ ಗುರು ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ವ್ಯಕ್ತ ವಾಯಿತು.

ನಾಮಧಾರಿ ಸಮುದಾಯದ ಪವಿತ್ರ ಸ್ಥಳ ಅಂಡಗಿ ಗುರುಮಠದ ಯೋಜಿತ ಕಟ್ಟಡಕ್ಕೆ ಎಸ್.ಬಂಗಾರಪ್ಪ ಅವರೇ ಅಡಿಗಲ್ಲು ಪೂಜೆ ನೆರವೇರಿ ಸಿದ್ದರು.

ಗುರುಮಠ, ಇಲ್ಲಿಗೆ ಸಮೀಪದ ಗುಡ್ನಾಪುರ ಬಂಗಾರಪ್ಪ ಅವರ ನಂಬಿಕೆಯ ಧಾರ್ಮಿಕ ಸ್ಥಳ. ಈ ಹಿನ್ನೆಲೆಯಲ್ಲಿ ಗುರುಮಠದಲ್ಲಿ ಬಂಗಾರಪ್ಪ ಅವರಿಗೆ ನಾಮಧಾರಿ ಸಮುದಾಯದಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಈ ವಿಷಯವನ್ನು ಗುರುಮಠದ ಉಪಾಧ್ಯಕ್ಷ ಸಿ.ಎಫ್. ನಾಯ್ಕ ತಿಳಿಸಿದರು.

ಗುರುಮಠದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ನೀಡುವ ಮೂಲಕ ಅನುಕೂಲ ಮಾಡಿಕೊಟ್ಟ ಬಂಗಾರಪ್ಪ ಅವರನ್ನು ಯುವ ಜನತೆ ನೆನಪಿಸಿಕೊಳ್ಳಬೇಕು ಎಂದರು.

ತನ್ನನ್ನು ನಂಬಿದ ಜನರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸಿದವರು ಬಂಗಾರಪ್ಪ. ಅನೇಕ ಯುವಕರನ್ನು ರಾಜಕೀಯದಲ್ಲಿ ಬೆಳೆಸಿದವರು ಎಂದರು. ನಾಮಧಾರಿ ಸಮುದಾ ಯದ ನಾಯಕ ಅನಿಲಕುಮಾರ ಮಾತ ನಾಡಿ, ರೈತಪರ ಕಾಳಜಿ ಹೊಂದಿದ್ದ ಬಂಗಾರಪ್ಪ ತಮ್ಮ ಕನಸು ಸಾಕಾರ ಗೊಳಿಸಿದವರು ಎಂದರು.

ಬಂಗಾರಪ್ಪ ಒಡನಾಡಿ ಬಿ.ಆರ್. ನಾಯ್ಕ ಮಾತನಾಡಿ ಕೆಲವೇ ವರ್ಷ ಅಧಿಕಾರ ಹೊಂದಿದ್ದರೂ ಬಂಗಾರಪ್ಪ ಶಾಶ್ವತ ಯೋಜನೆ ಜಾರಿಗೊಳಿಸಿದ ವರು. ಗಾಂಧೀಜಿ ರಾಮರಾಜ್ಯದ ಕಸನು ಜಾರಿಗೆ ಪ್ರಯತ್ನಿಸಿದವರು ಎಂದರು.

ಸಾಮಾಜಿಕ ಮುಖಂಡ ಆನಂದ ಗೌಡ ಮಾತನಾಡಿ, ಬಂಗಾರಪ್ಪ ವ್ಯಕ್ತಿ ಅಷ್ಟೇ ಅಲ್ಲ ಶಕ್ತಿಯೂ ಆಗಿದ್ದರು. ಅವರ ಒಡನಾಟದಲ್ಲಿದ್ದವರಿಗೆ ಆಡ ಳಿತದ ಕಲೆ ಕಲಿಸಿದವರು ಎಂದರು.

ಪ್ರಮುಖರಾದ ಎಲ್.ಟಿ.ಪಾಟೀಲ, ಬಿ.ಎಫ್.ಬೆಂಡಿಗೇರಿ, ಎಂ.ಎಸ್. ನಾಯ್ಕ ಮತ್ತಿತರರು ಇದ್ದರು. ರವಿ ನಾಯ್ಕ ಕಲಕರಡಿ, ಸತೀಶ ನಾಯ್ಕ ಮತ್ತಿತರರು ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT