ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ರೈತ ಸಂಘಟನೆ ಬಗ್ಗೆ ಎಚ್ಚರವಿರಲಿ: ಪಚ್ಚೆ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನಕಪುರ:  `ಸಮಾಜದಲ್ಲಿ ದುರ್ಮಾರ್ಗದ ಮೂಲಕ ಹಣ ಮಾಡುವುದನ್ನೇ ದಂಧೆ ಮಾಡಿಕೊಂಡಿರುವ ಕೆಲವರು ನಕಲಿ ರೈತ ಸಂಘಟನೆ ಹೆಸರಿನಲ್ಲಿ ನಿಮ್ಮ ಮುಂದೆ ಬರಲು ಯತ್ನಿಸುತ್ತಿದ್ದಾರೆ. ಅಂಥವವರ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಬೇಕು~ ಎಂದು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷರಾದ ಪಚ್ಚೆ ನಂಜುಂಡಸ್ವಾಮಿ ರೈತರನ್ನು ಎಚ್ಚರಿಸಿದರು.

ಪಟ್ಟಣದ ರೈತ ಸಂಘದ ಕಾರ್ಯಾಲಯದ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ಸಂಘದಿಂದ ಉಚ್ಚಾಟಿಸಲ್ಪಟ್ಟಿರುವ ಗಬ್ಬಾಡಿ ಲಕ್ಷ್ಮೀನಾರಾಯಣ ಗೌಡ ಅವರು ಇತ್ತೀಚೆಗೆ ರಾಮನಗರದ ಜಾನಪದ ಲೋಕದಲ್ಲಿ ಮಾತನಾಡಿ, ಪ್ರೊ. ನಂಜುಂಡಸ್ವಾಮಿಯವರ ಕುರಿತು ಅವಹೇಳನಕಾರಿ ಭಾಷಣ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.

ಪ್ರೊಫೆಸರ್ ಅವರ ಭಾವಚಿತ್ರವನ್ನು ಬಳಸಿಕೊಂಡು ರೈತರ ಹೆಸರಿನಲ್ಲಿ ಸಂಘಟನೆ ಮಾಡಲು ಹೊರಟಿರುವ ಲಕ್ಷ್ಮೀನಾರಾಯಣ ಗೌಡ ನಂಜುಂಡಸ್ವಾಮಿಯವರ ವಿರುದ್ಧ ಮಾತಾಡುವ ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ ಎಂದರು.

ರಾಜಕೀಯ ಅವಕಾಶಕ್ಕಾಗಿ ಎಲ್ಲಾ ಪಕ್ಷಗಳ ಕದತಟ್ಟಿ ಎಲ್ಲೂ ಮನ್ನಣೆ ಸಿಗದೆ ಬರಿಗೈಯಲ್ಲಿ ವಾಪಸ್ಸಾಗಿ ಮನೆ ಸೇರಿಕೊಂಡಿದ್ದ ಅವರು ಮತ್ತೆ ರೈತ ಸಂಘಟನೆಯ ಒಳ ಪ್ರವೇಶಿಸಲು ಯತ್ನ ನಡೆಸಿದ್ದಾರೆ. ಇದಕ್ಕೆ ನೈಜ ರೈತ ಸಂಘಟನೆಯವರು ಮಾನ್ಯತೆ ನೀಡದಿದ್ದಾಗ ಸ್ವಘೋಷಿತ ರೈತ ಸಂಘ ರಚಿಸಿಕೊಂಡು ಅದಕ್ಕೆ ತಾವೇ ರಾಜ್ಯ ಸಂಚಾಲಕರೆಂದು ಕಟೌಟ್‌ಗಳನ್ನು ಹಾಕಿಸಿಕೊಂಡು ರೈತರನ್ನು ವಂಚಿಸಲು ಹೊರಟಿದ್ದಾರೆ.

ಹೋರಾಟದ ಸೋಗಿನಲ್ಲಿ ರೈತರ ಮುಂದೆ ಬರುತ್ತಿರುವ ಇವರ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಅವರು ತಿಳಿಸಿದರು.

ಸಂಘಟನೆಯ ಹೆಸರಿನಲ್ಲಿ ಲಕ್ಷ್ಮೀನಾರಾಯಣ ಗೌಡರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೊಂದಾಯಿತ ಸಂಘಟನೆಗಳಾಗಿದ್ದು ಇವುಗಳ ವಿರುದ್ಧವಾಗಿ ಅಥವಾ ಈ ಸಂಘಟನೆ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ರೈತ ಸಂಘವು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಿದೆ ಎಂದು ಪಚ್ಚೆ ನಂಜುಂಡಸ್ವಾಮಿ ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT