ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯರ ನಿಯಂತ್ರಣಕ್ಕೆ ಪರಿಹಾರ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಕಲಿ ವೈದ್ಯರ ಹಾವಳಿ  ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಷ್ಟ್ರ­ವ್ಯಾಪಿ ಸಮಸ್ಯೆ. ಕೆಲವು ಕಾಲೇಜಿನ ಆಡಳಿತ ವರ್ಗದವರು ಹಣ ಮಾಡುವ ಉದ್ದೇಶದಿಂದ ಅರ್ಹತೆ ಇಲ್ಲದವರಿಗೆಲ್ಲಾ ಸರ್ಟಿಫಿಕೇಟ್‌ ಕೊಟ್ಟು ‘ನಕಲಿ ವೈದ್ಯ’ರ ಸೃಷ್ಟಿಗೆ ಕಾರಣ­ವಾಗಿದ್ದಾರೆ. ಜೊತೆಗೆ ನಿರುದ್ಯೋಗ ಸಮಸ್ಯೆಯೂ ನೀರೆರೆದಿದೆ.

ನಕಲಿಗಳ ಸೃಷ್ಟಿಯಲ್ಲಿ ನರ್ಸಿಂಗ್‌ ಹೋಮ್‌ಗಳು ಸಹ ಹಿಂದೆ ಬಿದ್ದಿಲ್ಲ. ಅಲ್ಲಿ ಎಸ್‌.ಎಸ್‌.ಎಲ್‌.ಸಿ. ಅಥವಾ ಪಿ.ಯು.ಸಿ. ಕಲಿತವರನ್ನು ವಾರ್ಡ್‌ ಬಾಯ್‌ ಹಾಗೂ ಚಿಕ್ಕಪುಟ್ಟ ಕೆಲಸಕ್ಕೆ ನೇಮಕ ಮಾಡಿಕೊಂಡಿ ರುತ್ತಾರೆ. ವೈದ್ಯರು ನೀಡುವ ಚಿಕಿತ್ಸೆ ಯನ್ನು ಅವರು ಹತ್ತಿರದಿಂದ ನೋಡಿರು ತ್ತಾರೆ. ಅಂಥ­ವರಲ್ಲಿ ಕೆಲವರು ಭಂಡ ಧೈರ್ಯದಿಂದ ಹೆಸರಿನೊಂದಿಗೆ ‘ಡಾ.’ ಸೇರಿಸಿಕೊಂಡು ‘ವೈದ್ಯವೃತ್ತಿ’ಗೆ ಇಳಿದುಬಿಡುತ್ತಾರೆ.

ಸರ್ಕಾರ, ‘ಫಾರ್ಮಸಿ ಸರ್ಟಿಫಿಕೇಟ್‌’ ಹೊಂದಿರುವವರನ್ನು ನಿರ್ಲಕ್ಷ್ಯ ಮಾಡಿದೆ. ಅಲೋಪಥಿ ಮೆಡಿಸಿನ್‌, ಎಂ.ಬಿ.ಬಿ.ಎಸ್‌. ಡಾಕ್ಟರುಗಳಿಗೆ ಬಿಟ್ಟರೆ ಗೊತ್ತಿರುವುದು ಫಾರ್ಮಸಿಸ್ಟ್‌ಗಳಿಗೆ ಮಾತ್ರ. ಸರ್ಕಾರ ಅಂಥವರನ್ನು ಗುರು­ತಿಸಿ (ಡಿ. ಫಾರ್ಮಾ, ಬಿ. ಫಾರ್ಮಾ), ಅವರಿಗೆ  ಅಗತ್ಯ ತರಬೇತಿ ನೀಡಿ, ಅವರ ಸೇವೆಯನ್ನು ಯುಕ್ತ ರೀತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಳಸಿಕೊಳ್ಳ­ಬಹುದು. ಈ ಮೊದಲು ಆರ್‌.ಎಂ.ಪಿ. ಸರ್ಟಿಫಿಕೇಟನ್ನು  ಸರ್ಕಾರ ಕೊಡುತ್ತಿತ್ತು. ಆ ಮಾದರಿಯ ಪ್ರಮಾಣ ಪತ್ರವನ್ನು  ಫಾರ್ಮಸಿಸ್ಟ್‌ ಗಳಿಗೆ ಕೊಡಬಹುದು. ಈ ಮೂಲಕ ‘ನಕಲಿ ವೈದ್ಯ’ರನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT