ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸಹಿ ಬಳಸಿ ವಂಚನೆ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತ ಆಶ್ರಯ್‌ ಎಂಬಾತ ಇಲಾಖೆ­ಯ ಉಪ ನಿರ್ದೇಶಕ ಈಶ್ವರಮೂರ್ತಿ ಅವರ  ಸಹಿ­ಯನ್ನು ನಕಲು ಮಾಡಿ ಬ್ಯಾಂಕ್‌ನಿಂದ ₨ 6.40 ಲಕ್ಷ ಡ್ರಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈಶ್ವರಮೂರ್ತಿ ಅವರ ಕಚೇರಿಯಲ್ಲಿ ಕೆಲಸ ಮಾಡು­ತ್ತಿದ್ದ ಆಶ್ರಯ್‌, ಸೆ.21ರಂದು ಈ ಕೃತ್ಯ ಎಸಗಿದ್ದಾನೆ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿ­ದ್ದಾರೆ.

ಈಶ್ವರಮೂರ್ತಿ, ತಮ್ಮ ಕಚೇರಿ ದೂರವಾಣಿಯ ಬಿಲ್‌ನ ಮೊತ್ತವನ್ನು ಪಾವತಿಸಲು ಆತನಿಗೆ ಬ್ಯಾಂಕ್‌ ಚೆಕ್‌ ಪುಸ್ತಕವನ್ನು ಕೊಟ್ಟಿದ್ದರು. ಆರೋ­ಪಿಯು ಎರಡು ಚೆಕ್‌ಗಳಿಗೆ ಈಶ್ವರಮೂರ್ತಿ ಅವರ ಸಹಿಯನ್ನು ನಕಲು ಮಾಡಿ, ಕಾರ್ಪೊರೇಷನ್‌ ಬ್ಯಾಂಕ್‌ನ ಮಲ್ಲೇಶ್ವರ 18ನೇ ಮುಖ್ಯರಸ್ತೆ ಶಾಖೆಯಿಂದ ಹಣ ಡ್ರಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಈಶ್ವರಮೂರ್ತಿ ಮಂಗಳವಾರ ದೂರು ನೀಡಿದ್ದಾರೆ. ವಂಚನೆ, ನಂಬಿಕೆ ದ್ರೋಹ ಮತ್ತು ನಕಲಿ ಸಹಿ ಬಳಕೆ ಆರೋಪದ ಮೇಲೆ ಆಶ್ರಯ್‌ ವಿರುದ್ಧ ಪ್ರಕರಣ ದಾಖಲಿಸಿ­ಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT