ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ನಾಯಕ ಉಸೇಂಡಿ ಶರಣು

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಪ್ರಮುಖ ಮಾವೊ­ವಾದಿ ನಾಯಕ ರಾದ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿಯ ವಕ್ತಾರ ಗುಮುದವೆಲ್ಲಿ ವೆಂಕಟಕೃಷ್ಣ ಪ್ರಸಾದ್‌ ಅಲಿಯಾಸ್‌ ಗುಡ್ಸಾ ಉಸೇಂಡಿ ಪತ್ನಿ ರಾಜಿಯೊಂದಿಗೆ ಬುಧವಾರ ಹೈದರಾಬಾದ್‌ನ ವಿಶೇಷ ಗುಪ್ತಚರ ದಳಕ್ಕೆ ಶರಣಾಗಿದ್ದಾನೆ.

ಈ  ಶರಣಾಗತಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಅನಾರೋಗ್ಯ­ದಿಂದಾಗಿ ಆತ ಶರಣಾಗಿದ್ದಾನೆ ಎಂದು ಅನಧಿಕೃತ ಮೂಲಗಳು ಹೇಳಿವೆ. ನಕ್ಸಲ್‌ ಚಿಂತನೆಯಿಂದ ಭ್ರಮನಿರಸನಗೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲ್‌ ಹೋರಾಟಕ್ಕೆ ಇದು ದೊಡ್ಡ ಹಿನ್ನಡೆ ಎಂದು ಶರಣಾ­ಗತಿ­­ಯನ್ನು ಪೊಲೀಸರು ವಿಶ್ಲೇಷಿಸು­ತ್ತಿ­ದ್ದಾರೆ. ಈತನ ವಿಚಾರಣೆ ನಡೆಸಲಾ­ಗು­ತ್ತಿದ್ದು ಗುರುವಾರ ಬಂಧನ ಸುದ್ದಿ ಪ್ರಕ­­­ಟ­­ವಾ­ಗುವ ಸಾಧ್ಯತೆ ಇದೆ. ಇವ­ರನ್ನು ಹಿಡಿದು ಕೊಟ್ಟವರಿಗೆ ₨ 15 ಲಕ್ಷ ನಗದು ಬಹುಮಾನ ಘೋಷಿಸ­ಲಾಗಿತ್ತು.

53 ವರ್ಷ ವಯಸ್ಸಿನ ಉಸೇಂಡಿ ಕಳೆದ ಮೂರು ದಶಕಗಳಿಂದ ನಕ್ಸಲ್‌ ಹೋರಾಟದಲ್ಲಿ ತೊಡಗಿಕೊಂಡಿದ್ದನು. ಈತ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತ್ಯದ ವಾರಂಗಲ್‌ ಜಿಲ್ಲೆಯವನು. ನಕ್ಸಲರು ಇವರನ್ನು  ಬುದ್ಧಿಜೀವಿ ಮತ್ತು ಕಾರ್ಯತಂತ್ರ ನಿಪುಣ ಎಂದು ಗೌರವಿಸುತ್ತಿದ್ದರು. 

ಇತ್ತೀಚೆಗೆ ಛತ್ತೀಸಗಡದ ಬಸ್ತರ್‌ನಲ್ಲಿ ನಕ್ಸಲರು ಕಾಂಗ್ರೆಸ್‌ ನಾಯಕರ ಕಾರುಗಳ ಸಾಲಿನ ಮೇಲೆ ದಾಳಿ ನಡೆಸಿ 27 ಜನರ ಸಾವಿಗೆ ಕಾರಣರಾಗಿದ್ದರು. ಈ ದಾಳಿಯನ್ನು ಈತನೇ ಸಂಘಟಿಸಿದ್ದ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT