ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬಡವರಿಗೆ ಮನೆ: ರೂ. 45 ಸಾವಿರ ಕೋಟಿ ಬೇಡಿಕೆ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಗರ ಪ್ರದೇಶದ ಬಡ ಜನತೆಗೆ ರಿಯಾಯ್ತಿ ದರದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲು ರಾಜೀವ್ ಆವಾಸ್ ಯೋಜನೆಯ 2ನೇ ಹಂತಕ್ಕೆ ರೂ. 45,000 ಕೋಟಿ ಒದಗಿಸಲು ಯೋಜನಾ ಆಯೋಗಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಲಾಯಿತು.

ಪ್ರಶ್ನೋತರ ಅವಧಿಯಲ್ಲಿ ಈ ಮಾಹಿತಿ ನೀಡಿದ ವಸತಿ, ನಗರ ಬಡತನ ನಿರ್ಮೂಲನ ಖಾತೆ ಸಚಿವ ಅಜಯ್ ಮಾಕೆನ್, ದೇಶವನ್ನು ಕೊಳೆಗೇರಿ ಮುಕ್ತವಾಗಿಸಲು ರಾಜೀವ್ ಆವಾಸ್ ಯೋಜನೆಯನ್ನು ಕಳೆದ ವರ್ಷದ ಜೂನ್‌ನಲ್ಲಿ ಆರಂಭಿಸಲಾಗಿದೆ. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ (ಜೆಎನ್‌ಎನ್‌ಯುಆರ್‌ಎಂ) ಅಡಿಯಲ್ಲಿ ಕೊಳೆಗೇರಿಗಳಲ್ಲಿ 15.7 ಲಕ್ಷ ಮನೆಗಳ ನಿರ್ಮಾಣ ಇಲ್ಲವೆ ಆಧುನಿಕರಣ, ಕುಡಿಯುವ ನೀರು ಪೂರೈಕೆ, ಶೌಚಾಲಯ ವ್ಯವಸ್ಥೆಗಾಗಿ ರೂ. 41,723.13 ಕೋಟಿಗೂ ಅಧಿಕ ಮೊತ್ತವನ್ನು ಮಂಜೂರು ಮಾಡಲಾಗಿದೆ.

ಈ ಪೈಕಿ ಈಗಾಗಲೇ 9.92 ಲಕ್ಷ ಮನೆಗಳು ನಿರ್ಮಾಣವಾಗಿವೆ ಇಲ್ಲವೆ ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದರು.ನಗರ ಪ್ರದೇಶದಲ್ಲಿ ಬಡವರ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತಾಗಲು ರಾಜೀವ್ ಆವಾಸ್ ಯೋಜನೆಯ 2ನೇ ಹಂತಕ್ಕೆ ಹೆಚ್ಚು ಹಣ ನೀಡಲು ಯೋಜನಾ ಆಯೋಗವನ್ನು ಕೇಳಿಕೊಳ್ಳಲಾಗಿದೆ. ಬಡವರ ವರ್ಗದಡಿ 2004-05ರ ಅವಧಿಯಲ್ಲಿ ಪರಿಶಿಷ್ಟ ಜಾತಿಯವರ ಪಾಲು ಶೇ 40.6 ಆಗಿದ್ದರೆ, ಈ ಪ್ರಮಾಣ 2009-10ರಲ್ಲಿ ಶೇ 34.1 ಮಾತ್ರ ಎಂದು ದಾಖಲಾಗಿದೆ. ಇದೇ ಅವಧಿಯಲ್ಲಿ ಪರಿಶಿಷ್ಟ ವರ್ಗದವರ ಪಾಲು ಶೇ 35.5 ರಿಂದ ಶೇ 30.4ಕ್ಕೆ ಇಳಿದಿದೆ ಎಂದು ವಿವರಿಸಿದರು.

ಇಂತಹ ಯೋಜನೆಗಳ ಫಲಾನುಭವಿಗಳಾಗಲು ಬಡತನದ ಮಾನದಂಡ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಾಕನ್, ಯೋಜನಾ ಆಯೋಗದ ಅನ್ವಯ ಕುಟುಂಬದ ಮಾಸಿಕ ಆದಾಯ ರೂ. 4,824ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಕುಟುಂಬ ಬಡ ಕುಟುಂಬ ಎನಿಸಿಕೊಳ್ಳುತ್ತದೆ. ಆದರೆ ಕುಟುಂಬದ ಮಾಸಿಕ ಆದಾಯಕ್ಕಿಂತ ಮುಖ್ಯವಾಗಿ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳೂ ಸಹ `ಬಡ ಕುಟುಂಬ' ಘೋಷಣೆಗೆ ನೆರವಾಗುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT