ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳಿಗೆ ಸೌಕರ್ಯ ಸವಾಲಿನ ಕೆಲಸ

Last Updated 1 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆ 50 ಕೋಟಿಗೆ ತಲುಪುವ ಅಂದಾಜು ಇದೆ. ಅಷ್ಟೊಂದು ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸ’ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

ನಗರದಲ್ಲಿ ನಡೆದ ಉತ್ತಮ ಪದ್ಧತಿಗಳ ವಿಚಾರಗೋಷ್ಠಿ ಹಾಗೂ ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.

‘ಬೃಹತ್ ಪ್ರಮಾಣದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಯೋಚಿಸಬೇಕಾಗಿದೆ’ ಎಂದು ಅವರು ತಿಳಿಸಿದರು.

ಬಹುಮಾನ: ಸ್ಥಳೀಯ ನಗರ, ಪಟ್ಟಣ ಸಂಸ್ಥೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟು ಮಾಡಲು ಅತ್ಯುತ್ತಮ ನಗರ, ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ನೀಡುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

‘ಮುಂದಿನ ವರ್ಷವನ್ನು ‘ನಗರಾಭಿವೃದ್ಧಿ ವರ್ಷ’ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಹೊಸ ನೀತಿಯನ್ನು ಅಳವಡಿಸಲಾಗುವುದು’ ಎಂದು ಅವರು ತಿಳಿಸಿದರು.

ಬಂದರು ಖಾತೆ ಸಚಿವ ಕೃಷ್ಣಪಾಲೇಮಾರ್, ಮುಖ್ಯಮಂತ್ರಿಗಳ ಸಲಹೆಗಾರ (ನಗರ ವ್ಯವಹಾರ) ಡಾ.ಎ. ರವೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

ಬಹುಮಾನ ಪುರಸ್ಕೃತ ಸಂಸ್ಥೆಗಳು:
ಮಹಾನಗರ ಪಾಲಿಕೆ ವಿಭಾಗ: ಮೈಸೂರು (ರೂ 10 ಲಕ್ಷ), ಮಂಗಳೂರು (ರೂ 3 ಲಕ್ಷ), ಬೆಳಗಾವಿ (ರೂ 2 ಲಕ್ಷ).
ನಗರ ಸಭೆ ವಿಭಾಗ: ಉಡುಪಿ (ರೂ 5 ಲಕ್ಷ), ಗೋಕಾಕ (ರೂ 2 ಲಕ್ಷ), ಶಿವಮೊಗ್ಗ (ರೂ 1 ಲಕ್ಷ).
ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ವಿಭಾಗ: ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).

ಇತರೆ ಬಹುಮಾನಗಳು; ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಮುನಿಸಿಪಲ್ ರಿಫಾರ್ಮಸ್ ಸೆಲ್,  ರೆವಿನ್ಯೂ ಬಿಲ್ಲಿಂಗ್ ವ್ಯವಸ್ಥೆ ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).

ಇತರೆ ಬಹುಮಾನಗಳು: ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಸ್ಥಳಿಯಾಡಳಿತ ಸುಧಾರಣಾ ಘಟಕ, ಕಂದಾಯ ಬಿಲ್ಲಿಂಗ್ ವ್ಯವಸ್ಥೆಗೆ ಕರ್ನಾಟಕ ರಾಜ್ಯ ಪೊಲೀಸ್ ಗೃಹನಿರ್ಮಾಣ ನಿಗಮಕ್ಕೆ ಬಹುಮಾನ ದೊರೆತಿದೆ.

ಸಮುದಾಯ ಪಾಲ್ಗೊಳ್ಳುವಿಕೆ ನಿಧಿ (ಸಿಪಿಎಫ್) ಉಪಯೋಗಿಸಿದ್ದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಗೆ, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ, ಕಟ್ಟಡ ನಿರ್ಮಾಣ ನಕ್ಷೆ ಅನುಮೋದನೆ ನಿರ್ವಹಣೆ ವ್ಯವಸ್ಥೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ, ನೀರಿನ ದರ ಪದ್ಧತಿ ಕುರಿತು ಅಳವಡಿಸಲಾದ ಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಜಲಪೂರೈಕೆ ಮತ್ತು ಒಳಚರಂಡಿ ಮಂಡಳಿಗೆ ಬಹುಮಾನ ನೀಡಲಾಗಿದೆ.

ಮಳೆ ನೀರು ಸಂಗ್ರಹಕ್ಕಾಗಿ ಚಿತ್ರದುರ್ಗ ನಗರಸಭೆಗೆ, ವರಮಾನವಿಲ್ಲದ ನೀರನ್ನು ಉಳಿಸಲು ಕ್ರಮಕೈಗೊಂಡಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಘನತ್ಯಾಜ್ಯ ನಿರ್ವಹಿಸಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಕಾರವಾರ ನಗರಸಭೆಗೆ, ಸಂಕೇಶ್ವರ ಪುರಸಭೆಗೆ, ಪರಿಶಿಷ್ಟರಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದಕ್ಕಾಗಿ ಹಿರೇಕೆರೂರು  ಪುರಸಭೆಗೆ ಬಹುಮಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT