ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಅಮೆರಿಕ ಕಾರ್ನರ್ ಆರಂಭ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಮೆರಿಕದ ಬಗ್ಗೆ ಎಲ್ಲರಿಗೂ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗಿದೆ~ ಎಂದು ಅಮೆರಿಕದ ಕಾನ್ಸುಲ್ ಜನರಲ್ ಜೆನ್ನಿಫರ್ ಮ್ಯಾಕ್ ಇನ್‌ಟೈರ್ ಹೇಳಿದರು.

ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಅಮೆರಿಕ ಕಾರ್ನರ್ ಕೇಂದ್ರದ ನೂತನ ಆವರಣ ಉದ್ಘಾಟಿಸಿ ಮಾತನಾಡಿದರು.

`ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್‌ನ ಸಾರ್ವಜನಿಕ ವ್ಯವಹಾರಗಳ ಕಚೇರಿಯು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ 2004ರಲ್ಲಿ ಬೆಂಗಳೂರಿನಲ್ಲಿ ಅಮೆರಿಕ ಕಾರ್ನರ್ ಕಚೇರಿ ತೆರೆಯಿತು. ಈ ಕೇಂದ್ರದಲ್ಲಿ ಅಮೆರಿಕದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಷಯಗಳ ನಿಖರ ಮಾಹಿತಿ ದೊರೆಯುತ್ತದೆ~ ಎಂದರು.

`ಬೆಂಗಳೂರು ಕೇಂದ್ರವು  ಪ್ರತಿ ಶನಿವಾರ ಅಮೆರಿಕದ ಅತ್ಯುತ್ತಮ ಚಲನಚಿತ್ರಗಳನ್ನು ಕೇಂದ್ರದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೇಂದ್ರವು ಈವರೆಗೆ 1000ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು, ಹಲವು ಪ್ರಕಟಣೆ ಹೊರತಂದಿರುವುದು ಸಂತಸ ತಂದಿದೆ~ ಎಂದರು.

`ಕೇಂದ್ರದಲ್ಲಿ ಹೊಸದಾಗಿ ಮೂರು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಯುವಜನತೆಗೆ ಅನುಕೂಲವಾಗುವ 70 ಪುಸ್ತಕಗಳನ್ನು ನೀಡಲಾಗಿದೆ. ಮುಂದೆಯೂ ಹಂತ ಹಂತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು~ ಎಂದು ಹೇಳಿದರು. ಭಾರತೀಯ ವಿದ್ಯಾ ಭವನದ (ಕರ್ನಾಟಕ) ಅಧ್ಯಕ್ಷ ಎನ್. ರಾಮಾನುಜ ಇತರರು  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT