ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಮೇ 13, ಭಾನುವಾರಅಖಿಲ ಕರ್ನಾಟಕ ಮಕ್ಕಳ ಕೂಟ : ಕೋಟೆ ಪ್ರೌಢಶಾಲೆಯ ಹಿಂಭಾಗ, ಚಾಮರಾಜಪೇಟೆ. ಅಮೃತ ಮಹೋತ್ಸವ ಸಮಾರಂಭ ಹಾಗೂ ಸ್ಥಾಪಕಿ ಆರ್.ಕಲ್ಯಾಣಮ್ಮನವರ ಪುತ್ಥಳಿ ಅನಾವರಣ. ಅತಿಥಿಗಳು - ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಮೇಯರ್ ಡಿ.ವೆಂಕಟೇಶ ಮೂರ್ತಿ. ಬೆಳಿಗ್ಗೆ 10.30.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ : ಸಭಾಂಗಣ, ಟೆರಿ ಕಾಂಪ್ಲೆಕ್ಸ್, 4 ನೇ ಮುಖ್ಯರಸ್ತೆ, 2 ನೇ ಅಡ್ಡರಸ್ತೆ, ದೊಮ್ಮಲ್ಲೂರು ಎರಡನೇ ಹಂತ. ಭಾರತದಲ್ಲಿ ಚುನಾವಣಾ ಸುಧಾರಣೆಗಳ ಕುರಿತ ವಿಚಾರಗೋಷ್ಠಿ. ಅತಿಥಿಗಳು - ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ, ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ. ಸಂಜೆ 5.

ಬಸವೇಶ್ವರ ಸೇವಾ ಸಮಿತಿ ಮತ್ತು ಅಕ್ಕನ ಬಳಗ ಮಹಿಳಾ ಸಮಾಜ :
ಬಸವ ಸದನ, ನಂ. 48, ರಾಜಮಹಲ್ ವಿಲಾಸ್, ಒಂದನೇ `ಎ~ ಅಡ್ಡರಸ್ತೆ, ಎರಡನೇಹಂತ, ಮೂರನೇ ಘಟ್ಟ, ದೇವಸಂದ್ರ. ಬಸವ ಜಯಂತಿ ಹಾಗೂ ಶರಣ ಸಂಗಮ. ಉದ್ಘಾಟನೆ - ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾನಿಧ್ಯ - ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು. ಬೆಳಿಗ್ಗೆ 10.30.

ಸುಚಿತ್ರ ಕಲಾ ಕೇಂದ್ರ: ಸುಚಿತ್ರ ಸಭಾಂಗಣ, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, `ಕನ್ನಡ ಚಿಂತನೆ~ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್ ಅವರಿಂದ ಹಿರಿಯ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ ಕುರಿತು ಉಪನ್ಯಾಸ. ನಂತರ ಚಾಮರಾಜನಗರದ ಶಾಂತಲಾ ಕಲಾವಿದರಿಂದ `ಧರ್ಮಾಕ್ರಸಿ~ ನಾಟಕ ಪ್ರದರ್ಶನ. ನಿರ್ದೇಶನ ಬಿ.ಎಸ್. ವಿನಯ್. ಸಂಜೆ 6.

ರಂಗಾಭರಣ ಕಲಾಕೇಂದ್ರ: ಕೆ.ಇ.ಬಿ. ಬಡಾವಣೆ, ಸಂಜಯ ನಗರ. ಪ್ರತಿಭಾ ಕಾರಂಜಿ ಹಾಗೂ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ. ಅತಿಥಿಗಳು: ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಸಾಹಿತಿ ಡಾ. ಎಲ್.ಹನುಮಂತಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್. ಸಂಜೆ 5.

`12.3~ ಗ್ಲೋಬಲ್ ಆರ್ಗನೈಸೇಷನ್ : ಯವನಿಕ ಸಭಾಂಗಣ, ನೃಪತುಂಗ ರಸ್ತೆ. ಅಂಗವಿಕಲರಿಗಾಗಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ. ಉದ್ಘಾಟನೆ - ಕೊಳದಮಠದ ಶಾಂತವೀರ ಸ್ವಾಮೀಜಿ, ಅತಿಥಿ - ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ರಾಜಣ್ಣ.   ಬೆಳಿಗ್ಗೆ 10.

ಕೃಷಿ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್ತು :
ನಾರ್ತ್ ಬ್ಲಾಕ್ ಸಭಾಂಗಣ, ಜಿಕೆವಿಕೆ ಕ್ಯಾಂಪಸ್. ವಾರ್ಷಿಕ ಸಭೆ ಮತ್ತು ತೊಗರಿ ಬೆಳೆಯ ಕುರಿತ ಮೂರು ದಿನಗಳ ಸಂಶೋಧನಾ ಕಾರ್ಯಾಗಾರ. ಅತಿಥಿಗಳು - ನವದೆಹಲಿಯ ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ನಿರ್ದೇಶಕ ಡಾ.ಸ್ವಪನ್ ಕೆ. ದತ್ತ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ. ಬೆಳಿಗ್ಗೆ 9.30.

ಕಾಲೇಜು ಶಿಕ್ಷಣ ಇಲಾಖೆ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ದೃಷ್ಟಿಮಾಂದ್ಯ ವಿದ್ಯಾರ್ಥಿಗಳಿಗಾಗಿ ಕೇಳು ಪುಸ್ತಕಗಳ ಬಿಡುಗಡೆ. ಅತಿಥಿಗಳು - ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ, ಯು.ಜಿ.ಸಿ.ಎಸ್.ಡಬ್ಲ್ಯು.ಆರ್.ಬಿ ಉಪ ಕಾರ್ಯದರ್ಶಿ ಡಾ.ಎನ್. ಗೋಪುಕುಮಾರ್, ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ರಾಜಣ್ಣ. ಬೆಳಿಗ್ಗೆ 10.30.

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ : ಪುರಭವನ, ಜೆ.ಸಿ.ರಸ್ತೆ. ಅಖಿಲ ಕರ್ನಾಟಕ ತೃತೀಯ ಕವಿ ಸಮ್ಮೇಳನ. ಅತಿಥಿಗಳು - ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯ, ಎಚ್.ಎಂ.ರೇವಣ್ಣ, ಹಿರಿಯ ನಟ ಶಿವರಾಂ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ, ಕವಿ ಎಲ್.ಹನುಮಂತಯ್ಯ. ಸಾಹಿತಿ ಶೂದ್ರ ಶ್ರೀನಿವಾಸ್. ಸಾನಿಧ್ಯ - ಕೂಡಮ ಸಂಗಮದ ಪಂಚಮಶಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಸಂಜೆ 6.

ಮೈಕ್ರೊ ಗ್ರಾಮ್ : ಎಂ.ಎಚ್.ಎಸ್. ಸಭಾಂಗಣ, ಲಾಲ್‌ಬಾಗ್ ಪೂರ್ವ ಗೇಟ್. ವಿಶ್ವ ತಾಯಂದಿರ ದಿನದ ಆಚರಣೆ. ಅತಿಥಿಗಳು - ಸ್ತ್ರೀ ರೋಗ ತಜ್ಞೆ ಡಾ.ಮೀನಾಕ್ಷಿ ರಾಮೂ ಭರತ್, ಶ್ವೇತಾ ಶೆಟ್ಟರ್. ಸಂಜೆ 3.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್ ಬಸವನಗುಡಿ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ `ಶ್ವೇತಾಶ್ವತರೋಪನಿಷತ್ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 9.
ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವಪುರಂ. ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ ಉಪನ್ಯಾಸ. ಬೆಳಿಗ್ಗೆ 7.45.

ಶರಣರ ಬಳಗ : ತೋಂಟದ ಸಿದ್ಧಲಿಂಗೇಶ್ವರ ಸಮುದಾಯ ಭವನ, 16 ನೇ ಮುಖ್ಯರಸ್ತೆ, 7 ನೇ ಅಡ್ಡರಸ್ತೆ, ಎರಡನೇ ಹಂತ, ಬಿಟಿಎಂ ಬಡಾವಣೆ. ಬಸವ ಜಯಂತಿ ಆಚರಣೆ. ಅತಿಥಿಗಳು - ಸುಪ್ರೀಂ ಕೋರ್ಟ್‌ನ ನಿವೃತ್ತ ನಾಯಮೂರ್ತಿ ಶಿವರಾಜ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನು ಬಳಿಗಾರ್, ಶಾಸಕ ರಾಮಲಿಂಗಾರೆಡ್ಡಿ. ಬೆಳಿಗ್ಗೆ 11.

ಗಾಯತ್ರಿ ವಿಶ್ವಕರ್ಮ ಪಬ್ಲಿಕ್ ಮತ್ತು ಚಾರಿಟಬಲ್ ಟ್ರಸ್ಟ್: 4ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ವಿಶ್ವಕರ್ಮ ದೇವಸ್ಥಾನ ರಸ್ತೆ, ಹಂಪಿನಗರ, ವಿಜಯನಗರ. ಸಂಕಷ್ಟಹರ ಗಣಪತಿ, ಶ್ರೀ ವಿಶ್ವಕರ್ಮ, ಗಾಯತ್ರಿ ಅಮ್ಮನವರ 9ನೇ ವಾರ್ಷಿಕೋತ್ಸವ. ಬೆಳಿಗ್ಗೆ 9.30ಕ್ಕೆ ಉದ್ಘಾಟನೆ: ವಸತಿ ಸಚಿವ ವಿ. ಸೋಮಣ್ಣ. ಬೆಳಿಗ್ಗೆ 10.30ಕ್ಕೆ ರಥೋತ್ಸವ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ. ಸಂಜೆ 6.30 ರಿಂದ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ. ಅತಿಥಿಗಳು - ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ವಸತಿ ಸಚಿವ ವಿ. ಸೋಮಣ್ಣ, ಶಾಸಕ ಎಂ.ಕೃಷ್ಣಪ್ಪ.

ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್: ನಂ. 827, ದಯಾನಂದ ಸಾಗರ್ ಕಾಲೇಜು ಸಮೀಪ, 53ನೇ ತಿರುವು, 24ನೇ ಮುಖ್ಯರಸ್ತೆ, ಕುಮಾರಸ್ವಾಮಿ ಬಡಾವಣೆ. ಹಿರಿಯ ಚಲನಚಿತ್ರ ನಟ ಅಂಬರೀಶ್ ಅವರ 60 ನೇ ಹುಟ್ಟುಹಬ್ಬ ಆಚರಣೆ. ಅತಿಥಿ - ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಬೆಳಿಗ್ಗೆ 10.30.

ಅರಬಿಂದೊ ಕಾಂಪ್ಲೆಕ್ಸ್ ಟ್ರಸ್ಟ್: ಅರವಿಂದ ಸಂಕೀರ್ಣ, ಸಾಂಸ್ಕೃತಿಕ ಸಭಾಭವನ, ಅರವಿಂದ ಮಾರ್ಗ, ಜೆ.ಪಿ.ನಗರ ಒಂದನೇ ಹಂತ. ಪುದುಚೇರಿಯ ಶ್ರದ್ಧಾಳು ರಾನಡೆ ಅವರಿಂದ `ಅಫಿರ್‌ಮೇಟೀವ್ ಸ್ಪಿರಿಚುಯಾಲಿಟಿ ಫಾರ್ ಇಂಡಿಯಾ~ಸ್ ರಿಅವೇಕನಿಂಗ್~ ಕುರಿತು ಉಪನ್ಯಾಸ. ಸಂಜೆ 4.30.

ವಿಶ್ಯುವಲ್ ಆರ್ಟ್ಸ್ ವರ್ಕ್‌ಶಾಪ್ಸ್ : ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ. `ಮೈ ಫೇಸ್, ಮೈ ಡ್ರೀಮ್~ ಛಾಯಾಚಿತ್ರ ಹಾಗೂ ವರ್ಣಚಿತ್ರಗಳ ಪ್ರದರ್ಶನ. ಉದ್ಘಾಟನೆ - ಹಿರಿಯ ವರ್ಣಚಿತ್ರ ಕಲಾವಿದ ಎಸ್.ಜಿ.ವಾಸುದೇವ್, ಅತಿಥಿ - ಕಲಾವಿದ ಚಂದ್ರನಾಥ ಆಚಾರ್ಯ. ಸಂಜೆ 4.

ಹರಿದಾಸ ಸಂಪದ ಟ್ರಸ್ಟ್ : ಬೆಂಗಳೂರು ಗಾಯನ ಸಮಾಜ, ಕೆ.ಆರ್.ರಸ್ತೆ. ಹರಿದಾಸ ಹಬ್ಬ - 2012. ಉದ್ಘಾಟನೆ - ಕುಂದಾಪುರ ವ್ಯಾಸರಾಜ ಮಠದ ಲಕ್ಷ್ಮೀಂದ್ರತೀರ್ಥರು, ಅತಿಥಿಗಳು- ಹಿರಿಯ ವಿಜ್ಞಾನಿ ಡಾ.ಸುಭಾಷ ಕಾಖಂಡಕಿ. ಸಂತೇಕಲ್ಲೂರು ಗೋಪಾಲದಾಸರಿಗೆ `ಪ್ರಸನ್ನ ವೆಂಕಟ~ ಪ್ರಶಸ್ತಿ ಪ್ರದಾನ. ಸಂಜೆ 4.

ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ: 15ನೇ ಅಡ್ಡರಸ್ತೆ, ಮಲ್ಲೇಶ್ವರಂ. ನರಸಿಂಹ ಜಯಂತಿ 16ನೇ ವರ್ಷದ ಸಂಗೀತೋತ್ಸವದಲ್ಲಿ ಕೆ.ಎನ್. ವೆಂಕಟೇಶನ್ ಹಾಗೂ ಕುಟುಂಬದವರಿಂದ ಪುಷ್ಪಯಾಗೋತ್ಸವ. ಜೆ.ಪಿ. ನಾರಾಯಣಸ್ವಾಮಿ ಪಾರ್ವತಮ್ಮ ಹಾಗೂ ಪಾರ್ವತಮ್ಮ ವೆಂಕಟೇಶ್ ಅವರಿಂದ ಪುಷ್ಪಮಂಟಪೋತ್ಸವ. ಸಂಜೆ 6.30.

ಶ್ರೀರಾಮ ಲಲಿತ ಕಲಾ ಮಂದಿರ: 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಆರ್.ಕೆ.ಪದ್ಮನಾಭ ಅವರಿಂದ ವೀಣಾವಾದನ, ಎಚ್.ಎಸ್. ಸುಧೀಂದ್ರ (ಮೃದಂಗ), ಎಸ್.ಎನ್. ನಾರಾಯಣಮೂರ್ತಿ (ಘಟಂ) ಸಂಜೆ 6.
ವರನಟ ರಾಜ್‌ಕುಮಾರ್ ನಕ್ಷತ್ರ ಮಂಡಳಿ ಸಾಂಸ್ಕೃತಿಕ ಸಂಸ್ಥೆ: ಕನ್ನಡ ಭವನ, ನಯನ ಸಭಾಂಗಣ, ಜೆ.ಸಿ.ರಸ್ತೆ. ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಬಾಲ, ಯುವ, ಹಿರಿಯರ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರತಿಭೋತ್ಸವ 2012, ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ. ಬೆಳಿಗ್ಗೆ 9.

ಜೆ.ಬಿ.ಕೆಂಪಣ್ಣಶೆಟ್ಟರ ಧರ್ಮಸಂಸ್ಥೆ : ಅಂಗಡಮ್ಮ ಕಲ್ಯಾಣ ಮಂಟಪ, ನಂ.72, ನಗರ್ತಪೇಟೆ ಮುಖ್ಯರಸ್ತೆ. 91 ನೇ ವಾರ್ಷಿಕೋತ್ಸವ. ಅತಿಥಿಗಳು - ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್. ಬೆಳಿಗ್ಗೆ 11.
ಚಿಗುರು: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. `ಬೆಳಕು~ ಸಾಂಸ್ಕೃತಿಕ ಕಾರ್ಯಕ್ರಮಗಳು. ಸಂಜೆ 4.

ಅಭಿನವ ಡ್ಯಾನ್ಸ್ ಕಂಪೆನಿ: ಕೆ. ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತ ನಗರ. ಮೃದುಲಾ ರಾವ್ ಮತ್ತು ನವೀನ್ ಹೆಗ್ಡೆ ಅವರಿಂದ ಭರತನಾಟ್ಯ. ಅತಿಥಿಗಳು- ಸಂಗೀತ ವಿಮರ್ಶಕ ಡಾ. ಎಂ. ಸೂರ್ಯಪ್ರಸಾದ್, ನೃತ್ಯ ಕಲಾಮಂದಿರಂ ನಿರ್ದೇಶಕರಾದ ಬಿ. ಭಾನುಮತಿ. ಮೃದುಲಾ ರಾವ್ ಅವರಿಗೆ ಆರ್.ಎನ್. ಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ. ಸಂಜೆ 6.30.

ಎಂ. ಎ. ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್: ಶ್ರೀ ರಮಣ ಮಹರ್ಷಿ ಅಂಧರ ಅಕಾಡೆಮಿ, 3ನೇ ಅಡ್ಡರಸ್ತೆ, ಜೆ. ಪಿ. ನಗರ ಮೂರನೇ ಹಂತ. ರಾಗಿಗುಡ್ಡದ ಹತ್ತಿರ, ಜೆ.ಪಿ.ನಗರ. ಡಿ.ಎನ್. ಸುಬ್ರಹ್ಮಣ್ಯ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಎಚ್. ಕೆ. ನರಸಿಂಹಮೂರ್ತಿ (ವಯಲಿನ್), ಎ.ಎಸ್.ಎನ್. ಸ್ವಾಮಿ (ಮೃದಂಗ), ಎಂ. ಎ. ಕೃಷ್ಣಮೂರ್ತಿ (ಘಟಂ). ಸಂಜೆ 5.30.

ಅನನ್ಯ: ಸೇವಾ ಸದನ, ಮಲ್ಲೇಶ್ವರ. ಅನನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗತಿ ಯುವ ಸಂಗೀತೋತ್ಸವದ ಸಮಾರೋಪ ಸಮಾರಂಭ. ವಾದ್ಯ ಕಛೇರಿಯಲ್ಲಿ ಗೀತಾ ರಮಾನಂದ, ರಾಧಿಕಾ ಭಾಸ್ಕರ್, ಮತ್ತು ವಿ. ಗೋಪಾಲ್ ಅವರಿಂದ ವೀಣಾ ವಾದನ. ಎಲ್. ವಿ.ಮುಕಂದ್ (ಕೊಳಲು), ವೆಂಕಟೇಶ್ ಜೋಸಿಯರ್ (ವಯಲಿನ್), ರೇಣುಕಾ ಪ್ರಸಾದ್ (ಮೃದಂಗ), ಬಿ. ಎಸ್. ರಘುನಂದನ್ (ಘಟ), ಎ.ಎಸ್.ಎನ್. ಸ್ವಾಮಿ (ಖಂಜಿರ),  ಜಿ. ಲಕ್ಷ್ಮೀನಾರಾಯಣ (ಮೋರ್ಚಿಂಗ್). ನಿರ್ದೇಶನ- ಗೀತಾ ರಮಾನಂದ. ಬೆಳಿಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ. ಅಧ್ಯಕ್ಷತೆ- ಸಾಹಿತಿ ಯು. ಆರ್. ಅನಂತಮೂರ್ತಿ, ಅತಿಥಿಗಳು- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ಕವಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ. ಅನನ್ಯ

ಪುರಸ್ಕಾರ-ಗಾಯಕ ಬಿ. ಎಸ್. ವಿಜಯ ರಾಘವನ್, ಶಾಸ್ತ್ರ ಕೌಸ್ತುಭ-ಗಾಯಕ ಹಾಗೂ ಶಾಸ್ತ್ರಜ್ಞ ಆರ್. ಎಸ್. ನಂದಕುಮಾರ್. ಅನನ್ಯ ಯುವ ಪುರಸ್ಕಾರ- ಎಂ. ರಾಜ್‌ಕಮಲ್, ಅಶ್ವಿನ್‌ಆನಂದ್, ಎ. ರಾಧೇಶ್.
ಶ್ರೀ ವೆಂಕಟೇಶ್ವರ ಗಾನ ನಿಲಯ : ನಂ9, 3ನೇ ಮೇನ್, ಗಂಗಾನಗರ ಬಡಾವಣೆ. ಸಂಗೀತ ವಿದ್ವಾನ್ ದಿ.ಎಸ್.ಲಕ್ಷ್ಮಣಶಾಸ್ತ್ರಿ ಸ್ಮರಣಾರ್ಥ ಅವರ ಶಿಷ್ಯರಿಂದ ತ್ಯಾಗರಾಜ ಪುರಂದರದಾಸರ ಆರಾಧನಾ ಸಂಗೀತೋತ್ಸವ. ಬೆಳಿಗ್ಗೆ 9.

ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ 6, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ. ಬೀಚಿ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಬೀಚಿಯವರ `ಮೂರು ಹೆಣ್ಣು ಐದು ಜಡೆ `ಮತ್ತು `ಕಾಮಂಣ~ ಕಾದಂಬರಿ ಬಿಡುಗಡೆ. ಪುಸ್ತಕ ಬಿಡುಗಡೆ - ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ. ಅತಿಥಿಗಳು - ಲೇಖಕರಾದ ಬಿ.ಎಸ್. ಕೇಶವರಾವ್, ವೈ.ವಿ.ಗುಂಡೂರಾವ್. ಬೀಚಿ ಅವರ ಮೊಮ್ಮಗ ಉಲ್ಲಾಸ ರಾಯಸಂ. ಬೆಳಿಗ್ಗೆ 10.30.

ವಿಜಯನಗರ ಬಿಂಬ : ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. `ಶೇಮ್ ಶೇಮ್ ರಾಜಾ~ ಮತ್ತು `ಕಾಡೊಡಲ ಹಾಡು~ ಮಕ್ಕಳ ನಾಟಕಗಳ ಪ್ರಯೋಗ. ಅತಿಥಿಗಳು - ಲೇಖಕಿ ನೇಮಿಚಂದ್ರ, ರಂಗಕರ್ಮಿಗಳಾದ ಎ.ಎಸ್.ಮೂರ್ತಿ, ಟಿ.ಎಸ್.ನಾಗಾಭರಣ, ಕವಿ ಬಿ.ಆರ್.ಲಕ್ಷ್ಮಣರಾವ್. ಸಂಜೆ 5.30.

ಮಕ್ಕಳ ಮಂಟಪ : ಗಂಗಮ್ಮ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆ ಆವರಣ, ಹೊಂಬೇಗೌಡ ನಗರ. ಮಕ್ಕಳಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು. ಅತಿಥಿಗಳು - ಬಿಬಿಎಂಪಿ ಸದಸ್ಯ ಡಿ.ಚಂದ್ರಪ್ಪ, ಅಖಿಲ ಕರ್ನಾಟಕ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಬಾ.ರಾಮಚಂದ್ರ ಉಪಾದ್ಯ. ಬೆಳಿಗ್ಗೆ 9.30.

ಅಲ್‌ಕುಬಾ ವೆಲ್‌ಫೇರ್ ಟ್ರಸ್ಟ್ :
ಮಸ್‌ಜಿದ್ - ಇ - ಖುಬಾ ಕಾಂಪ್ಲೆಕ್ಸ್, 10ನೇ ಅಡ್ಡರಸ್ತೆ, ವಸಂತನಗರ. ಉಚಿತ ನೇತ್ರ ತಪಾಸಣಾ ಶಿಬಿರ. ಅತಿಥಿಗಳು - ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಸಾಹಿತಿ ಬರಗೂರು ರಾಮಚಂದ್ರಪ್ಪ. ಬೆಳಿಗ್ಗೆ 9.30.

ದುರ್ಗಾಪರಮೇಶ್ವರಿ ಚಾರಿಟಬಲ್ ಟ್ರಸ್ಟ್: ಅತ್ತಿಬೆಲೆ ಮುಖ್ಯರಸ್ತೆ, ಆನೇಕಲ್ ಟೌನ್. ಬೆಳಿಗ್ಗೆ 9ಕ್ಕೆ ದುರ್ಗಾಪರಮೇಶ್ವರಿ ಹೋಮ, ಮಧ್ಯಾಹ್ನ 12ಕ್ಕೆ `ಸಹಸ್ರ ಶಂಖಗಳಿಂದ  ನಾಗದೇವರಿಗೆ ಅಭಿಷೇಕ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT