ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Last Updated 21 ಡಿಸೆಂಬರ್ 2013, 20:17 IST
ಅಕ್ಷರ ಗಾತ್ರ

ಜನ ಸಂಗ್ರಾಮ ಪರಿಷತ್‌ ಮತ್ತು ಪ್ರೆಸ್‌ಕ್ಲಬ್‌ ಆಫ್‌ ಬೆಂಗಳೂರು: ಪ್ರೆಸ್‌ಕ್ಲಬ್‌ ಭವನ. ‘ಚುನಾವಣಾ ಸುಧಾರಣೆಗಳು ಮತ್ತು ರಾಜಕಾರಣ ಜನತಂತ್ರೀಕರಣ’ ಕುರಿತು ದುಂಡುಮೇಜಿನ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಕಾರ್ಯಾಗಾರ. ಉದ್ಘಾಟನೆ– ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.­ವೆಂಕಟಾ­ಚಲಯ್ಯ. ಅತಿಥಿಗಳು – ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.­ಶಂಕರ­ಮೂರ್ತಿ, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.ಎಸ್‌.ದೊರೆ­ಸ್ವಾಮಿ.ಅಧ್ಯಕ್ಷತೆ – ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ರಾಮಕೃಷ್ಣ ಉಪಾಧ್ಯ. ಬೆಳಿಗ್ಗೆ 10.

ದುಂಡು ಮೇಜಿನ ಸಭೆ: ಅಧ್ಯಕ್ಷತೆ – ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ. ಉಪಸ್ಥಿತಿ– ವಿಧಾನ ಸಭೆಯ ಮಾಜಿ ಅಧ್ಯಕ್ಷ ಕೃಷ್ಣ, ಶಾಸಕ ಸುರೇಶ್‌ಕುಮಾರ್‌, ಮಾಜಿ ಸಂಸದ ಪಿ.ಕೋದಂಡರಾಮಯ್ಯ, ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ. ಮಧ್ಯಾಹ್ನ 2.

ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌: ಅನಂತಜ್ಞಾನ ಗಂಗೋತ್ರಿ, ಸೋಮನ­ಹಳ್ಳಿ, ಕನಕಪುರ ರಾಷ್ಟ್ರೀಯ ಹೆದ್ದಾರಿ. ಅನಂತಗಂಗೋತ್ರಿ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಮತ್ತು ಉಪನ್ಯಾಸ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ. ಕಟ್ಟಡದ ಉದ್ಘಾಟನೆ– ಸಚಿವ ಎಚ್‌.ಆಂಜನೇಯ. ಉಪನ್ಯಾಸ ಉದ್ಘಾಟನೆ – ಸಚಿವ ಆರ್.ರಾಮಲಿಂಗಾ­ರೆಡ್ಡಿ. ಉಪಸ್ಥಿತಿ– ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್‌.ಯು.­ತಳವಾರ್‌. ಅಧ್ಯಕ್ಷತೆ – ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌ನ ಅಧ್ಯಕ್ಷ ಟಿ.ವಿ.ಮಾರುತಿ. ಬೆಳಿಗ್ಗೆ 11.

ಎನ್‌.ವೆಂಕಟೇಶಯ್ಯನವರ ಬಲಿಜ ಅಭಿಮಾನಿಗಳ ಬಳಗ: ಆನೇಕಲ್‌ ತಿಮ್ಮಯ್ಯ ಚಾರಿಟೀಸ್‌, ಚಾಮರಾಜಪೇಟೆ. ಎನ್‌.ವೆಂಕಟೇಶಯ್ಯ ಅವರ ಒಂದನೇ  ಪುಣ್ಯಸ್ಮರಣೆ. ಅತಿಥಿ – ಎಂಎಸ್‌ಆರ್‌ ಗ್ರೂಪ್ಸ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್‌, ಸಂಸದ ಪಿ.ಸಿ.ಮೋಹನ್, ಶಾಸಕರಾದ ಆರ್.ವಿ.ದೇವರಾಜ್‌, ಮನೋಹರ್‌ ತಹಶೀಲ್ದಾರ್‌, ಎಫ್‌ಕೆಸಿಸಿಐ ಅಧ್ಯಕ್ಷ ಆರ್‌.ಶಿವಕುಮಾರ್‌. ಬೆಳಿಗ್ಗೆ 10.30.

ನಿರ್ಮಾಣ್‌ ಶೆಲ್ಟರ್‍ಸ್ ಮತ್ತು ಅನಕೃ ಪ್ರತಿಷ್ಠಾನ: ಗಾಯನ ಸಮಾಜ, ಕೆ.ಆರ್‌.ರಸ್ತೆ. ‘ಅನಕೃ –ನಿರ್ಮಾಣ್‌ 2012–13’ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ. ಅಧ್ಯಕ್ಷತೆ– ಅನಕೃ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ.ಜಿ. ವೆಂಕಟಸುಬ್ಬಯ್ಯ. ಅತಿಥಿ– ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ. ಬೆಳಿಗ್ಗೆ 9.30.

ಕರ್ನಾಟಕ ಜೈನ ಅಸೋಸಿಯೇಷನ್‌ ಮತ್ತು ದಿಗಂಬರ ಜೈನ ಮಹಾಸಮಿತಿ: ಕರ್ನಾಟಕ ಜೈನ ಭವನ, ಕೆ.ಆರ್.ರಸ್ತೆ. ಉಚಿತ ಯೂರಾಲಜಿ ತಪಾಸಣೆ ಶಿಬಿರ. ಬೆಳಿಗ್ಗೆ 10.

ಬಿಬಿಎಂಪಿ ಅಧಿಕಾರಿ, ನೌಕರರ ಸಂಘ: ಮಲ್ಲೇಶ್ವರ ಆಟದ ಮೈದಾನ. ನೌಕರರ ದಿನಾಚರಣೆ ಅಂಗವಾಗಿ ನೌಕರರ ಕ್ರಿಕೆಟ್‌ ಪಂದ್ಯಾವಳಿ. ಉದ್ಘಾಟನೆ – ಮೇಯರ್‌ ಬಿ.ಎಸ್‌.ಸತ್ಯನಾರಾಯಣ. ಉಪಮೇಯರ್‌ ಇಂದಿರಾ. ಬೆಳಿಗ್ಗೆ 8.30.

ಬೆಂಗಳೂರು ಸೊಸೈಟಿ ಆಫ್‌ ಅಬ್‌ಸ್ಟ್ರಾಟಿಕ್ಸ್ ಅಂಡ್ ಗೈನಕಾಲಜಿ: ಹೋಟೆಲ್‌ ಏಟ್ರಿಯಾ, ಅರಮನೆ ರಸ್ತೆ. ಗರ್ಭಧಾರಣೆ ಮತ್ತು ಕೀಲುರೋಗ ಕುರಿತು ವಿಚಾರ ಸಂಕಿರಣ. ಬೆಳಿಗ್ಗೆ 10.

ಸೋಲ್‌ ಹೀಲಿಂಗ್‌ ಇಂಡಿಯಾ: ಹೋಟೆಲ್‌ ಐರಿಸ್‌, ಬ್ರಿಗೇಡ್‌ ರಸ್ತೆ. ‘ತಾವೊ ಸೀಕ್ರೆಟ್ಸ್‌ ಆಫ್‌ ಹೀಲಿಂಗ್‌, ರಿಜ್ಯುವಿನೇಶನ್‌, ಲಾಂಗೆವಿಟಿ ಅಂಡ್‌ ಇಮ್ಮಾರ್ಟಾಲಿಟಿ’ ಪ್ರಾತ್ಯಕ್ಷಿಕೆ. ಬೆಳಿಗ್ಗೆ 8.30.

ದಿ ಮಿಥಿಕ್ ಸೊಸೈಟಿ: ನೃಪತುಂಗ ರಸ್ತೆ. ನೂರ್‌ ಅಹಮದ್‌ ಅಲಿಖಾನ್‌ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ  ‘ಶ್ರೀ ಗುರೂಜಿ: ವಜ್ರ ಸದೃಶ ನೇತ್ರತ್ವ’ ಕುರಿತು ಲೇಖಕ ಎಸ್‌.ಆರ್‌.ರಾಮಸ್ವಾಮಿ ಉಪನ್ಯಾಸ. ಬೆಳಿಗ್ಗೆ 10.30.

ಕರ್ನಾಟಕ ರಕ್ಷಣಾ ವೇದಿಕೆ: ಬನಶಂಕರಮ್ಮ ದೇವಸ್ಥಾನದ ಮುಂಭಾಗ, ಚೋಳೂರುಪಾಳ್ಯ. ಕನ್ನಡಿಗರ ಜಾಗೃತಿ ಸಮಾವೇಶ. ಜಾಥಾಗೆ ಚಾಲನೆ– ಸಂಸದ ಪಿ.ಸಿ.ಮೋಹನ್‌. ಅಧ್ಯಕ್ಷತೆ – ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ. ಅತಿಥಿಗಳು – ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ಪ್ರಿಯಕೃಷ್ಣ. ಬೆಳಿಗ್ಗೆ 10.30.

ಶ್ರಮಿಕ್‌ ಫೌಂಡೇಷನ್‌: ಕೆಂಪೇಗೌಡ ಲೇಔಟ್‌, ಪೀಣ್ಯ 2ನೇ ಹಂತ. ಶ್ರಮಿಕ್‌ ಆಹಾರ್‌ ಯೋಜನೆಯ ಉದ್ಘಾಟನಾ ಕಾರ್ಯಕ್ರಮ. ಅಧ್ಯಕ್ಷತೆ – ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ. ಉದ್ಘಾಟನೆ– ಸಚಿವ ರಾಮಲಿಂಗಾರೆಡ್ಡಿ. ಅತಿಥಿಗಳು – ಸಚಿವ ದಿನೇಶ್‌ ಗುಂಡೂರಾವ್‌, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರ­ಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌. ಮಧ್ಯಾಹ್ನ 12.

ಕೂಟ ಮಹಾಜಗತ್ತು ಸಾಲಿಗ್ರಾಮ ಬೆಂಗಳೂರು ಅಂಗಸಂಸ್ಥೆ: ಗುರುನರಸಿಂಹ ಕಲ್ಯಾಣ ಮಂದಿರ, ಬುಲ್‌ ಟೆಂಪಲ್‌ ರಸ್ತೆ. ನರಸಿಂಹ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ. ಅತಿಥಿಗಳು – ಮೇಯರ್ ಬಿ.ಎಸ್.ಸತ್ಯನಾರಾಯಣ, ವಾಗ್ದೇವಿ ವಿಲಾಸ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಕೆ.ಹರೀಶ್‌. ಪ್ರಶಸ್ತಿ ಪುರಸ್ಕೃತರು– ಡಾ.ಜಿ.ಕೆ. ಕಾರಂತ್‌ (ಶಿಕ್ಷಣ), ಶ್ರೀಧರ ಎಸ್‌ ಹೊಳ್ಳ (ಹೋಟೆಲ್‌ ಉದ್ಯಮ), ಕೆ.ಎಚ್‌. ಶಿವಸ್ವಾಮಿ ಐತಾಳ್‌ (ಬ್ಯಾಂಕಿಂಗ್‌), ಎಂ.ಎ. ಅರವಿಂದ ಹೊಳ್ಳ (ರಂಗಭೂಮಿ), ಕೆ.ಜಯಲಕ್ಷ್ಮಿ ಹೇರ್ಳೆ (ಸಮಾಜ ಸೇವೆ), ಕೆ.ಕೃಷ್ಣಮೂರ್ತಿ ತುಂಗ (ಯಕ್ಷಗಾನ ಕಲೆ). ಸಂಜೆ 4.

ಸಾಹಿತ್ಯ ಕಾರ್ಯಕ್ರಮ
ಕವಿಪವಿ ಕೂಟ: ದಿ ಓವಲ್‌ ಥಿಯೇಟರ್‌, ಸ್ವಾತಂತ್ರ್ಯ ಉದ್ಯಾನ, ಶೇಷಾದ್ರಿ ರಸ್ತೆ. ‘ಕವಿಪವಿ ಹಬ್ಬ -–2013’. ಉದ್ಘಾಟನೆ – ಹಿರಿಯ ಪತ್ರಕರ್ತ ಪಿ.ರಾಮಯ್ಯ. ‘ಪ್ರಜಾವಾಣಿ’ಯ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ಕೃತಿ ‘ನ್ಯಾನ್ಸಿ’ ಮತ್ತು ಸುರೇಶ್‌ ಹಿರೇಮಠ್‌ ಅವರ ‘ಪತ್ರಿಕಾ ಸ್ವಾತಂತ್ರ್ಯ ಮತ್ತು ಕಾನೂನು­ಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ.   ಬಿಡುಗಡೆ – ಬೆಂಗ­ಳೂರು ವಿ.ವಿ ಡೀನ್‌ ಡಾ.ಎಚ್‌.ಎಸ್‌. ಈಶ್ವರ್. ಅತಿಥಿ – ಧಾರವಾಡ ಕರ್ನಾಟಕ ವಿ.ವಿ ಬಹು­ಮಾಧ್ಯಮ ವಿದ್ಯುನ್ಮಾನ ವಿಭಾಗದ ಸಂಚಾಲಕ ಪ್ರೊ.ಎಂ.ಗಂಗಾಧರಪ್ಪ. ಬೆಳಿಗ್ಗೆ 10.30.

ನಿರಂತರ: ಕರ್ನಾಟಕ ಚಿತ್ರಕಲಾ ಪರಿಷತ್‌, ಶಿವಾನಂದ ವೃತ್ತದ ಬಳಿ. ಆರ್‌.ಕೇಶವಮೂರ್ತಿ ಅವರ ‘ಗಾಂಧಿ ಸೀಟು’ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಬಿಡುಗಡೆ– ನಟ ಪ್ರಕಾಶ್‌್ ರೈ. ಕೃತಿಯ ಕುರಿತು– ಸಾಹಿತಿ ಬರಗೂರು ರಾಮಚಂದ್ರಪ್ಪ. ಬೆಳಿಗ್ಗೆ 10.30.
ಸುನಂದಾ ಸಾಹಿತ್ಯ ವೇದಿಕೆ: ವಲ್ಲಭನಿಕೇತನ, ಶಿವಾನಂದ ವೃತ್ತ.  ಕ್ರಿಸ್‌ಮಸ್‌ ಕವಿಗೋಷ್ಠಿ. ಅಧ್ಯಕ್ಷತೆ–ಟಿ.ಪಿ.ಪ್ರಭುದೇವ್. ಅತಿಥಿ–ಲಕ್ಷ್ಮೀದೇವಿ. ಬೆಳಿಗ್ಗೆ 10.30. 

ಸಾಂಸ್ಕೃತಿಕ ಕಾರ್ಯಕ್ರಮ
ಎ.ಎಸ್‌.ಮೂರ್ತಿ ಅವರ ಸಂಸ್ಥೆಗಳ ಸಮೂಹ: ರಾಮಾಂಜನೇಯ ಗುಡ್ಡ, ಹನುಮಂತನಗರ. ಎ.ಎಸ್‌.ಮೂರ್ತಿ ನೆನಪಿನ ‘ಕಲೋತ್ಸವ’ ಕಾರ್ಯಕ್ರಮ. ಎ.ಎಸ್‌.ಮೂರ್ತಿ ಅವರ ಕಂಚಿನ ಪ್ರತಿಮೆ ಅನಾವರಣ. ಬೆಳಿಗ್ಗೆ 9.30. ಕಿರು ಚಿತ್ರೋತ್ಸವದ ಉದ್ಘಾಟನೆ. ಬೆಳಿಗ್ಗೆ 9.40. ಎ.ಎಸ್‌.ಮೂರ್ತಿ ‘ಬದುಕು–ಕಲೆ’ ಕುರಿತ ವಸ್ತು ಪ್ರದರ್ಶನ. ಬೆಳಿಗ್ಗೆ 10. ಹಿರಿಯ ಕಲಾವಿದರ ಚಿತ್ರಕಲಾ ಶಿಬಿರ ಉದ್ಘಾಟನೆ. ಬೆಳಿಗ್ಗೆ 10.45. ಎ.ಎಸ್‌.ಮೂರ್ತಿ ಅವರ ಪುಸ್ತಕ ಬಿಡುಗಡೆ. ಅತಿಥಿಗಳು– ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ನಿಘಂಟು ತಜ್ಞ ಪ್ರೊ.ಜಿ.ವೆಂಕಟ­ಸುಬ್ಬಯ್ಯ, ಹಿರಿಯ ಸಾಹಿತಿ ಡಾ.ಚಂದ್ರ­ಶೇಖರ ಕಂಬಾರ, ರಂಗಕರ್ಮಿ ಪ್ರಸನ್ನ. ಬೆಳಿಗ್ಗೆ 11. ಸಾಂಸ್ಕೃತಿಕ ಕಾರ್ಯಕ್ರಮ. ಅತಿಥಿಗಳು– ಹಿರಿಯ ನಟಿ ಜಯಂತಿ, ನಟ ಪ್ರಕಾಶ್‌ ರೈ, ಸಂಜೆ 5.

ಕಲಾ ಗಂಗೋತ್ರಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಕಲಾಗಂಗೋತ್ರಿಯ 40ನೇ ವಾರ್ಷಿಕೋತ್ಸವ ಮತ್ತು ಮಾಣಿಕ್ಯ ರಂಗ ಮಹೋತ್ಸವ 10 ನಾಟಕಗಳ ಹಬ್ಬ. ರಿಚರ್ಡ್ ಲೂಯಿಸ್‌ ತಂಡದಿಂದ ಹಾಸ್ಯ. ಬೆಳಿಗ್ಗೆ 10. ‘ಕನ್ನಡ –ಕನ್ನಡಿಗ–ಕರ್ನಾಟಕ–ಕಳೆದ ಮೂರು ದಶಕಗಳು’ ಕುರಿತು ವಿಚಾರ ಸಂಕಿರಣ. ಉದ್ಘಾಟನೆ – ಸಾಹಿತಿ ವಿಷ್ಣು ನಾಯಕ.  ಅಧ್ಯಕ್ಷತೆ – ಹಿರಿಯ ಸಾಹಿತಿ ಡಾ.ಹಂಪ ನಾಗ­ರಾಜಯ್ಯ. ಬೆಳಿಗ್ಗೆ 11.30. ‘ರಾಜಕೀಯ ಸ್ಥಿತ್ಯಂತರಗಳು–ಕಳೆದ ಮೂರು ದಶಕ­ಗಳು’. ಉದ್ಘಾಟನೆ – ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್‌. ಆಡಳಿತದಲ್ಲಿ ಕನ್ನಡ–ಡಾ.ಎಲ್‌.ಹನುಮಂತಯ್ಯ, ಸಾಮಾಜಿಕ ಸಮಸ್ಯೆಗಳು– ಕುವೆಂಪು ವಿ.ವಿ ರಿಜಿಸ್ಟ್ರಾರ್‌ ಡಾ.ಮಲ್ಲಿಕಾಘಂಟಿ, ಅಧಿಕಾರ ಪಲ್ಲಟಗಳು – ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌. ಅಧ್ಯಕ್ಷತೆ – ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್.ಶಂಕರ್‌. ಮಧ್ಯಾಹ್ನ 3.30. ‘ಪೂರ್ಣಚಂದ್ರ –ಚಂದ್ರಬಿಂಬ’ ‘ಮುಖ್ಯಮಂತ್ರಿ’ ಚಂದ್ರು ಅವರ ಅಭಿ­ನಂದನಾ ಕೃತಿ ಬಿಡುಗಡೆ– ಮುಖ್ಯಮಂತ್ರಿ ಸಿದ್ದರಾಮಯ್ಯ. ಅಭಿನಂದನಾ ನುಡಿ– ಡಾ.ಬಿ.ಎಲ್.ಶಂಕರ್‌. ಅಧ್ಯಕ್ಷತೆ – ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಸಂಜೆ 6.

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ: ಬಿ.ಎಂ.ಶ್ರೀ ಕಲಾಭವನ, ಎನ್‌.ಆರ್‌.ಕಾಲೋನಿ.  ಅಖಿಲ ಕರ್ನಾಟಕ ಸುಗಮ ಸಂಗೀತ ಸ್ಪರ್ಧೆಗಳ ಅಂಗವಾಗಿ ಬಿ.ಎಂ.ಶ್ರೀ. ಸ್ಮಾರಕ ಭಾವಗೀತೆ ಸ್ಪರ್ಧೆ, ಕಾಳಿಂಗರಾವ್‌ ಸ್ಮಾರಕ ಜನಪದ ಗೀತೆ, ಎಂ.ವಿ.ಸೀ.ಸ್ಮಾರಕ ನಾಡು–ನುಡಿ ಗೀತೆ ಸ್ಪರ್ಧೆ. ಬೆಳಿಗ್ಗೆ 9.30. ಬಹುಮಾನ ವಿತರಣೆ– ಗಾಯಕ ಯಶವಂತ ಹಳಿಬಂಡಿ. ಅಧ್ಯಕ್ಷತೆ– ಪ್ರತಿ­ಷ್ಠಾನದ ಅಧ್ಯಕ್ಷ ಡಾ.ಪಿ.ವಿ. ನಾರಾಯಣ.  ಮಧ್ಯಾಹ್ನ 2.

ಸಂಗೀತ ಸ್ವರ ಸಂಸ್ಕಾರ ಸೇವಾ ಟ್ರಸ್ಟ್‌: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ­ಪೇಟೆ. ಟ್ರಸ್ಟ್‌ನ 2ನೇ ವಾರ್ಷಿಕೋತ್ಸವದ ಅಂಗವಾಗಿ ಸಂಗೀತೋತ್ಸವ ಸಮಾರಂಭ. ವಚನ ಗಾಯನ, ದಾಸರ ಪದಗಳ ಗಾಯನ. ಬೆಳಿಗ್ಗೆ 10. ‘ಯಾವ ರಾಗ ಯಾವ ತಾಳ’ ಭಾವಗೀತೆಗಳ ಸಿ.ಡಿ. ಬಿಡುಗಡೆ ಮತ್ತು ರಾಮಲಿಂಗಪ್ಪ ಜಲ್ಲಾಪುರ ಅವರು ಅನುವಾದಿಸಿರುವ ‘ಸ್ವರ ಸಾಹಿತ್ಯ ನಿಧಿ’    ಸಂಗೀತ ಪುಸ್ತಕ ಬಿಡುಗಡೆ.  ಅತಿಥಿಗಳು– ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ್‌, ಕಲಾವಿದ ಬಾಗೂರು ಮಾರ್ಕಂಡೇಯ, ಗಾಯಕ ಜಯತೀರ್ಥ ಮೇವುಂಡಿ. ಸಂಜೆ 5.30.

ಶ್ರೀ ವಿದ್ಯಾಕೇಂದ್ರ: ಮಾಚೋಹಳ್ಳಿ, ಮಾಗಡಿ ಮುಖ್ಯರಸ್ತೆ. ‘ತರಂಗ’ ಶಾಲಾಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ. ಅತಿಥಿ– ಡಿವೈಎಸ್‌ಪಿ ಆರ್‌. ಮಲ್ಲೇಶ್. ಸಂಜೆ 5.30.

ಹಡಪದ್‌ ನೆನಪಿನ ಕೂಟ: ವೆಂಕಟಪ್ಪ  ಆರ್ಟ್‌ ಗ್ಯಾಲರಿ, ಕಸ್ತೂರಬಾ ರಸ್ತೆ. ‘ಸೊಡರ ದಾರಿ’ ‘ರುದ್ರಪ್ಪ ಮಲ್ಲಪ್ಪ ಹಡಪದ ಅವರ ನೆನಪಿನ ಚಿಂತನ ಸರಣಿ–8’ ಮತ್ತು ಹಡಪದ್‌ ನೆನಪಿನ ಕಲಾಪ್ರದರ್ಶನ. ಸೊಡರ ಮುಡಿಪು –ಕಲಾವಿದ ಎಂ.ಬಿ.ಪಾಟೀಲ್‌. ಅಧ್ಯಕ್ಷತೆ – ಎಂಇಎಸ್‌ ವಿದ್ಯಾಲಯದ ಪ್ರಾಂಶುಪಾಲ ಡಾ.ಜೆ.ಶ್ರೀನಿವಾಸಮೂರ್ತಿ. ಸಂಜೆ 4.30.

ವೆಂಕಟೇಶ ನಾಟ್ಯ ಮಂದಿರ: ಎ.ಡಿ.ಎ.ರಂಗ­ಮಂದಿರ, ಜೆ.ಸಿ.ರಸ್ತೆ.  ಡಾ. ಸೌಂದರ್ಯ ಶ್ರೀವತ್ಸ್‌, ಡಾ. ಸಂಜಯ್‌ ಅವರಿಂದ ಭರತನಾಟ್ಯ. ಸತ್ಯನಾರಾಯಣ ರಾಜು ಅವರಿಂದ ರಾಮ ಕಥಾ. ಅತಿಥಿ– ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಟಿ.ಜಿ. ನರಸಿಂಹಮೂರ್ತಿ. ಸಂಜೆ 5.30.

ಬಿಟಿಎಂ ಸಾಂಸ್ಕೃತಿಕ ಅಕಾಡೆಮಿ:  ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್‌ ಬ್ಲೈಂಡ್‌, ಜೆ.ಪಿ.ನಗರ. ಪ್ರವೀಣ್‌ ಗೋಡ್ಖಿಂಡಿ ಹಾಗೂ ರಾಜೇಂದ್ರ ನಾಕೋಡ ಅವರಿಂದ ಮತ್ತು ವಿ.ಕೆ. ರಮಣ್‌ ಹಾಗೂ ವಿ. ಪ್ರವೀಣ್‌ ಅವರಿಂದ ಜುಗಲ್ಬಂದಿ. ಸಂಜೆ 5.30.

ಚಿತ್ರನಾಟ್ಯ ಫೌಂಡೇಷನ್‌:  ಭಾರತೀಯ ಸಂಸ್ಕೃತಿ ವಿದ್ಯಾಪೀಠ, ವಿಜಯನಗರ. ನಾಟ್ಯಾರೋಹಣ ಕಾರ್ಯಕ್ರಮ. ಅತಿಥಿ– ಪಾರ್ವತಿ ನೃತ್ಯ ವಿಹಂಗಮದ ನಿರ್ಮಲಾ ಜಗದೀಶ್‌. ಸಂಜೆ 6.

ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಪ್ರೊ.ಎಂ.ಆರ್‌. ಕೃಷ್ಣ­ಮೂರ್ತಿ ಅವರ ಶಿಷ್ಯೆ ಹಂಸಾ ವಿ.ಲಕ್ಷ್ಮಿ ಅವರಿಂದ ಭರತನಾಟ್ಯ. ಸಂಜೆ 6.

ರಂಗಶಂಕರ: ಜೆ.ಪಿ.ನಗರ, 2ನೇ ಹಂತ. ಅಕ್ವೇರಿಯಸ್‌ ಪ್ರೊಡಕ್ಷನ್‌ ಪ್ರದರ್ಶನದ ‘ಸಮ್‌ ಟೈಮ್ಸ್‌’ ನಾಟಕ ಪ್ರದರ್ಶನ. ರಚನೆ– ಅಧೀರ್‌ ಭಟ್‌/ ಬಾಬಿ ನಗ್ರಾ. ನಿರ್ದೇಶನ– ಆಧಾರ ಖುರಾನ್‌. ಸಂಜೆ 7.30.

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ: ಸ್ವಾಮಿ ವಿವೇಕಾನಂದ ಕಲಾ ಮಂಟಪ, ಕೆಂಪೇಗೌಡನಗರ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವ ಹಾಗೂ 25ನೇ ಪಂಚರಾತ್ರಿಗಳ ರಂಗೋ­ತ್ಸವ.  ‘ಭಕ್ಕುಂಡ v/s ಭೂಪತಿ’ ಜಾನ­ಪದ ನಾಟಕ. ರಚನೆ ಹಾಗೂ ನಿರ್ದೇಶನ– ಯು. ಗೋವಿಂದೇಗೌಡ. ಸಂಜೆ 5.30.  ಅಮರೇಶ್ವರ ವಿಜಯ ನಾಟಕ ಮಂಡಳಿ ಕಲಾವಿದರಿಂದ ‘ವೀರಭದ್ರ’ ನಾಟಕ ಪ್ರದರ್ಶನ. ರಚನೆ– ಯು. ಗೋವಿಂದೇ­ಗೌಡ. ನಿರ್ದೇಶನ– ಬಿ.ಎ.ಶಾಂತಲಾದೇವಿ. ಸಂಜೆ 7.45.

ಸಂಗೀತ ಕಾರ್ಯಕ್ರಮ
ಕಲ್ಲೂರು ಮಹಾಲಕ್ಷ್ಮಿ ತಬಲಾ ವಿದ್ಯಾಲಯ: ಕತ್ರಿಗುಪ್ಪೆ, ಬನಶಂಕರಿ ಮೂರನೇ ಹಂತ. ಎಚ್‌.ಜೆ.ಸರ್ವೋತ್ತಮ್ ಮತ್ತು ಕಾರ್ತಿಕ್‌ ಎನ್‌.ಕೃಷ್ಣ ಅವರಿಂದ ತಬಲಾ ವಾದನ. ಸಂಜೆ 4.

ಅವರ್‌ ಸ್ಕೂಲ್: 24ನೇ ಅಡ್ಡರಸ್ತೆ,  ಬನಶಂಕರಿ 2ನೇ ಹಂತ. 4ನೇ ವಾರ್ಷಿ­ಕೋ­ತ್ಸವ ಸಮಾರಂಭ.  ಶ್ರೀವಿದ್ಯಾ ಕಲಾ­ಕೇಂದ್ರದ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾ­ನಂದರ ಕುರಿತ ಕೃತಿಗಳ ಗೋಷ್ಠಿ­ಗಾಯನ. ಸಂಜೆ 5. ಸಭಾ ಕಾರ್ಯಕ್ರಮ. ಅತಿಥಿ–ವೀರೇಶಾನಂದ ಸ್ವಾಮೀಜಿ, ಅಧ್ಯಕ್ಷತೆ–ಆರ್‌.ಕೆ. ಪದ್ಮನಾಭ. ಸಂಜೆ 5.30.

ಧಾರ್ಮಿಕ ಕಾರ್ಯಕ್ರಮ
ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್‌: ಜಯನಗರ 9ನೇ ಹಂತ.  ಮಹಾನ್ಯಾಸ­ಪೂರ್ವಕ ಶತರುದ್ರಾಭಿಷೇಕ, ಸಹಸ್ರಬ್ರಹ್ಮಕುಂಭಾಭಿಷೇಕ. ಬೆಳಿಗ್ಗೆ 9.  ಮಹಾನೀರಾಜನ. ಮಧ್ಯಾಹ್ನ 12.  ವಜ್ರಕಿರೀಟ ಸಹಿತ ವಜ್ರ ಕವಚ ಧಾರಣೆ.  ಸಂಜೆ 5. ಪ್ರಭಾತ್‌ ಕಲಾವಿದರಿಂದ ವಿಜಯೋತ್ಸವ ನೃತ್ಯರೂಪಕ.  ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT