ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸೆಪ್ಟೆಂಬರ್ 19, ಸೋಮವಾರ

ನಾಗರಿಕ ವಿಮಾನಯಾನ ಬೆಂಗಳೂರು ಪ್ರಾದೇಶಿಕ ವಿಭಾಗ: ಡಾ.ಘಾಟೆ ಸಮ್ಮೇಳನ ಸಭಾಂಗಣ, ಎಚ್‌ಎಎಲ್ ಹೆರಿಟೇಜ್ ಸೆಂಟರ್, ಮಾರತ್ತಹಳ್ಳಿ. ಶತಮಾನೋತ್ಸವ ಆಚರಣೆ ಹಾಗೂ `2011- 12ನೇ ಸಾಲಿನ ದಶಕಗಳಲ್ಲಿ ನಾಗರಿಕ ವಿಮಾನಯಾನ ಅಭಿವೃದ್ಧಿಯ ತಂತ್ರಗಾರಿಕೆ~ ಕುರಿತು ವಿಚಾರ ಸಂಕಿರಣ. ಅತಿಥಿಗಳು- ಕೇಂದ್ರ ಸಚಿವ ವಯಲಾರ್ ರವಿ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಬೆಳಿಗ್ಗೆ 9.

ಶ್ರೀಮಾತಾ ಮಹಿಳಾ ಸಹಕಾರಿ ಬ್ಯಾಂಕ್: ಗಾಯನ ಸಮಾಜ, ಕೆ.ಆರ್.ರಸ್ತೆ. ದಶಮಾನೋತ್ಸವ, ನೂತನ ಕಟ್ಟಡ, ಸ್ಮರಣ ಸಂಚಿಕೆ, ವೆಬ್‌ಸೈಟ್ ಬಿಡುಗಡೆ ಸಮಾರಂಭ. ಉದ್ಘಾಟನೆ- ಸಚಿವ ಲಕ್ಷ್ಮಣ ಸವದಿ. ಅತಿಥಿಗಳು- ಸಚಿವ ಆರ್.ಅಶೋಕ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಗೀತಾ ಬಾಲಿ, ಸಚಿವ ಸಿ.ಸಿ.ಪಾಟೀಲ್. ಬೆಳಿಗ್ಗೆ 10.30.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ: ಸ್ವಾತಂತ್ರ್ಯ ಉದ್ಯಾನ. ಪ್ರಥಮ ಸಮಾವೇಶ. ಸಾನ್ನಿಧ್ಯ- ಗುರುಗಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವದೂತ ಸ್ವಾಮೀಜಿ. ಉದ್ಘಾಟನೆ- ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ. ಅತಿಥಿಗಳು- ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎನ್.ಎ.ಹ್ಯಾರಿಸ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ. ಬೆಳಿಗ್ಗೆ 12.30.

ಸಮಾರೋಪ ಸಮಾರಂಭ. ಸಾನ್ನಿಧ್ಯ- ಬೆಂಗಳೂರು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ. ಉದ್ಘಾಟನೆ- ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕ ಪ್ರಿಯಾಕೃಷ್ಣ, ಜಾನಪದ ತಜ್ಞ ಕುರುವ ಬಸವರಾಜ್. ಅಧ್ಯಕ್ಷತೆ- ಹಿರಿಯ ಸಾಹಿತಿ ಡಾ.ದೇ.ಜವರೇಗೌಡ. ಮಧ್ಯಾಹ್ನ 3.30.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ: ಮುನಿಚಿನ್ನಪ್ಪ ಕಲ್ಯಾಣ ಮಂಟಪ, ಬನ್ನೇರುಘಟ್ಟರಸ್ತೆ, ಗುರುಪ್ಪನಪಾಳ್ಯ, ಜಯದೇವ ಆಸ್ಪತ್ರೆ ಬಳಿ. ಶೈಕ್ಷಣಿಕ ಕಾರ್ಯಾಗಾರ. ಉದ್ಘಾಟನೆ- ಶಾಸಕ ರಾಮಲಿಂಗಾರೆಡ್ಡಿ. ಅತಿಥಿಗಳು- ಶಾಸಕರಾದ ಬಿ.ಎನ್.ವಿಜಯಕುಮಾರ್, ಸತೀಶ್ ರೆಡ್ಡಿ, ಡಾ.ಡಿ.ಹೇಮಚಂದ್ರಸಾಗರ್, ಎಂ.ಕೃಷ್ಣಪ್ಪ (ದಕ್ಷಿಣ ವಿಧಾಸಭಾ ಕ್ಷೇತ್ರ), ಎನ್.ಎ.ಹ್ಯಾರಿಸ್ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕಂಠಸ್ವಾಮಿ. ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ. ಬೆಳಿಗ್ಗೆ 10.30.

ಕರ್ನಾಟಕ ಜನಾಂದೋಲನ ಸಂಘಟನೆ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ವಿಶ್ವವಿದ್ಯಾಲಯ. ಕ್ರಾಂತಿಕಾರಿ ಪೆರಿಯಾರ್ ಅವರ 133ನೇ ಜನ್ಮ ದಿನಾಚರಣೆ. ಉದ್ಘಾಟನೆ- ಹಿಂದುಳಿದ ವರ್ಗಗಳ ಮುಖಂಡ ಪ್ರೊ.ನರಸಿಂಹಯ್ಯ. ಅತಿಥಿಗಳು- ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಉಪನ್ಯಾಸಕ ನರಸಿಂಹಮೂರ್ತಿ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ದೊಡ್ಡಹಾಗಡೆ ಕೃಷ್ಣಪ್ಪ. ಅಧ್ಯಕ್ಷತೆ- ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಮರಿಯಪ್ಪ. ಬೆಳಿಗ್ಗೆ 11.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಸಭಾಂಗಣ, ಕನ್ನಡ ಭವನ. ಕಲಾ ಪ್ರತಿಭೋತ್ಸವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಉದ್ಘಾಟನೆ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ. ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ದುರ್ಗಾ ಸಿ.ಆವರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ವಿ.ವೆಂಕಟೇಶಪ್ಪ. ಅಧ್ಯಕ್ಷತೆ- ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಅಧ್ಯಕ್ಷ ವಿ.ನಾರಾಯಣಸ್ವಾಮಿ. ಬೆಳಿಗ್ಗೆ 10.30.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: `ಕಾಜಾಣ~ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಮಲ್ಲತ್ತಳ್ಳಿ. ಬೇಲೂರಿನ ನಾಟ್ಯ ಶಿಲ್ಪಗಳ ಶಿಬಿರ ಸಮಾರೋಪ ಸಮಾರಂಭ. ಅತಿಥಿಗಳು- ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ.ಜ್ಞಾನಾನಂದ. ಅಧ್ಯಕ್ಷತೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು. ಸಂಜೆ 4.30.

ಎಸ್.ಆರ್.ಎನ್ ಆದರ್ಶ ಕಾಲೇಜು: ಕಾಲೇಜು ಸಭಾಂಗಣ, ಚಾಮರಾಜಪೇಟೆ. ಸ್ನಾತಕೋತ್ತರ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿಗಳು- ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ (ಪರೀಕ್ಷಾಂಗ) ಪ್ರೊ.ಟಿ.ಆರ್.ರಂಗನಾಥ್, ಪ್ರಾಂಶುಪಾಲ ಜಸ್ತಿಮಲ್ ಸಿಸೋಡಿಯಾ. ಬೆಳಿಗ್ಗೆ 9.

ಕನ್ನಡ ಅಭಿವೃದ್ಧಿ ಪ್ರಾಧಿಕಾರ:
ಸಂಘದ ಕಚೇರಿ, 8ನೇ ಮಹಡಿ, `ಬಿ~ವಿಭಾಗ ಕೇಂದ್ರೀಯ ಸದನ, ಕೋರಮಂಗಲ. ಕನ್ನಡ ತರಗತಿಗಳ ಉದ್ಘಾಟನೆ- ಚಿತ್ರ ನಿರ್ದೇಶಕ ಬಿ.ಸುರೇಶ್. ಅತಿಥಿಗಳು- ಚಿಂತಕ  ರಾ.ನಂ.ಚಂದ್ರಶೇಖರ್, ಕೇಂದ್ರೀಯ ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಡಾ.ಸುಜಿತ್ ಕುಮಾರ್ ಪಿ.ಸೋಂಪುರ್. ಕೇಂದ್ರೀಯ ಕನ್ನಡ ಸದನ ಸಂಘ ಅಧ್ಯಕ್ಷ ಮ.ಚಂದ್ರಶೇಖರ್. ಮಧ್ಯಾಹ್ನ 1.45.

ರಂಗ ಜಂಗಮ ಕಲಾನಿಕೇತನ ಟ್ರಸ್ಟ್: ಸುಚಿತ್ರ ಫಿಲ್ಮ್ ಸೊಸೈಟಿ. ಡಾ.ವಿಷ್ಣುವರ್ಧನ ಚಿತ್ರ ಹಬ್ಬದ ನಿಮಿತ್ತ ವಿಚಾರ ಸಂಕಿರಣ, `ಬಂಗಾರದ ಜಿಂಕೆ~ ಚಲನಚಿತ್ರ ಪ್ರದರ್ಶನ. ಅತಿಥಿಗಳು- ನಿರ್ಮಾಪಕ ದ್ವಾರಕೀಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ವಿಮರ್ಶಕಿ ಡಾ.ವಿಜಯಾ, ನಿರ್ದೇಶಕ ನಂಜುಂಡೇಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಪಾಲಿಕೆ ಸದಸ್ಯ ಎ.ಎಚ್.ಬಸವರಾಜ್. ಬೆಳಿಗ್ಗೆ 9.

ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. `ಸಂಸ್ಕೃತಿ ಚಿಂತನ~ ಕಾರ್ಯಕ್ರಮ. ಅತಿಥಿಗಳು- ಸಚಿವ ಡಾ.ವಿ.ಎಸ್.ಆಚಾರ್ಯ. ಗೌರವ ಸಮರ್ಪಣೆ- ಚಿಂತಕ ಹಾಗೂ ಆರ್ಥಿಕ ತಜ್ಞರಾದ ಪ್ರೊ.ಪಿ.ವಿ.ಕೃಷ್ಣಭಟ್, ಸ್ವಾಮಿನಾಥನ್ ಗುರುಮೂರ್ತಿ. ಸಂಜೆ 5.30.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜು: ಭೈರವೇಶ್ವರನಗರ, ನಾಗರಬಾವಿ ರಸ್ತೆ. `ಹಸಿರು ಪಡೆ~ ಉದ್ಘಾಟನೆ. ಅತಿಥಿಗಳು- ಮಾಜಿ ಉಪಮೇಯರ್ ಶಾಂತಕುಮಾರಿ ರವಿಕುಮಾರ್, ಡಾ.ಪ್ರತಿಭಾ ಹೆಬ್ಬಾರ್. ಅಧ್ಯಕ್ಷತೆ- ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ. ಬೆಳಿಗ್ಗೆ 11.

ಫ್ರೀಸ್ಕೇಲ್ ಸೆಮಿಕಂಡಕ್ಟರ್ ಇಂಡಿಯಾ: ಜೆ.ಎನ್.ಟಾಟಾ ಸಭಾಂಗಣ, ಭಾರತೀಯ ವಿಜ್ಞಾನ ಸಂಸ್ಥೆ. `ದಿ ಫ್ರೀ ಸ್ಕೇಲ್ ಕಪ್ ಇಂಡಿಯಾ- 2011~ ಎಂಜಿನಿಯರ್ ವಿದ್ಯಾರ್ಥಿಗಳಿಗಾಗಿ ರಿಮೋಟ್ ಕಾರು ಚಾಲನಾ ಸ್ಪರ್ಧೆ. ಅತಿಥಿ- ಫ್ರೀಸ್ಕೇಲ್ ವಿಶ್ವವಿದ್ಯಾಲಯ ಕಾರ್ಯಕ್ರಮಗಳ ನಿರ್ದೇಶಕ ಆ್ಯಂಡಿ ಮಾಸ್ಟ್ರೋನಾರ್ಡಿ. ಬೆಳಿಗ್ಗೆ 9.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕನ್ನಡ ಬಳಗ: ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆ.ಜಿ.ರಸ್ತೆ. ಗೌರವ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ. ಅತಿಥಿಗಳು- ಕಲ್ಪನಾ ನಾಗಾನಾಥ್, ಎಸ್.ಕಿಟ್ಟಿ, ನಾರಾಯಣ ರಾಯಚೂರು, ಜಗದೀಶ್ ಮಲ್ನಾಡ್, ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕಿ ಹಂಸಿನಿ ಮೆನನ್. ಅಧ್ಯಕ್ಷತೆ- ಬಳಗದ ಅಧ್ಯಕ್ಷ ಬಿ.ಜೆ.ಶ್ರೀಪತಿ. ಸಂಜೆ 5.30.

ಗುಡ್‌ನೈಟ್ ಸೂರ್ಯ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸೂರ್ಯ ಉತ್ಸವ. ನೃಥ್ವ್ಯಾಗ್ರಮ್- ಒಡಿಸ್ಸಿ ತಂಡದಿಂದ. ಸಂಜೆ 6.45.

ಬಸವ ಸಮಿತಿ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ರಸ್ತೆ. `ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ- ನಿವೃತ್ತ ಪ್ರಾಧ್ಯಾಪಕ ಡಿ.ಆರ್.ಬಸವರಾಜ್. ಸಂಜೆ 6.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಕನ್ನಡ ಸಂಘ: ಸಭಾಂಗಣ, ಕಾವೇರಿ ಭವನ, ಕೆ.ಜಿ.ರಸ್ತೆ. ರಂಗಗೀತೆ ಗಾಯನ ಕಾರ್ಯಕ್ರಮ- ಬಿ.ಎಸ್.ಶ್ರೀನಿವಾಸಮೂರ್ತಿ ಮತ್ತು ತಂಡದಿಂದ. ಮಧ್ಯಾಹ್ನ 1.35.

ಧಾರ್ಮಿಕ ಕಾರ್ಯಕ್ರಮ
ಚಿನ್ಮಯ ಮಿಷನ್:
5ನೇ ಮುಖ್ಯರಸ್ತೆ, ಮಲ್ಲೇಶ್ವರ. `ಶಿವಾಪರಾಧ ಕ್ಷಮಾಪಣ ಸ್ತೋತ್ರಮ್~ ಪ್ರವಚನ- ವಸುಮನ ಚೈತನ್ಯ. ಸಂಜೆ 6.

ರಾಗಿಗುಡ್ಡ ಪ್ರಸನ್ನ ವೀರಾಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. `ಆದಿ ಕವಿತೆಯ ಅಂತರಂಗ~ ಕುರಿತು ಪ್ರವಚನ- ರಾಮಸ್ವಾಮಿ ಅಯ್ಯಂಗಾರ್. ಸಂಜೆ 6.

ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್ತು: ವೆಂಕಟೇಶ್ವರಸ್ವಾಮಿ ದೇವಸ್ಥಾನ, `ಟಿ~ ಬಡಾವಣೆ, ಜಯನಗರ. ಸಂಗೀತ ಕಾರ್ಯಕ್ರಮ- ಭವಾನಿರಾವ್ ಮತ್ತು ಆನಂದ್ ತಂಡ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT