ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು, ಅಕ್ಟೋಬರ್ 2, ಭಾನುವಾರ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ದೂರದರ್ಶನ ಕೇಂದ್ರ, ಸರ್ವೋದಯ ಅಂತರರಾಷ್ಟ್ರೀಯ ಟ್ರಸ್ಟ್: ಗಾಜಿನ ಮನೆ, ರಾಜಭವನ. ಗಾಂಧಿ ಜಯಂತಿ- ಅಹಿಂಸಾ ಮಹೋತ್ಸವ.
 
ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಅತಿಥಿಗಳು- ಆರ್ಚ್ ಬಿಷಪ್ ಬರ್ನಾಡ್ ಮೊರಸ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಜಾಮಿಯಾ ಮಸೀದಿಯ ಇಮಾಮ್ ಎಂ.ರಿಯಾಜ್- ಉರ್- ರೆಹಮಾನ್, ಮಹಾಭೋದಿ ಸೊಸೈಟಿ ಆನಂದ ಭಂತೇಜಿ, ಗುರುಸಿಂಗ್ ಸಭಾದ ಅಧ್ಯಕ್ಷ ಗುರುಶರಣ ಸಿಂಗ್, ಪಾರ್ಸಿ ಧರ್ಮಗುರು ಎರ್‌ವಾಡ ಫ್ಹರದೂನ್ ಕರ್ಕಾರಿಯಾ, ಹೈಕೋರ್ಟ್ ನ್ಯಾಯಮೂರ್ತಿ ಕೆ.ಶ್ರೀಧರ್, ಭಾರತೀಯ ವಿದ್ಯಾಭವನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಬೆಳಿಗ್ಗೆ 10.30.

ಕರ್ನಾಟಕ ಅರಣ್ಯ ಇಲಾಖೆ: ಹೈಕೋರ್ಟ್ ಅಂಚೆ ಕಚೇರಿ ಇಲಾಖೆ ಮುಂಭಾಗದಿಂದ ಲಾಲ್‌ಬಾಗ್ ವರೆಗೆ. `57ನೇ ವನ್ಯಜೀವಿ ಸಪ್ತಾಹ ಆಚರಣೆ- 2011~. ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಸಿ.ಪಿ.ಯೋಗೀಶ್ವರ್, ಆರ್.ಅಶೋಕ, ಮೇಯರ್ ಪಿ.ಶಾರದಮ್ಮ, ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ, ಸಂಸದ ಪಿ.ಸಿ.ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇಂದು ಬಿ.ಶ್ರೀವಾಸ್ತವ್. ಅಧ್ಯಕ್ಷತೆ- ಶಾಸಕ ಆರ್.ರೋಷನ್ ಬೇಗ್. ಬೆಳಿಗ್ಗೆ 7.30.

ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆ: ಗಾಂಧಿ ಭವನ, ಕುಮಾರಪಾರ್ಕ್. `62ನೇ ಸಾಲಿನ ಕ್ಷಯರೋಗ ಮುದ್ರೆಗಳ ಆಂದೋಲನ-2011 ಹಾಗೂ ಮುದ್ರೆಗಳ ಬಿಡುಗಡೆ~ ಕಾರ್ಯಕ್ರಮ. ಅತಿಥಿ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಬೆಳಿಗ್ಗೆ 11.

ಆರೋಗ್ಯ ಮಂದಿರ ಟ್ರಸ್ಟ್- ಆರೋಗ್ಯ ಹೋಲಿಸ್ಟಿಕ್ ಕೇಂದ್ರ: ಯೋಗ ವಿಭಾಗ, 1ನೇ `ಆರ್~ ಬ್ಲಾಕ್, ಇಸ್ಕಾನ್ ಬಳಿ, ರಾಜಾಜಿನಗರ. ಗಾಂಧಿ ಜಯಂತಿ ಮತ್ತು ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಮಧುಮೇಹ ನಿರ್ವಹಣಾ ಕಾರ್ಯಾಗಾರ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್.

ಅತಿಥಿಗಳು- ಶಾಸಕ ನೆ.ಲ.ನರೇಂದ್ರಬಾಬು, ಕೇಂದ್ರ ಯೋಗ ಪ್ರಕೃತಿ ಚಿಕಿತ್ಸಾ ಸಂಶೋಧನಾ ಪರಿಷತ್ತಿನ ನಿರ್ದೇಶಕ ಡಾ.ಬಿ.ಟಿ.ಚಿದಾನಂದಮೂರ್ತಿ. ಅಧ್ಯಕ್ಷತೆ- ಸಂಸದ ಚೆಲುವರಾಯಸ್ವಾಮಿ. ಬೆಳಿಗ್ಗೆ 9.30.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ: ಎಂ.ಜಿ.ರಸ್ತೆ ಮಹಾತ್ಮ ಗಾಂಧಿ ಪ್ರತಿಮೆಯಿಂದ ಕುಮಾರಪಾರ್ಕ್ ಗಾಂಧಿ ಭವನದವರೆಗೆ ವಿಶ್ವ ಅಹಿಂಸಾ ದಿನಾಚರಣೆ ಅಂಗವಾಗಿ ಜಾಗೃತಿ ಪಾದಯಾತ್ರೆ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಬೆಳಿಗ್ಗೆ 9.

ಕರ್ನಾಟಕ ರಾಜ್ಯ ಹೋಟೆಲ್ ಕಾರ್ಮಿಕರ ಒಕ್ಕೂಟ: ಪುರಭವನ. ಕಾರ್ಮಿಕರ ಸಮ್ಮೇಳನ. ಉದ್ಘಾಟನೆ- ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ. ಅತಿಥಿಗಳು- ಸಚಿವ ಬಿ.ಎನ್.ಬಚ್ಚೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಎಂ.ಕೃಷ್ಣಪ್ಪ (ವಿಜಯನಗರ), ನೆ.ಲ.ನರೇಂದ್ರಬಾಬು. ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ಬೆಳಿಗ್ಗೆ 10.30.

ಗುಜರಾತಿ ಸಮಾಜ- ಕರ್ನಾಟಕ: ಗಾಂಧಿ ಪ್ರತಿಮೆ, ಸುಬ್ಬಣ್ಣ ವೃತ್ತ, ಮೌರ್ಯ ಹೋಟೆಲ್ ಎದುರು, ಶೇಷಾದ್ರಿರಸ್ತೆ, ಗಾಂಧಿನಗರ. ಗಾಂಧಿ ಜಯಂತಿ ಆಚರಣೆ. ಅತಿಥಿಗಳು- ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ದಿನೇಶ್ ಗುಂಡೂರಾವ್, ಪಾಲಿಕೆ ವಿರೋಧ ಪಕ್ಷದ ನಾಯಕ ಉದಯಶಂಕರ್. ಬೆಳಿಗ್ಗೆ 9.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಿತಿ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಶರನ್ನವರಾತ್ರಿ, ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ. ಸಾನ್ನಿಧ್ಯ- ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ. ವೇದಘೋಷ- ರೇಣುಕಾಚಾರ್ಯ ಗುರುಕುಲ.

`ಪಂಚಾಚಾರಗಳ  ಮಹತ್ವ~ ಕುರಿತು ಉಪನ್ಯಾಸ- ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ. `ಪಂಚಾಚಾರ್ಯ ಪ್ರಭ~ ವಾರಪತ್ರಿಕೆ ಬಿಡುಗಡೆ- ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ. `ವೀರಶೈವಾಮೃತ ಪುರಾಣ~ ಕೃತಿ ಲೋಕಾರ್ಪಣೆ- ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ಡಾ.ರಾಮಾಜೋಯಿಸ್. ಉದ್ಯಮಿ ಅಥಣಿ ವೀರಣ್ಣ ಅವರಿಗೆ ವೀರಶೈವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ.

ಅತಿಥಿಗಳು- ಸಂಸದ ಎನ್.ಧರ್ಮಸಿಂಗ್, ಬಿಜೆಪಿ ರಾಜ್ಯ ಘಟಕಕ್ಕೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ. ಸಂಜೆ 6.30.

ಅಕ್ಷಯ ಪ್ರತಿಷ್ಠಾನ: ನಂ 102, 2ನೇ ಅಡ್ಡರಸ್ತೆ, 3ನೇ ಹಂತ, ಬನಶಂಕರಿ. ಗಾಂಧಿ ಜಯಂತಿ ಅಂಗವಾಗಿ ಉಚಿತ ನೇತ್ರ ತಪಾಸಣೆ, ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ. ಅತಿಥಿಗಳು- ಸಚಿವ ಆರ್.ಅಶೋಕ, ಶಾಸಕ ಎಂ.ಕೃಷ್ಣಪ್ಪ (ವಿಜಯನಗರ). ಬೆಳಿಗ್ಗೆ 10.30.

ಕೋಟೆ ಕಲಾ ಅಕಾಡೆಮಿ ಟ್ರಸ್ಟ್: ರವೀಂದ್ರ ಕಲಾಕ್ಷೇತ್ರ. ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ, `ತಾತ ಬಂದ್ರು~ ನಾಟಕ ಪ್ರದರ್ಶನ, `ನನ್ನ ಎರಡು ನಾಟಕಗಳು~ ಕೃತಿ ಲೋಕಾರ್ಪಣೆ ಕಾರ್ಯಕ್ರಮ. ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿಗಳು- ಸಾಹಿತಿ ಕುಂ.ವೀರಭದ್ರಪ್ಪ, ಕವಿ ಬಿ.ಆರ್.ಲಕ್ಷ್ಮಣರಾವ್. ಸಂಜೆ 5.
ಬೆಂಗಳೂರು ಮಹಾನಗರ ಜನತಾದಳ: ಪಕ್ಷದ ಕಚೇರಿ, ರೇಸ್‌ಕೋರ್ಸ್ ರಸ್ತೆ. ಮಹಾತ್ಮ ಗಾಂಧಿ ಜನ್ಮ ದಿನಾಚರಣೆ. ಅತಿಥಿಗಳು- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಬೆಳಿಗ್ಗೆ 11.

ಗೋವಿಂದರಾಜನಗರ ಬ್ಲಾಕ್ ಕಾಂಗ್ರೆಸ್ ಸಮಿತಿ: ಅಭಿಮಾನಿ ಸಭಾಂಗಣ, ಕೆಇಬಿ ಕಚೇರಿ ಹಿಂಭಾಗ, ಬಸವೇಶ್ವರನಗರ. ಮಹಾತ್ಮ ಗಾಂಧಿ ದಿನಾಚರಣೆ ಮತ್ತು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ತಿಮ್ಮಯ್ಯ ಕಾಂಗ್ರೆಸ್ ಸೇರ್ಪಡೆ. ಅತಿಥಿಗಳು- ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಬೈರೇಗೌಡ, ಶಾಸಕ ಪ್ರಿಯಾಕೃಷ್ಣ. ಅಧ್ಯಕ್ಷತೆ- ಶಾಸಕ ಎಂ.ಕೃಷ್ಣಪ್ಪ (ವಿಜಯನಗರ). ಸಂಜೆ 6.15.

ಜೆ.ಪಿ.ಎನ್ ಸಹಾಯಕ ಸಹಕಾರ ಬ್ಯಾಂಕ್: ನಂ 5/3, 2ನೇ ಮಹಡಿ, 1ನೇ ಮುಖ್ಯರಸ್ತೆ, 4ನೇ ಹಂತ, 3ನೇ ಬಡಾವಣೆ, ಕೆನರಾ ಬ್ಯಾಂಕ್ ಬಳಿ, ಬಸವೇಶ್ವರನಗರ. ಬ್ಯಾಂಕ್ ಉದ್ಘಾಟನೆ- ಎಚ್.ಡಿ.ಕುಮಾರಸ್ವಾಮಿ. ಅತಿಥಿಗಳು- ಸಚಿವ ಸುರೇಶ್‌ಕುಮಾರ್, ಶಾಸಕರಾದ ಕೃಷ್ಣಪ್ಪ (ವಿಜಯನಗರ), ಪ್ರಿಯಾಕೃಷ್ಣ, ನೆ.ಲ.ನರೇಂದ್ರಬಾಬು. ಬೆಳಿಗ್ಗೆ 10.30.

ಸೌತ್ ಬೆಂಗಳೂರು ಸಾಂಸ್ಕೃತಿಕ ಸಮಿತಿ: ಎಣ್.ಜಿ.ಆರ್.ಕಲ್ಯಾಣ ಮಂಟಪ, ಸಾರಕ್ಕಿ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ಮುಖ್ಯರಸ್ತೆ, 3ನೇ ಹಂತ, ಜೆ.ಪಿ.ನಗರ. ದಸರಾ ಮಹೋತ್ಸವ ಕಾರ್ಯಕ್ರಮ. ಉದ್ಘಾಟನೆ- ಮೇಯರ್ ಪಿ.ಶಾರದಮ್ಮ. ಅತಿಥಿಗಳು- ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಎಚ್.ಟಿ.ಸಾಂಗ್ಲಿಯಾನ, ಶಾಸಕ ಬಿ.ಎನ್.ವಿಜಯಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಬಿಬಿಎಂಪಿ ನಗರ ಯೋಜನೆ ಸಮಿತಿ ಮುಖ್ಯಸ್ಥ ಸಿ.ಕೆ.ರಾಮಮೂರ್ತಿ. ಸಂಜೆ 7.

ವೀರಶೈವ ಲಿಂಗಾಯತ ಸೇವಾ ಸಮಿತಿ: ಮಿಲನ ಟವರ್, ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ, ಹೊಂಗಸಂದ್ರ. ಶರಣ ಸಂಗಮ ಕಾರ್ಯಕ್ರಮ. ಸಾನ್ನಿಧ್ಯ- ಮೇಲಣಗವಿ ವೀರಸಿಂಹಾಸನ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ. ಉದ್ಘಾಟನೆ- ಸಾಹಿತಿ ಹೀ.ಚಿ.ಶಾಂತವೀರಯ್ಯ. ಅತಿಥಿಗಳು- ಶಾಸಕ ಎನ್.ಎಸ್.ನಂದೀಶ್‌ರೆಡ್ಡಿ, ಕೆಪಿಸಿಸಿ ಸದಸ್ಯ ಕುಪೇಂದ್ರರೆಡ್ಡಿ, ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಿ.ನಾಗಭೂಷಣರೆಡ್ಡಿ. ಅಧ್ಯಕ್ಷತೆ- ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ. ಬೆಳಿಗ್ಗೆ 10.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಎಂ.ಜಿ.ರಸ್ತೆ, ಮಹಾತ್ಮ ಗಾಂಧಿ ಪ್ರತಿಮೆ ಎದುರು. ಗಾಂಧಿ ಜಯಂತಿ ಅಂಗವಾಗಿ ಸರ್ವಧರ್ಮ ಪ್ರಾರ್ಥನಾ ಸಭೆ. ಅತಿಥಿಗಳು- ಮೇಯರ್ ಪಿ.ಶಾರದಮ್ಮ, ಉಪ ಮೇಯರ್ ಎಸ್.ಹರೀಶ್. ಬೆಳಿಗ್ಗೆ 9.

ಫ್ರೆಂಡ್ಸ್ ವೆಲ್‌ಫೇರ್ ಅಸೋಸಿಯೇಷನ್: ವಿಶ್ವೇಶ್ವರಯ್ಯ ಸಭಾಂಗಣ, ಕೆಇಬಿ ಎಂಜಿನಿಯರ್ಸ್‌ ಅಸೋಸಿಯೇಷನ್, ರೇಸ್‌ಕೋರ್ಸ್ ರಸ್ತೆ, ಆನಂದರಾವ್ ವೃತ್ತ. ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ. ಅತಿಥಿಗಳು- ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್. ಬೆಳಿಗ್ಗೆ 10.30.

ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್: ಸಮ್ಮೇಳನ ಸಭಾಂಗಣ, ಕರ್ನಾಟಕ ಜೈನ ಭವನ. 23ನೇ ವಾರ್ಷಿಕೋತ್ಸವ, `ಜಿನಭಜನಸಾರ~ ಕೃತಿ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

ಸಾನ್ನಿಧ್ಯ- ಅರಹಂತಗಿರಿ ಕ್ಷೇತ್ರದ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಪಾವನಕೀರ್ತಿ ಸ್ವಾಮೀಜಿ. ಉದ್ಘಾಟನೆ- ಆರ್.ವಿ.ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ರಿಜಿಸ್ಟ್ರಾರ್ ಆರ್.ಅಶೋಕ. ಅತಿಥಿಗಳು- ಎಸ್‌ಬಿಎಂ ಡೆಪ್ಯುಟಿ ಜನರಲ್ ಮ್ಯಾನೇಜರ್ ಕೆ.ಕೆ.ಜೈನ್, ಭಾರತೀಯ ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಆರ್.ಎಚ್.ಸಾವಕರ್.  ಮಧ್ಯಾಹ್ನ 3.30.
 
ಬೆಂಗಳೂರು ವಿಶ್ವವಿದ್ಯಾಲಯ: ಗಾಂಧಿ ಭವನ, ಜ್ಞಾನ ಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ. ಗಾಂಧಿ ಜಯಂತಿ ಆಚರಣೆ. ಅತಿಥಿ- ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎ.ವಿ.ನಾಡಕರ್ಣಿ. ಅಧ್ಯಕ್ಷತೆ- ಕುಲಪತಿ ಡಾ.ಎನ್.ಪ್ರಭುದೇವ್. ಬೆಳಿಗ್ಗೆ 10.

ಸಾಹಿತ್ಯ ಅಕಾಡೆಮಿ, ನವದೆಹಲಿ, ಬುದ್ಧ, ಬಸವ, ಗಾಂಧಿ ಸ್ಮಾರಕ ಟ್ರಸ್ಟ್: ಸಭಾಂಗಣ, ಶೇಷಾದ್ರಿಪುರ ಶಿಕ್ಷಣ ಸಂಸ್ಥೆ, ಶೇಷಾದ್ರಿಪುರ. ಗಾಂಧಿ ಜಯಂತಿ ಅಂಗವಾಗಿ `ಗಾಂಧಿ ವಿಚಾರಗಳ ಪ್ರಸ್ತುತತೆ- ವಚನ- ದಾಸ ಸಾಹಿತ್ಯ~ ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮ.
 

ಉದ್ಘಾಟನೆ- ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ. ಅತಿಥಿಗಳು- ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸದಸ್ಯ ಎಲ್.ನರಸಿಂಹಯ್ಯ, ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ. ಅಧ್ಯಕ್ಷತೆ- ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಶ್ರೀನಿವಾಸ್. ಬೆಳಿಗ್ಗೆ 9.30.

ನ್ಯಾಷನಲ್ ಪದವಿ ಕಾಲೇಜು: ಡಾ.ಎಚ್.ಎನ್. ಮಲ್ಟಿ ಮೀಡಿಯಾ ಸಭಾಂಗಣ. ಗಾಂಧಿ ಜಯಂತಿ ಸಮಾರಂಭ. ಅತಿಥಿ- ಪ್ರಾಂಶುಪಾಲ ಡಾ.ಚಂದ್ರಶೇಖರ ನಂಗಲಿ. ಅಧ್ಯಕ್ಷತೆ- ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮದಾಸ್. ಬೆಳಿಗ್ಗೆ 9.

ಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿ: ಬಿ.ವಿ.ಕಾರಂತ ರಸ್ತೆ, 2ನೇ ಹಂತ, ಬನಶಂಕರಿ. ಗಾಂಧಿ ಜಯಂತಿ ಅಂಗವಾಗಿ `ಪತ್ರಕರ್ತರಾಗಿ ಗಾಂಧಿ~ ಉಪನ್ಯಾಸ- ಪತ್ರಕರ್ತರಾದ ಎಸ್.ಕೆ. ಶೇಷಚಂದ್ರಿಕ. ಬೆಳಿಗ್ಗೆ 11.

ಕೃಷಿ ವಿಶ್ವವಿದ್ಯಾಲಯ: ಸಭಾಂಗಣ, ಜಿಕೆವಿಕೆ. ದೂರ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ. ಅತಿಥಿಗಳು- ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಅ.ಶ್ರೀ.ಆನಂದ್, ವಿಶ್ವವಿದ್ಯಾಲಯ ಡೀನ್ ಡಾ.ಬಿ.ಮಲ್ಲಿಕ್, ವಿಸ್ತರಣಾ ನಿರ್ದೇಶಕ ಆರ್.ಎಸ್.ಕುಲಕರ್ಣಿ, ಸಂಶೋಧನಾ ನಿರ್ದೇಶಕ ಡಾ.ಎಚ್.ಶಿವಣ್ಣ. ಅಧ್ಯಕ್ಷತೆ- ಕುಲಪತಿ ಡಾ.ಕೆ.ನಾರಾಯಣಗೌಡ. ಬೆಳಿಗ್ಗೆ 11.30.

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಸುಚಿತ್ರ ಸಭಾಂಗಣ, ಬಿ.ವಿ.ಕಾರಂತ ರಸ್ತೆ, 2ನೇ ಹಂತ, ಬನಶಂಕರಿ. `ಕನ್ನಡ ಭೂಮಿಗೆ ಪರ್ವತವಾಣಿಯವರ ಕೊಡುಗೆ~ ಕುರಿತ ಉಪನ್ಯಾಸ ಕಾರ್ಯಕ್ರಮ- ಪ್ರೊ.ಎಚ್.ಎಸ್.ಹಿರಿಯಣ್ಣಯ್ಯ. `ಉಂಡಾಡಿ ಗುಂಡ~ ನಾಟಕ ಪ್ರದರ್ಶನ. ಸಂಜೆ 6.

ಅಜಂತಾ ಸಾಂಸ್ಕೃತಿಕ ವಿದ್ಯಾಸಂಸ್ಥೆ: ಡಾ.ರಾಜ್‌ಕುಮಾರ್ ಕಲಾಕ್ಷೇತ್ರ, ಆರ್.ಟಿ.ಓ. ಕಚೇರಿ ಹಿಂಭಾಗ, ರಾಜಾಜಿನಗರ. 28ನೇ ವಾರ್ಷಿಕೋತ್ಸವ, ಅಜಂತಾ ರಾಷ್ಟ್ರ ರತ್ನ, ಕಲಾ ರತ್ನ, ಸ್ವರ್ಣ ದಂಪತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಅತಿಥಿಗಳು- ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ದೇವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಸಮಾಜ ಕಾರ್ಯಕರ್ತ ಬಿ.ಟಿ.ಮುನಿಯಪ್ಪ. ಸಂಜೆ 6.

ಗಾಂಧಿ ಬಜಾರ್ ವಿಚಾರ ವೇದಿಕೆ: ಟ್ಯಾಗೋರ್ ವೃತ್ತ. ಗಾಂಧಿವಾದಿ ವಿ.ಅಣ್ಣಯ್ಯ ಅವರಿಗೆ ಸನ್ಮಾನ ಸಮಾರಂಭ. ಅತಿಥಿಗಳು- ಮಾಜಿ ಮೇಯರ್ ಬಿ.ವಿ.ಪುಟ್ಟೇಗೌಡ, ಪಾಲಿಕೆ ಸದಸ್ಯ ಪಿ.ಎನ್.ಸದಾಶಿವ, ಕವಿ ಡಾ.ಸುಮತೀಂದ್ರ ನಾಡಿಗ್. ಬೆಳಿಗ್ಗೆ 10.30.

ಆರ್.ವಿ.ನಿರ್ವಹಣಾ ಕಾಲೇಜು: 36ನೇ ಅಡ್ಡರಸ್ತೆ, 4ನೇ `ಟಿ~ಬಡಾವಣೆ, ಜಯನಗರ. ಎಂಬಿಎ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿಗಳು- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ.ಶರಣ್ ಪಾಟೀಲ್. ಬೆಳಿಗ್ಗೆ 10.30.

ಮಾರುತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘ: ವಳಗೇರಹಳ್ಳಿ, ಕೆಂಗೇರಿ ಉಪನಗರ. ರಕ್ತದಾನ ಶಿಬಿರ. ಅತಿಥಿ- ಪಾಲಿಕೆ ಸದಸ್ಯೆ ವೀಣಾ ನಾಗರಾಜು, ಬಿಜೆಪಿ ಮುಖಂಡರಾದ ಶಿವನಂಜಪ್ಪ. ಬೆಳಿಗ್ಗೆ 10.
ವೀರಶೈವ ಕ್ಷೇಮಾಭ್ಯುದಯ ಪ್ರತಿಷ್ಠಾನ: ಷರಾಫ್ ಸಭಾಂಗಣ, ರೇಣುಕಾಚಾರ್ಯ ಕಾಲೇಜು ಆವರಣ, ರೇಸ್‌ಕೋರ್ಸ್ ರಸ್ತೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಸಂಜೆ 4.

ಶ್ರೀವಾಣಿ ವಿದ್ಯಾ ಕೇಂದ್ರ: ನಂ 1246, 2ನೇ ಹಂತ, ರಾಜಾಜಿನಗರ. ನವರಾತ್ರಿ ಸಂಗೀತೋತ್ಸವ ಕಾರ್ಯಕ್ರಮ. ಹಿಂದೂಸ್ತಾನಿ ಗಾಯನ ಕಾರ್ಯಕ್ರಮ. ಅನಘಾ ಭಟ್ ಮತ್ತು ವೃಂದ. ಸಂಜೆ 6.30.

ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ: ವಿಭೂತಿಪುರ, ಮಾರತ್ತಹಳ್ಳಿ. ಕವಯತ್ರಿ ಬಿ.ಇಂದಿರಾ ಅವರ `ವಲಸೆ ಬಂದ ಹಕ್ಕಿಗಳು~ ಪುಸ್ತಕ ಲೋಕಾರ್ಪಣೆ. ಅತಿಥಿಗಳು- ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಹಿತಿ ಜರಗನಹಳ್ಳಿ ಶಿವಶಂಕರ್. ಬೆಳಿಗ್ಗೆ 11.

ಶಂಕರ ಪ್ರತಿಷ್ಠಾನ: ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆ. `ಸೋಮ~ ಕಲಾ ಉತ್ಸವ. ಭರತನಾಟ್ಯ ಪ್ರದರ್ಶನ- ಪಿ.ಪ್ರವೀಣ್ ಕುಮಾರ್ ಮತ್ತು ಸೌಂದರ್ಯ ಶ್ರೀವಾತ್ಸವ. ಸಂಜೆ 6.30.ನರಸಯ್ಯ ಸ್ಮಾರಕ ಸನ್ಮಾನ ಸಮಿತಿ ಮತ್ತು ಸರ್ಕಲ್ ಮಾರಮ್ಮ ದೇವಸ್ಥಾನ: ಸರ್ಕಲ್ ಮಾರಮ್ಮ ದೇವಸ್ಥಾನ ಆವರಣ, ಮಲ್ಲೇಶ್ವರ. ರಾಮಚಂದ್ರಪ್ಪ, ವಿವೇಕಾನಂದ ಕೇಂದ್ರದ ಸ್ಥಾಪಕ ನಾಗರಾಜ ಗುಪ್ತ, ಪತ್ರಕರ್ತ ರವೀಂದ್ರ ಭಟ್, ಸಾವಯವ ಕೃಷಿಕ ಬಿ.ಕೆ.ಆನಂದ್, ಜಲ ಸಂರಕ್ಷಣೆ ಹೋರಾಟಗಾರ ಎ.ಆರ್.ಶಿವಕುಮಾರ್, ಪರಿಸರವಾದಿ ವಿದ್ಯಾ ದಿನಕರ್ ಅವರಿಗೆ ಸನ್ಮಾನ ಸಮಾರಂಭ. ಅತಿಥಿ- ಶ್ರೀಧರ ಸ್ವಾಮಿ. ಸಾನ್ನಿಧ್ಯ- ಸ್ವಾಮಿ ಶಾರದಾತ್ಮಾನಂದ. ಸಂಜೆ 6.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ. ಅಭಿನಂದನೆ- ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ. ಅತಿಥಿಗಳು- ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ದಯ್ಯ. ಅಧ್ಯಕ್ಷತೆ- ಒಕ್ಕೂಟದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ. ಸಂಜೆ 5.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ: ಪಕ್ಷದ ಕಚೇರಿ, ಕ್ವೀನ್ಸ್ ರಸ್ತೆ. ಮಹಾತ್ಮ ಗಾಂಧಿ ಜನ್ಮ ದಿನಾಚರಣೆ. ಬೆಳಿಗ್ಗೆ 11.

ಭ್ರಷ್ಟಾಚಾರ ವಿರೋಧಿ ಪ್ರಗತಿಪರರ ವೇದಿಕೆ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ವಿಶ್ವವಿದ್ಯಾಲಯ. ಪ್ರಗತಿಪರ ಚಿಂತಕರ, ಎಡಶಕ್ತಿ ಮತ್ತು ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಭ್ರಷಾಚಾರ ವಿರೋಧಿ ಪ್ರಥಮ ಸಮಾವೇಶ. `ಲೋಕಾಯುಕ್ತರು ಸಲ್ಲಿಸಿರುವ ವರದಿ ಅಂಗೀಕರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಮಾವೇಶ. ಅತಿಥಿಗಳು- ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಚಿಂತಕರಾದ ಕೆ.ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್, ಜಿ.ಎನ್.ನಾಗರಾಜ್, ಮಾವಳ್ಳಿ ಶಂಕರ್. ಬೆಳಿಗ್ಗೆ 10.30.

ಕಮರ್ಷಿಯಲ್ ಫೋರಂ ಮಲ್ಲೇಶ್ವರ: 8ನೇ ಅಡ್ಡರಸ್ತೆ, ಮಲ್ಲೇಶ್ವರ. `ದಸರಾ- ದೀಪಾವಳಿ ಮೇಳ~ ಉದ್ಘಾಟನೆ. ಅತಿಥಿಗಳು- ಚಲನಚಿತ್ರ ಕಲಾವಿದ ಹರಿಪ್ರಿಯ, ನಟ ಜಗ್ಗೇಶ್, ಪಾಲಿಕೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಸದಸ್ಯ ಡಾ.ಶಿವಕುಮಾರ್. ಸಂಜೆ 6.

ರೇಡಿಯೇಟ್ ಕಲಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ: ನಂ 16, 10ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಆರ್‌ಬಿಐ ಬಡಾವಣೆ, 7ನೇ ಹಂತ, ಜೆ.ಪಿ.ನಗರ. ಚಿತ್ರಕಲಾ ಪ್ರದರ್ಶನ. ಅತಿಥಿಗಳು- ಕಲಾವಿದೆ ಲತಾ ಶ್ರೀನಿವಾಸ್, ಪಾಲಿಕೆ ಸದಸ್ಯೆ ಶಶಿರೇಖಾ ಜಯರಾಂ, ಸಂಸ್ಥೆ ಅಧ್ಯಕ್ಷ ಜಯರಾಂ. ಸಂಜೆ 5.
ಬಾರ್ನ್ ಫ್ರೀ ಆರ್ಟ್ ಶಾಲೆ: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಾಲಯದ ಆವರಣ, ಹನುಮಂನಗರ. `ಪೀಸ್ ಮ್ಯೂಸಿಯಂ~ ಉದ್ಘಾಟನೆ. ಅತಿಥಿಗಳು- ಹಿರೋಶಿಮಾ ಶಾಂತಿ ಸ್ಮಾರಕ ಪಾರ್ಕ್‌ನ ನಿರ್ದೇಶಕ ಡಾ.ಸ್ಟೀವ್ ಲೀಪರ್, ಜಾನ್ ದೇವರಾಜ್. ಮಧ್ಯಾಹ್ನ 1.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ: ಪಟೇಲ್‌ಗುಳ್ಳಪ್ಪ ಸೇವಾ ಪ್ರತಿಷ್ಠಾನ, ನಂ. 1, ಜ್ಞಾನಕಾಶಿ, ಮುನೇಶ್ವರ ಬಡಾವಣೆ, ಆವಲಹಳ್ಳಿ. ಪಟೇಲ್ ಗುಳ್ಳಪ್ಪ ಸೇವಾ ಪ್ರತಿಷ್ಠಾನದಿಂದ ಗಾಂಧಿ ವಿಚಾರಧಾರೆ ಕಾರ್ಯಕ್ರಮ. ಬೆಳಿಗ್ಗೆ 8.30.

ಹೈಕೋರ್ಟ್: ಸಮ್ಮೇಳನ ಸಭಾಂಗಣ, 1ನೇ ಮಹಡಿ, ಸಿಟಿ ಸಿವಿಲ್ ಕೋರ್ಟ್ ವಾಣಿಜ್ಯ ಸಂಕೀರ್ಣ. ಸ್ವಯಂ ಸೇವಾ ಸಂಸ್ಥೆಗಳ ಕಾನೂನು ಸಲಹಾ ತರಬೇತಿ ಕಾರ್ಯಕ್ರಮ. ಉದ್ಘಾಟನೆ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಇಂದ್ರಕಲಾ. ಬೆಳಿಗ್ಗೆ 9.30.

ರೋಟರಿ ಕ್ಲಬ್ 3190: ರೋಟರಿ ಹೌಸ್ ಫ್ರೆಂಡ್‌ಶಿಪ್, ನಂ 20, ಲ್ಯಾವೆಲ್ಲೆ ರಸ್ತೆ. `ರೋಟರಿ ಐಡೋಲ್~ ಉತ್ತಮ ಗಾಯಕರ ಸ್ಪರ್ಧೆ ಕಾರ್ಯಕ್ರಮ. ಅತಿಥಿ- ಜಿಲ್ಲಾ ಗವರ್ನರ್ ಎಸ್.ನಾಗೇಂದ್ರ. ಸಂಜೆ 5.30.
ಫೇಥ್ ಅಸೆಂಬ್ಲಿ ಆಫ್ ಗಾಡ್ ಚರ್ಚ್: ವಿಜ್ಞಾನ ನಗರ ಮುಖ್ಯರಸ್ತೆ, ಹೊಸ ತಿಪ್ಪಸಂದ್ರ. ಚರ್ಚ್‌ನ 2ನೇ ಹಂತದ ಉದ್ಘಾಟನಾ ಸಮಾರಂಭ. ಅತಿಥಿ- ರೆವೆಡೆಂಟ್ ಡಿ.ಮೋಹನ್. ಸಂಜೆ 5.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: 9ನೇ ಮುಖ್ಯರಸ್ತೆ, 3ನೇ ಬಡಾವಣೆ, ಜಯನಗರ. ಸ್ವಯಂ ರಕ್ತದಾನ ಶಿಬಿರ. ಬೆಳಿಗ್ಗೆ 10.
 
ರಂಗದರ್ಶಿ
ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ಹ್ಯಾಮ್ಲೆಟ್: ದಿ ಕ್ಲೌನ್ಸ್ ಪ್ರಿನ್ಸ್~ ನಾಟಕ ಪ್ರದರ್ಶನ- ದಿ ಕಂಪೆನಿ ಥಿಯೇಟರ್ ತಂಡದಿಂದ. ಸಂಜೆ 7.30.

ನಿಮ್ಹಾನ್ಸ್ ನೌಕರರ ಸಂಘ: ರವೀಂದ್ರ ಕಲಾಕ್ಷೇತ್ರ. `ಶ್ರೀಕೃಷ್ಣ ಸಂಧಾನ~ ನಾಟಕ ಪ್ರದರ್ಶನ. ಬೆಳಿಗ್ಗೆ 9.30.
ವಿ ಮೂವ್ ಥಿಯೇಟರ್: ಕೆ.ಎಚ್. ಕಲಾಸೌಧ, ಹನುಮಂತನಗರ. `ನನ್ನವಳ ಕಾಗದ~ ಹಾಸ್ಯ ನಾಟಕ ಪ್ರದರ್ಶನ. ನಿರ್ದೇಶನ- ಹುನುರಾಮ್ ಸಂಜೀವ್. ಸಂಜೆ 7.30.

ಬಾರ್ನ್ ಫ್ರೀ ಆರ್ಟ್ ಶಾಲೆ: ಕೆ.ಎಚ್. ಕಲಾಸೌಧ, ರಾಮಾಂಜನೇಯ ದೇವಾಲಯದ ಆವರಣ, ಹನುಮಂತನಗರ. `ಹೇವಾ ಜೊ ರೇಶಾ~ ನಾಟಕ ಪ್ರದರ್ಶನ. ಬಾರ್ನ್ ಫ್ರೀ ಆರ್ಟ್ ಶಾಲೆಯ ಮಕ್ಕಳಿಂದ. ಬೆಳಿಗ್ಗೆ 11.

ಧಾರ್ಮಿಕ ಕಾರ್ಯಕ್ರಮ
ಆರ್ಟ್ ಆಫ್ ಲಿವಿಂಗ್:
ವೇದ ವಿದ್ಯಾ ಮಹಾ ವಿದ್ಯಾಪೀಠ, ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ರಸ್ತೆ, ಉದಯಪುರ. ನವರಾತ್ರಿ ಮಹೋತ್ಸವ. ರುದ್ರಾಭಿಷೇಕ. ಸಂಜೆ 7.

ಚಕ್ರೇಶ್ವರಿ ಮಹಿಳಾ ಸಮಾಜ: ಆದಿನಾಥ ದಿಗಂಬರ ಜಿನ ಮಂದಿರ, ಆನೆಬಂಡೆ ರಸ್ತೆ, ಜಯನಗರ ಮೂರನೇ ಬಡಾವಣೆ. ಪಾವನಕೀರ್ತಿ ಮುನಿ ಮಹಾರಾಜರ 13ನೇ ದೀಕ್ಷಾ ಜಯಂತಿ ಮಹೋತ್ಸವ ಮತ್ತು ಅಹಿಂಸಾ ರ‌್ಯಾಲಿ. ನಂತರ ಮುನಿಗಳಿಂದ ಪ್ರವಚನ. ಬೆಳಿಗ್ಗೆ 10.30ಕ್ಕೆ.

ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. ದೇವರ ನಾಮಗಳು- ಕೆ.ಗೌರಿ ಅವರಿಂದ. ಸಂಜೆ 6.30.

ನೃಪತುಂಗ ನಗರ ವಿನಾಯಕ ಸೇವಾ ಸಮಿತಿ: ಎನ್‌ಜಿಇಎಫ್ ಬಡಾವಣೆ, ನೃಪತುಂಗ ಬಡಾವಣೆ, ನಾಗರಬಾವಿ. ಗೋಡಂಬಿ ದ್ರಾಕ್ಷಿ ಅಲಂಕಾರ. ಬೆಳಿಗ್ಗೆ 7.ಏಕಾಂಬರೀಶ್ವರ ಧರ್ಮರಾಜ ದೇವಸ್ಥಾನ: ನಂ143, ಧರ್ಮರಾಜ ದೇವಸ್ಥಾನ ಬೀದಿ. ಲಕ್ಷ್ಮಿ ವೆಂಕಟೇಶ ಕಲ್ಯಾಣ ಮಹೋತ್ಸವ. ವಿಶೇಷ ಅಲಂಕಾರ. ಬೆಳಿಗ್ಗೆ 7. ಮಹಾಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ ವಾಚನ. ಬೆಳಿಗ್ಗೆ 9.ಮಹೇಶ್ವರಮ್ಮ ದೇವಿ ದೇವಾಲಯ: ಪಂಪಮಹಾಕವಿ ರಸ್ತೆ, ಶಂಕರಪುರ. ರಾಜರಾಜೇಶ್ವರಿ ಅಲಂಕಾರ. ಸಂಜೆ 6.30.

ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ದುರ್ಗಾದೇವಿ ಅಲಂಕಾರ. ಬೆಳಿಗ್ಗೆ 7.
ಅಂಬಾಭವಾನಿ ದೇವಾಲಯ ಟ್ರಸ್ಟ್: ಟೆಲಿಕಾಂ ಬಡಾವಣೆ, ಪೈಪ್‌ಲೈನ್ ರಸ್ತೆ, ವಿಜಯನಗರ. ಬೆಣ್ಣೆ ಅಲಂಕಾರ. ಬೆಳಿಗ್ಗೆ 7.

ಕೈಲಾಸನಾಥೇಶ್ವರ ಸ್ವಾಮಿ ದೇವಾಲಯ: ನಂ 40, ಈಶ್ವರನಗರ, 2ನೇ ಹಂತ, ಬನಶಂಕರಿ. ಮೀನಾಕ್ಷಿ  ಅಲಂಕಾರ. ಸಂಜೆ 6.

ಶಂಕರ ಸೇವಾ ಸಮಿತಿ: ಶಾರದಾಂಬ ಸನ್ನಿಧಿ, ಶಾರದಾಂಬಾ ನಗರ, ಜಾಲಹಳ್ಳಿ. ಮಹಾಲಕ್ಷ್ಮಿ ಹೋಮ. ಬೆಳಿಗ್ಗೆ 8.

ಸತ್ಯಗಣಪತಿ ದೇವಸ್ಥಾನ: ಸತ್ಯನಾರಾಯಣ ಬಡಾವಣೆ, 3ನೇ ಹಂತ, 4ನೇ ವಿಭಾಗ, ಬಸವೇಶ್ವರನಗರ. ಕಡುಬು ಅಲಂಕಾರ. ಬೆಳಿಗ್ಗೆ 7.

ಶ್ರೀರಾಮ ದೇವಸ್ಥಾನ:
ಮಾಡಲ್ ಹೌಸ್ ಬ್ಲಾಕ್, ಬಸ ವಗುಡಿ. ಸ್ವರ್ಣ ರಂಜಿತ ರಜತ ಅಲಂಕಾರ. ಬೆಳಿಗ್ಗೆ 7.

ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ದಾಸರ ಪದಗಳ ಗಾಯನ ಕಾರ್ಯಕ್ರಮ- ಸರ್ವೋತ್ತಮ ಮತ್ತು ಮಾನಸ ತಂಡ. ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT