ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು- ಅಕ್ಟೋಬರ್ 21, ಭಾನುವಾರ

Last Updated 20 ಅಕ್ಟೋಬರ್ 2012, 19:15 IST
ಅಕ್ಷರ ಗಾತ್ರ

ಅಕ್ಟೋಬರ್ 21, ಭಾನುವಾರ
ಕರ್ನಾಟಕ ರಾಜ್ಯ ಪೊಲೀಸ್: ನಗರ ಸಶಸ್ತ್ರ ಮೀಸಲು ಪಡೆ, ಕೇಂದ್ರ ಸ್ಥಾನ, ಮೈಸೂರು ರಸ್ತೆ. ಪೊಲೀಸ್ ಸಂಸ್ಮರಣಾ ದಿನಾಚರಣೆ. ಮುಖ್ಯಅತಿಥಿಗಳು - ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಧ್ಯಕ್ಷತೆ -ಉಪಮುಖ್ಯಮಂತ್ರಿ ಆರ್. ಅಶೋಕ್. ಬೆಳಿಗ್ಗೆ 8.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಉಜ್ವಲ ವಿದ್ಯಾಲಯ, ಹೋಪ್ ಫಾರ್ಮ್ ಸರ್ಕಲ್ ಹತ್ತಿರ, ಕಾಡುಗೋಡಿ ವಾರ್ಡ್. ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಉದ್ಘಾಟನೆ - ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮುಖ್ಯಅತಿಥಿಗಳು- ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಅಧ್ಯಕ್ಷತೆ-  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಅರವಿಂದ ಲಿಂಬಾವಳಿ. ಮಧ್ಯಾಹ್ನ12

ಕರ್ನಾಟಕ ದಲಿತ ಸಂಘರ್ಷ ಸಮಿತಿ: ರಾಜ್ಯ ಸರ್ಕಾರಿ ನೌಕರರ ಭವನ, ಕಬ್ಬನ್ ಪಾರ್ಕ್, ಎಂ.ಎಸ್ ಬಿಲ್ಡಿಂಗ್ ಎದುರು. ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿ, ಸಾಧಕ ಬಾಧಕಗಳು ಮುಕ್ತ ಸಂವಾದ. ಚಾಲನೆ - ಪ್ರೊ.ಬಿ.ಕೆ.ಟ್ರಸ್ಟ್ ಮುಖ್ಯಸ್ಥರಾದ ಇಂದಿರಾ ಕೃಷ್ಣಪ್ಪ, ಅಧ್ಯಕ್ಷತೆ - ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ - ಮಾವಳ್ಳಿ ಶಂಕರ್, ಸಂವಿಧಾನಿಕ ತೊಡಕು ಹಾಗೂ ಪರಿಹಾರ ಕುರಿತು ವಿಷಯ ಮಂಡನೆ - ಹೈಕೋರ್ಟ್‌ನ ನ್ಯಾ. ಕಾಂತ ರಾಜ್, ಅಭಿಪ್ರಾಯ ಮಂಡನೆ -ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಸಂವಾದ ಮಾಸಪತ್ರಿಕೆ ಸಂಪಾದಕ ಇಂದೂಧರ ಹೊನ್ನಾಪುರ, ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್, ಶಿಕ್ಷಣತಜ್ಞ ಪ್ರೊ.ಚಂದ್ರಕಾಂತ್, ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಿ ನಾರಾಯಣ ನಾಗಾವರ. ಬೆಳಿಗ್ಗೆ 11.

ವಚನ ಜ್ಯೋತಿ ಬಳಗ: ನಂ. 136, ಗವಿ, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, 2ನೇ ಹಂತ ನಾಗರಬಾವಿ ರಿಂಗ್ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಸಮೀಪ. ಮನೆಯಂಗಳದಲ್ಲಿ ವಚನ ನವರಾತ್ರಿ. ಉದ್ಘಾಟನೆ - ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಪಿನಾಕಪಾಣಿ, ಅಧ್ಯಕ್ಷತೆ- ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಪ್ರೊ.ಟಿ.ಆರ್.ಮಹಾದೇವಯ್ಯ, ಅತಿಥಿಗಳು- ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಲಯ ಸಂಚಾಲಕ ಎಂ.ನಂಜಪ್ಪ, ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗುಂಡಿಗೆರೆ ವಿಶ್ವನಾಥ್, ಗೀತಗಾಯನ - ರಂಗಭೂಮಿ ಕಲಾವಿದ ಅರಘಟ್ಟ ಬಸವರಾಜು, ಕರ್ನಾಟಕ ಸಂಗೀತ ವಿದುಷಿ ವೀಣಾಮೂರ್ತಿ, ಸುಗಮ ಸಂಗೀತ ಗಾಯಕಿ ಭವಾನಿ, ಜನಪದ ಗಾಯಕಿ ಪ್ರೇಮ ಶಾಂತವೀರಯ್ಯ, ಭಕ್ತಿ ಸಂಗೀತ ಗಾಯಕಿ ರತ್ನ ವೆಂಕಟೇಶ್, ಹಿಂದೂಸ್ತಾನಿ ಗಾಯಕಿ ಮೀನಾಕ್ಷಿ ಮೇಟಿ, ಹವ್ಯಾಸಿ ಗಾಯಕಿಯರಾದ ಅಂಬಿಕಾ ಶಾಂತಬಸವಯ್ಯ, ಲೀಲಾ ಬಸವರಾಜು. ಸಂಜೆ 5.30. 

ಸಾಹಿತ್ಯ ಅಕಾಡೆಮಿ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ.  `ನನ್ನ ಜಗತ್ತು ನನ್ನ ಬರಹ~ ಕಾರ್ಯಕ್ರಮ. ಅಧ್ಯಕ್ಷತೆ- ವೀರಾಜಿ. ಭಾಗವಹಿಸುವವರು- ಮಂಜುನಾಥ ಲತಾ (ಕನ್ನಡ), ರವಿ ಸುಬ್ರಮಣ್ಯನ್ (ತಮಿಳು), ಕೆ. ಮುರಳಿಕೃಷ್ಣ (ತೆಲಗು), ಪ್ರಶಾಂತ್ ಕುಮಾರ್ ದಾಸ್ (ಅಸ್ಸಾಮಿ), ಅರಬಿಂದೊ ಉಜ್ಜೀರ್ (ಬೋಡೊ), ಸಂಗ್ಮು ಲೆಪ್ಚ (ನೇಪಾಳಿ). ಬೆಳಿಗ್ಗೆ 10.30. ಕಥಾಪಠಣ. ಅಧ್ಯಕ್ಷತೆ- ಜಯಂತ್ ಕಾಯ್ಕಿಣಿ. ಕಥೆಗಾರರು- ಪ್ರಹ್ಲಾದ್ ಅಗಸನಕಟ್ಟೆ (ಕನ್ನಡ), ಟಿ.ಎನ್. ಪ್ರಕಾಶ್ (ಮಲಯಾಳಂ), ಎಂ. ಗೋಪಾಲ ಕೃಷ್ಣನ್ (ತಮಿಳು), ನೀಸಪತಿ (ತೆಲುಗು), ಬಿಮಲ್ ಕುಮಾರ್ ಹಜ್ಹಾರಿಕ (ಅಸ್ಸಾಮಿ), ನಬೀನ್ ಮಲ್ಲಾ ಬೊರೊ (ಬೋಡೊ), ಕ್ಷೇತ್ರಿ ಬೀರ್ (ಮಣಿಪುರಿ), ನೀರಜ್ ತಾಪ (ನೇಪಾಳಿ). ಮಧ್ಯಾಹ್ನ 2.30.

ಸೃಷ್ಟಿ ಪಬ್ಲಿಕೇಷನ್ಸ್: ಸಂತೃಪ್ತಿ ಕಲಾವೇದಿಕೆ, 230, 14ನೇ ಅಡ್ಡರಸ್ತೆ, ಎಂ.ಸಿ. ಬಡಾವಣೆ, (ಸಿಂಡಿಕೇಟ್ ಬ್ಯಾಂಕ್ ಹತ್ತಿರ) ಆತ್ಮಕೂರ ವಾಮನಾಚಾರ್ಯರ `ತರಂಗಿಣಿ ತೀರದಲ್ಲಿ~ ಪುಸ್ತಕ ಬಿಡುಗಡೆ- `ಮಯೂರ~ ಮಾಸಪತ್ರಿಕೆ ಸಹಾಯಕ ಸಂಪಾದಕರಾದ ಡಾ. ಆರ್. ಪೂರ್ಣಿಮಾ. ಅಧ್ಯಕ್ಷತೆ-ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿಗಳು- ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಸಹಾಯಕ ಮಹಾಪ್ರಬಂಧಕ ಪಾಂಡುರಂಗ ವೈದ್ಯ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಉಪ ಮಹಾಪ್ರಬಂಧಕ ಎಂ. ದಿಲೀಪ್ ಕುಲಕರ್ಣಿ. ಸಂಜೆ 6.

ಕಾವ್ಯಕಲಾ ಪ್ರಕಾಶನ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ. ಎನ್. ಶಂಕರಪ್ಪ ತೋರಣಗಲ್ಲು ಅವರ `ಭಗವದ್ಗೀತೆ ಬೆಳಕು ನೀಡುವುದೇ?, `ವಾಸ್ತು ಎಂಬ ವ್ಯಾ~ ಪುಸ್ತಕ ಬಿಡುಗಡೆ- ಚಿಂತಕ ಡಾ.ಜಿ. ರಾಮಕೃಷ್ಣ, ಲೇಖಕಿ ಬಿ.ಟಿ. ಲಲಿತಾ ನಾಯಕ್. ಅಧ್ಯಕ್ಷತೆ- ವೀರಭದ್ರ ಚನ್ನಮಲ್ಲ ಸ್ವಾಮೀಜಿ. ಅತಿಥಿಗಳು- ವಾಸ್ತುಶಿಲ್ಪಿ `ಇಂಡಸ್~ ಕೆ. ಜಯರಾಂ, ಕವಿ ಎಲ್.ಎನ್. ಮುಕುಂದರಾಜ್. ಬೆಳಿಗ್ಗೆ 10.

ಸುಂದರ ಪ್ರಕಾಶನ: ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೇವಸ್ಥಾನ ಗುಡ್ಡ, ಹನುಮಂತನಗರ. ಡಾ. ದೊಡ್ಡರಂಗೇಗೌಡ ಅವರ `ಸುವರ್ಣ ಸಂಚಯ~, ಪ್ರೊ.ಕೆ. ಇ. ರಾಧಾಕೃಷ್ಣ ಅವರ `ಭಾಗೀರಥಿ ಸಮುದ್ರ~, ಎಂ.ಎಸ್. ಭಾಸ್ಕರ್ ಅವರ `ನನ್ನ ಸುತ್ತಮುತ್ತ~, ಡಾ. ಕಮಲಾ ಹೆಮ್ಮಿಗೆ ಅವರ `ತ್ರಿಭಂಗಿ~, ಎಸ್.ವಿ. ಶ್ರೀನಿವಾಸರಾವ್ ಅವರ `ಭಾರತದ ಮಹಾನ್ ನಾಯಕರು~, ಸಿ.ವಿ. ಶಿವಶಂಕರ್ ಅವರ `ಮಹಾನ್ ನಟ ಟಿ.ಎನ್. ಬಾಲಕೃಷ್ಣ~ ಪುಸ್ತಕಗಳ ಬಿಡುಗಡೆ - ಸಾಹಿತಿ ಪ್ರೊ.ಸಾ.ಶಿ. ಮರುಳಯ್ಯ, ಕವಿ ಪ್ರೊ. ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಮಹಮದ್ ಭಾಷಾಗೂಳ್ಯಂ, ಪ್ರೊ. ಸುಮತೀಂದ್ರ ನಾಡಿಗ, ಎಚ್. ಎಸ್. ದೊರೆಸ್ವಾಮಿ, ಟಿ. ಜಿ. ಅಶ್ವತ್ಥನಾರಾಯಣ. ಬೆಳಿಗ್ಗೆ 9.30.

ಕರ್ನಾಟಕ ಸಹೃದಯ ಲೇಖಕಿಯರ ಪರಿಷತ್ತು ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. `ಕಾವೇರಿ ಜ್ವಲಂತ ಸಮಸ್ಯೆ~ ವಿಚಾರ ಗೋಷ್ಠಿ. ಪ್ರೊ. ಬಿ. ನಾರಾಯಣಮ್ಮ ಅವರ `ಹರಪ್ಪ ನಾಗರಿಕತೆ~ ಮತ್ತು `ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿಯರು~ ಪುಸ್ತಕಗಳ ಲೋಕಾರ್ಪಣೆ- ಹಾಸ್ಯ ಕಲಾವಿದ ಸರಿಗಮ ವಿಜಿ, ಉದ್ಘಾಟನೆ- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಪಿ. ವಿಜಯಕುಮಾರ್, ಅಧ್ಯಕ್ಷತೆ- ಪ್ರೊ.ಬಿ. ನಾರಾಯಣಮ್ಮ. ಅತಿಥಿಗಳು- ಎಂ. ನರಸಿಂಹಲು, ಬಿ.ಎನ್. ತ್ಯಾಗರಾಜ, ಪ್ರೊ. ಶ್ರೀನಿವಾಸ್. ಬೆಳಿಗ್ಗೆ 10.

ಕನ್ನಡ ಸಾಹಿತ್ಯ ಪರಿಷತ್ತು (ಬೊಮ್ಮನಹಳ್ಳಿ): ಎಸ್. ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ಮುಖ್ಯರಸ್ತೆ. ಉದ್ಘಾಟನೆ- ಶಾಸಕ ಎಂ. ಸತೀಶ್ ರೆಡ್ಡಿ, ಅಧ್ಯಕ್ಷತೆ-ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಶ್, ಕೈಪಿಡಿ ಬಿಡುಗಡೆ -ಪ್ರೊ. ಎಸ್.ಜಿ. ಸಿದ್ದರಾಮಯ್ಯ. ಬೆಳಿಗ್ಗೆ 10.10.


ರಾಜ್‌ಘರ್ ಭವನ, ಐಡಿಯಲ್ ಹೋಮ್ಸ, ರಾಜರಾಜೇಶ್ವರಿ ನಗರ, (ಮೋನಿಷ್ ಕಾರ್ನರ್‌ಬಳಿ). ಶಿಕ್ಷಣತಜ್ಞ, ಅಂಕಣಕಾರ ಡಾ. ಗುರುರಾಜ ಕರ್ಜಗಿ ಅವರಿಂದ ಯೋಗ-ಋಷಿ ಚಿಂತನಧಾರೆ `ಬಾಳಿಗೊಂದು ನಂಬಿಕೆ~ ಕುರಿತು ಉಪನ್ಯಾಸ. ಸಂಜೆ 5.30.

ಸುಚಿತ್ರಾ ಸಿನಿಮಾ ಹಾಗೂ ಸಾಂಸ್ಕೃತಿಕ ಮಂಡಳಿ: ನಂ.36, 9ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ. ಪ್ರಾಕ್ಟಿಕಲ್ ವೀಕೆಂಡ್ ಫೀಲ್ಮ್ ಮೇಕಿಂಗ್ ಕೋರ್ಸ್. `ವಾಲ್-ಮಾರ್ಟ್: ದಿ ಹೈ ಕಾಸ್ಟ್ ಆಫ್ ಲೋ ಪ್ರೈಸ್~ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನ, ಸಂವಾದ. ಬೆಳಿಗ್ಗೆ 11.

ರಂಗಭೂಮಿ
ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್: ಸಂಕುಲ 3ಜಿ ಥಿಯೇಟರ್, ನಂ.1515, 19ನೇ ಅಡ್ಡರಸ್ತೆ, 1ನೇ ಸ್ಟೇಜ್, ದಯಾನಂದ ಸಾಗರ ಕಾಲೇಜಿನ ಹತ್ತಿರ, ಕುಮಾರಸ್ವಾಮಿ ಬಡಾವಣೆ. ಕನ್ನಡ ಹಾಸ್ಯ ನಾಟಕ `ಅಚಾನಕ್~ ಪ್ರದರ್ಶನ. ರಚನೆ, ವಿನ್ಯಾಸ ಹಾಗೂ ನಿರ್ದೇಶನ- ಅಶೋಕ್ ನಿಟ್ಟೂರು. ಪ್ರತಿದಿನ ಸಂಜೆ 7.15.

ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ: ಜೈ ಭೀಮ್ ಭವನ್, ಕೆನರಾ ಬ್ಯಾಂಕ್ ಎಸ್.ಸಿ/ಎಸ್. ಟಿ ವೆಲ್ಫೇರ್ ಅಸೋಸಿಯೇಷನ್ ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ಸರ್ಕಲ್ ಹತ್ತಿರ, ಪೂರ್ಣಿಮಾ ಟಾಕೀಸ್ ರಸ್ತೆ. ಬೆಳಿಗ್ಗೆ 10.30ಕ್ಕೆ ರಂಗಕರ್ಮಿ ಎಚ್.ಎಸ್. ಉಮೇಶ್ ಅವರಿಂದ `ಮಕ್ಕಳ ರಂಗಭೂಮಿ~, ಮಧ್ಯಾಹ್ನ 12ಕ್ಕೆ ರಂಗ ವಿಮರ್ಶಕ ನಾರಾಯಣ ರಾಯಚೂರು ಅವರಿಂದ `ರಂಗವಿಮರ್ಶೆ~, ಮಧ್ಯಾಹ್ನ 2ಕ್ಕೆ ನಿರ್ದೇಶಕ ಬಿ. ಸುರೇಶ್ ಅವರಿಂದ `ಯುವಜನ ಮತ್ತು ರಂಗಭೂಮಿ~, 3.30ಕ್ಕೆ ಸಮುದಾಯದ ಕೆ.ಜಿ.ಎಫ್ ರಂಗನಿರ್ದೇಶಕ ಅಚ್ಯುತ ಅವರಿಂದ `ಬೀದಿನಾಟಕ ವರ್ತಮಾನ~, ಸಂಜೆ 4ಕ್ಕೆ ಸಂಚಾರಿ ಥಿಯೇಟರ್‌ನ ರಂಗನಿರ್ದೇಶಕಿ ಎನ್. ಮಂಗಳಾ ಅವರಿಂದ `ಬೀದಿನಾಟಕ ಸೌಂದರ್ಯಶಾಸ್ತ್ರ~ ಕುರಿತು ಗೋಷ್ಠಿ, ಪ್ರಾತ್ಯಕ್ಷಿಕೆ ಹಾಗೂ ಚರ್ಚೆ. ಸಮಾರೋಪ ಸಮಾರಂಭ. ಅಧ್ಯಕ್ಷತೆ- ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಅಧ್ಯಕ್ಷ ಪ್ರೊ.ಆರ್.ಕೆ. ಹುಡಗಿ. ಅತಿಥಿ- ಸಿನಿಮಾ ನಿರ್ದೇಶಕ ಎಂ.ಎಸ್. ಸತ್ಯು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುೀರ್. ಸಂಜೆ 5.30

ರಂಗಶಂಕರ: ಜೆಪಿ ನಗರ, 2ನೇ ಹಂತ. ಮುಂಬೈ ಎನ್ ಸಿಪಿಎ ಪ್ರೊಡಕ್ಷನ್‌ನಿಂದ ಪಾಪ (ಹಿಂದಿ) ನಾಟಕ ಪ್ರದರ್ಶನ. ರಚನೆ-ಪವನ್ ಉತ್ತಮ್, ನಿರ್ದೇಶನ- ಇಮ್ರಾನ್ ರಶೀದ್. ಮಧ್ಯಾಹ್ನ 3.30 ಹಾಗೂ ಸಂಜೆ 7.30.
 

ಶರವನ್ನವರಾತ್ರಿ ವಿಶೇಷ
ಗಂಗಮ್ಮ ದೇವಿ ದೇವಸ್ಥಾನ: 35ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 4ನೇ `ಟಿ~ ಬ್ಲಾಕ್, ಜಯನಗರ. ತರಕಾರಿ ಅಲಂಕಾರ, ರಾಹುಲ್ ರವೀಂದ್ರ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸಂಜೆ 6.30.
ಪದ್ಮಾವತಿ ಕಲಾನಿಕೇತನ: 2ನೇ ಅಡ್ಡರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಿಂಭಾಗ. ಮತ್ತೀಕೆರೆ ಲೇಔಟ್. ಪದ್ಮಪ್ರಿಯಾ ಪ್ರವೀಣ್ ಹಾಗೂ ತಂಡದವರಿಂದ ಕೂಚಿಪುಡಿ ನೃತ್ಯ. ಸಂಜೆ 6.30.

ಸುಂದರ ಆಂಜನೇಯ ಸ್ವಾಮಿ ದೇವಸ್ಥಾನ: ಎನ್. ಆರ್.ಐ ಲೇಔಟ್, ಕಲ್ಕೆರೆ ಹಳ್ಳಿ, ರಾಮಮೂರ್ತಿ ನಗರ. ರಾಮಕೃಷ್ಣ ಭಜನ ಸಭಾ ಟ್ರಸ್ಟ್‌ನಿಂದ `ವೇಷಭಜನೆ~. ಸಂಜೆ 5.30.


ರಾಮೇಶ್ವರಸ್ವಾಮಿ ದೇವಸ್ಥಾನ : ನಂ. 34, ಕೆ.ಇ.ಬಿ. ರಸ್ತೆ, ಇಟ್ಟಮಡು, ಬನಶಂಕರಿ 3ನೇ ಹಂತ. ತೃಣಜ್ಯೋತಿ ಅಲಂಕಾರ, ಬಳಿಕ ಸ್ವಾಮಿ ವಿವೇಕಾನಂದ ಯೋಗ ಸಂಧಾನ ಸಂಸ್ಥಾನದವರಿಂದ ಭಜನೆ. ಸಂಜೆ 7.30.

ನಿಮಿಷಾಂಬಾದೇವಿ ದೇವಸ್ಥಾನ: ನಂ. 526, (ಅಕ್ಕಿಪೇಟೆ ಹತ್ತಿರ), ಓ.ಟಿ.ಸಿ. ರಸ್ತೆ.  ಸರಸ್ವತಿ ಅಲಂಕಾರ. ಬೆಳಿಗ್ಗೆ 8ಕ್ಕೆ ಅಭಿಷೇಕ, ಸಹಸ್ರನಾಮಾರ್ಚನೆ, ಬೆಣ್ಣೆ ಅಲಂಕಾರ. ಬೆಳಿಗ್ಗೆ 10ಕ್ಕೆ ಮಹಾಮಂಗಳಾರತಿ, ಸಂಜೆ 6.30ಕ್ಕೆ ಪ್ರದೋಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ಪ್ರಾಕಾರೋತ್ಸವ, ರಾತ್ರಿ 8.30ಕ್ಕೆ ಮಹಾಮಂಗಳಾರತಿ.

ನಾದಬ್ರಹ್ಮ ಕಲಾ ಕೇಂದ್ರ: ನಾದಬ್ರಹ್ಮ ಪ್ರಾರ್ಥನಾ ಮಂದಿರ, ಆನಂದ ನಿಲಯ, ನಂ. 27, 28 (ಮೂರನೇ ಮಹಡಿ) ವೇಣುಗೋಪಾಲರೆಡ್ಡಿ ಬಡಾವಣೆ, ಅರಕೆರೆ, ಬನ್ನೇರುಘಟ್ಟ ರಸ್ತೆ. ವಸಂತಲಕ್ಷ್ಮೀ ಶ್ರೀಧರ್ ಅವರಿಂದ ಭಕ್ತಿ ಸಂಗೀತ. ಬೆಳಿಗ್ಗೆ 10.30.ಎನ್.ಆರ್. ಸರಸ್ವತಿ ಸುಭಾಷ್. ಸಂಜೆ 4.

ರಾಮಮಂದಿರ ಅಸೋಸಿಯೇಷನ್: ರಾಮ ದೇವರ ದೇವಸ್ಥಾನ, ಮಾಡಲ್ ಹೌಸ್ ಬ್ಲಾಕ್, ಬಸವನಗುಡಿ. ದ್ರಾಕ್ಷಿಗೋಡಂಬಿ ಅಲಂಕಾರ, ಸಂಜೆ 6ರಿಂದ ಅದಿತಿ ಮತ್ತು ತಂಡದಿಂದ ಭಕ್ತಿ ಸಂಗೀತ.
ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್: ವೈಷ್ಣವಿ ಅಲಂಕಾರ. ಬಳಿಕ ಶ್ರೀಸೂಕ್ತ, ಪುರುಷ ಸೂಕ್ತ, ಸುದರ್ಶನ, ಗಾಯತ್ರಿ ಹೋಮ. ಸಂಜೆ7.

ಜೆ.ಪಿ.ನಗರ ವಿನಾಯಕ ಸೇವಾಮಂಡಳಿ : 30ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಐಟಿಐ ಬಡಾವಣೆ, ಜೆ.ಪಿ.ನಗರ ಮೊದಲನೇ ಹಂತ. ಧನ್ವಂತರಿ ಹೋಮ. ಬೆಳಿಗ್ಗೆ7.

ಚಾಮುಂಡೇಶ್ವರಿ ದೇವಾಲಯ: ಲಿಂಗರಾಜಪುರಂ, 7ನೇ ಅಡ್ಡರಸ್ತೆ, ಸರೋಜಮ್ಮ ಬಡಾವಣೆ. ತರಕಾರಿ ಅಲಂಕಾರ. ಸಂಜೆ 6.30.

ಆಂಜನೇಯ ವೆಲ್‌ಫೇರ್ ಅಸೋಸಿಯೇಷನ್: ಚಿನ್ನಯ್ಯನಪಾಳ್ಯ. ವಿದ್ಯಾಹೋಮ, ಅಭಿಷೇಕ ಪೂಜೆ, ಅಭಯ ಆಂಜನೇಯ ಅಲಂಕಾರ. ಬೆಳಿಗ್ಗೆ 7.

ಮಾಂಕಾಳಿ ಅಮ್ಮನವರ ದೇವಾಲಯ : 11ನೇ ಬೀದಿ, ಎಂ.ವಿ. ಗಾರ್ಡನ್, ಹಲಸೂರು. ಸಮಯಬುರ ಮಾರಿಯಮ್ಮನ್ ಅಲಂಕಾರ. ಸಂಜೆ 7.

ಶಂಕರ ಸೇವಾ ಸಮಿತಿ: ಶಾರದಾಂಬ ನಗರ, ಜಾಲಹಳ್ಳಿ. ವೈಷ್ಣವಿ ಅಲಂಕಾರ. ಇಂದ್ರಾಣಿ/ಗಜವಾಹಿನಿ ಅಲಂಕಾರ. ಸಂಜೆ 6.30ಕ್ಕೆ ಸುಸ್ವರೆ ಬಳಗದವರಿಂದ ಭಕ್ತಿಗೀತೆ.

ರಾಜರಾಜೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್ : 16ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಬಿಟಿಎಂ ಬಡಾವಣೆ 2ನೇ ಹಂತ. ಗಜಲಕ್ಷ್ಮಿ ಅಲಂಕಾರ. ಬೆಳಿಗ್ಗೆ 9.30.

ಮಹಾಗಣಪತಿ ದೇವಸ್ಥಾನ: 9ನೇ ಕ್ರಾಸ್, ಈಸ್ಟ್‌ಪಾರ್ಕ್ ರಸ್ತೆ, ಮಲ್ಲೇಶ್ವರ. ನವರಾತ್ರಿ ಗೊಂಬೆಗಳ ಅಲಂಕಾರ. ಸಂಜೆ 6.30.

ಸಾಂಸ್ಕೃತಿಕ ಕಾರ್ಯಕ್ರಮಗಳು

ಶಾಂತಲಾ ಆರ್ಟ್ಸ್ ಟ್ರಸ್ಟ್: ಪುಲಕೇಶಿ ರಸ್ತೆ, 1ನೇ ಮುಖ್ಯರಸ್ತೆ, ಪೆಟ್ರೋಲ್ ಬಂಕ್ ಹಿಂಭಾಗ, ಯಶವಂತಪುರ. ದಸರಾ ಗೊಂಬೆಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಮೇಳದ ಅಂಗವಾಗಿ ಶಾಂತಲಾ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ. ಸಂಜೆ 6.30.

ವರಸಿದ್ಧಿ ವಿನಾಯಕ ದೇವಾಲಯ:  ಕೆನರಾ ಬ್ಯಾಂಕ್ ಕಾಲೋನಿ, ನಾಗರಬಾವಿ ರಸ್ತೆ. ದೇವಿಗೆ ತರಕಾರಿ ಅಲಂಕಾರ. ಬೆಣ್ಣೆ ಅಲಂಕಾರ. ಅಮೃತೇಶ್ ಕುಲಕರ್ಣಿ ಮತ್ತು ತಂಡದವರಿಂದ ತಬಲಾ ತರಂಗ್ ಮತ್ತು ಭಕ್ತಿ ಸಂಗೀತ. ಸಂಜೆ 7.

ಮಹಾಯಾಗ ಕ್ಷೇತ್ರ ಗಾಯತ್ರಿ ದೇವಸ್ಥಾನ: ಯಶವಂತಪುರ ವೃತ್ತದ ಹತ್ತಿರ. ಆರಾಧನಾ ಸ್ಕೂಲ್ ಆಫ್ ಡಾನ್ಸ್ ಕಲಾವಿದರಿಂದ ಭರತನಾಟ್ಯ. ಸಂಜೆ 6.30.

ಬ್ರಾಹ್ಮಣಸಭಾ : ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ಶ್ರೀಯಾ ಪಂಡಿತ್ ಹಾಗೂ ಸ್ಫೂರ್ತಿ ಅವರಿಂದ ನೃತ್ಯ ಕಾರ್ಯಕ್ರಮ.

ವಾಣಿ ವಿದ್ಯಾಕೇಂದ್ರ : ವಾಣಿ ವಿದ್ಯಾಕೇಂದ್ರ ಸಭಾಂಗಣ, 2ನೇ ಹಂತ, ರಾಜಾಜಿನಗರ. ಸಿ. ರಾಮ್‌ದಾಸ್ ಹಾರ್ಮೋನಿಯಂ ವಾದನ. ಚಂದ್ರಶೇಖರ್ ಸಿ.ಎನ್. (ಪಿಟೀಲು), ಚೆಲುವರಾಜು (ಮೃದಂಗ), ಗುರುಮೂರ್ತಿ ಎನ್. (ಘಟಂ). ಸಂಜೆ 6.30.


ಕಂಚಿ ಕಾಮಕೋಟಿ ಪೀಠ: ಕಂಚಿ ಶಂಕರ ಮಠ, ಕಂಚಿ ಮಹಾಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಎ. ಚಂದನ್ ಕುಮಾರ್ ಅವರಿಂದ ಕೊಳಲು ವಾದನ. ಸಂಜೆ 6.30.

ವರದಾಂಜನೇಯ ಸ್ವಾಮಿ ದೇವಸ್ಥಾನ : 7ನೇ ಮುಖ್ಯರಸ್ತೆ, ಆರ್.ಬಿ. ಬಡಾವಣೆ, ಜೆ.ಪಿ.ನಗರ 7ನೇ ಹಂತ. ನವಧಾನ್ಯ ಅಲಂಕಾರ. ಬೆಳಿಗ್ಗೆ 9.

ಶಾರದಾಂಬಾ, ಚಂದ್ರಮೌಳೀಶ್ವರ ಮತ್ತು ಶಂಕರಾಚಾರ್ಯ ಸೇವಾ ಸಮಿತಿ: ಕೆಂಗೇರಿ ಉಪನಗರ, 7ನೇ ಮುಖ್ಯರಸ್ತೆ. ಒಣಹಣ್ಣುಗಳ ಅಲಂಕಾರ. ಜೀವಿತಾ ಪ್ರಭಾಕರ್ ಅವರಿಂದ ಭರತನಾಟ್ಯ. ಸಂಜೆ 6.

ಗರುಡ ನಾಟ್ಯ ಸಂಘ : ಅಂಬಾ ಭವಾನಿ ದೇವಸ್ಥಾನ, 58ನೇ ಅಡ್ಡರಸ್ತೆ, 64ನೇ ಅಡ್ಡರಸ್ತೆ, ಮುನೇಶ್ವರ ಬ್ಲಾಕ್, ಕುಮಾರಸ್ವಾಮಿ ಬಡಾವಣೆ, 1ನೇ ಹಂತ. `ಅಂಬಾ ಭವಾನಿ ವೈಭವ~ ಅತಿಥಿಗಳು-ಸಂಗೀತ ನಿರ್ದೇಶಕ ಕೆ. ಕಲ್ಯಾಣ, ಕಿರುತೆರೆ ಕಲಾವಿದೆ ಸಪ್ನಾ ರಾಜ್. ಸಂಜೆ 7.

ಧಾರ್ಮಿಕ ಕಾರ್ಯಕ್ರಮಗಳು

ಚಕ್ರೇಶ್ವರಿ ಮಹಿಳಾ  ಸಮಾಜ: ಆದಿನಾಥ ಜಿನ ಮಂದಿರ, ಆನೆಬಂಡೆ ರಸ್ತೆ, ಜಯನಗರ. ಮಂದಿರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಮುನಿಶ್ರೀ ಪುಣ್ಯ ಸಾಗರ ಮಹಾರಾಜರ ಕೇಶಲೋಚನ ಕಾರ್ಯಕ್ರಮ. ನಂತರ ಅವರಿಂದ ಪ್ರವಚನ. ಮಧ್ಯಾಹ್ನ 2 ಗಂಟೆಗೆ.


ಸತ್ಯಸಾಯಿ ಸೇವಾ ಸಂಸ್ಥೆಗಳು: ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್.  ಟಿ.ಕೆ.ಕೆ.ಭಾಗವತ್ ಅವರಿಂದ ಭಜನೆ. ಸಂಜೆ 4.


ದಿ ಬೆಂಗಾಲಿ ಅಸೋಸಿಯೇಷನ್: ಆರ್.ಬಿ.ಎ.ಎನ್. ಎಂ.ಎಸ್ ಮೈದಾನ, ಹಲಸೂರು, ಕಮರ್ಷಿಯಲ್ ಸ್ಟ್ರೀಟ್ ಹತ್ತಿರ, ಅಜಂತಾ ಥಿಯೇಟರ್ ಎದುರು. ದುರ್ಗಾ ಪೂಜೆ.

ನಿರ್ಮಾಣ ದೇವಾಲಯಗಳ ವಿಶ್ವಸ್ಥ ಮಂಡಳಿ : ನಂ.336, ಪ್ರಸನ್ನವರದ ವೆಂಕಟೇಶ್ವರ ದೇವಾಲಯ, ನಿಸರ್ಗ ಬಡಾವಣೆ. ಶ್ರೀಕರ ಪೂಜೆ. ಬೆಳಿಗ್ಗೆ 11.


ಆದಿಪರಾಶಕ್ತಿ ಅಂಬಾಭವಾನಿ ದೇವಾಲಯ: ನಂ.5, ಭವಾನಿನಗರ, ಗವೀಪುರಂ, ಕೆಂಪೇಗೌಡನಗರ, ಬಸವನಗುಡಿ.  ಶ್ರೀಸೂಕ್ತ ಹೋಮ. ಕೊಲ್ಲೂರು ಮೂಕಾಂಬಿಕೆ ಅಲಂಕಾರ. ಬೆಳಿಗ್ಗೆ 9.

ದುರ್ಗಾಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ಮೂಲದುರ್ಗಾ ಅಲಂಕಾರ. ನಂತರ ಭಜನೆ. ಸಂಜೆ 6.30.


ಮಹಾಲಕ್ಷ್ಮೀಪುರ ಶ್ರೀ ವಾಸವೀ ಸೇವಾ ಸಮಿತಿ ಟ್ರಸ್ಟ್: 9ನೇ ಅಡ್ಡರಸ್ತೆ, ಮಹಾಲಕ್ಷ್ಮಿಪುರ. ವಜ್ರಾಂಗಿ ಅಲಂಕಾರ ಹಾಗೂ ರಾಗಲಹರಿ ತಂಡದವರಿಂದ ಭಕ್ತಿಗೀತೆ ಹಾಗೂ ಅನ್ನಮಯ್ಯ ಸಂಕೀರ್ತನೆ.


ವೈದಿಕ ಧರ್ಮ ಸಂಸ್ಥಾನ: ವೇದ ವಿಜ್ಞಾನ ಮಹಾ ವಿದ್ಯಾಪೀಠ, ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ಮುಖ್ಯ ರಸ್ತೆ, ಉದಯಪುರ. ರುದ್ರಾಭಿಷೇಕ ಹಾಗೂ ಚಂಡಿ ಹೋಮ. ಬೆಳಿಗ್ಗೆ 7


ಗಾಯತ್ರಿ ಪರಿಷತ್ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನ ವಿಶ್ವಸ್ಥ ಮಂಡಳಿ: ಎಇಸಿಎಸ್ ಬಡಾವಣೆ, 1,2,3ನೇ ಹಂತ, ನಾಗಶೆಟ್ಟಿಹಳ್ಳಿ. ನವಗ್ರಹ ಹೋಮ, ಸಹಸ್ರಮೋದಕ ಗಣಹೋಮ. ಬೆಳಿಗ್ಗೆ 9.


ವಿದ್ಯಾರಣ್ಯಪುರ ಸಾಂಸ್ಕೃತಿಕ ಕೇಂದ್ರ: ವಿದ್ಯಾಗಣಪತಿ ದೇವಸ್ಥಾನದ ಸಂಕೀರ್ಣ, 9ನೇ ಅಡ್ಡರಸ್ತೆ, 4ನೇ ಬ್ಲಾಕ್, ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ. ಹರಿದಾಸ ಸಾಹಿತ್ಯ ಸಭಾದ ಸಿರಿಕೃಷ್ಣ ವಿಠಲದಾಸ `ಶ್ರೀನಿವಾಸ ಪದ್ಮಾವತಿ ಕಲ್ಯಾಣ~ ಕುರಿತು ಪ್ರವಚನ, ಸಂಜೆ 6.30.

ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ: ಯಡಿಯೂರು, ಜಯನಗರ 7ನೇ ಬಡಾವಣೆ. ನವಧಾನ್ಯ ಅಲಂಕಾರ.ರಾತ್ರಿ 9ಕ್ಕೆ ಮಹಾಮಂಗಳಾರತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT