ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಅಕ್ಟೋಬರ್ 24, ಸೋಮವಾರ

Last Updated 23 ಅಕ್ಟೋಬರ್ 2011, 19:00 IST
ಅಕ್ಷರ ಗಾತ್ರ

ಆಕ್ಟೇವ್: ನಂ 753, 3ನೇ ಬಡಾವಣೆ, 8ನೇ ಮುಖ್ಯರಸ್ತೆ, ಕೋರಮಂಗಲ. ಆಕ್ಟೇವ್ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿಗಳು- ಮಣಿಪಾಲ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಬಾಥಿ ರೆಡ್ಡಿ, ನಾರಾಯಣ ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ. ಬೆಳಿಗ್ಗೆ 11.30.

ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ: ಕೃಷ್ಣಾನಂದ ನಗರ, ಜರಕಬಂಡೆ ಕಾವಲ್, ಯಶವಂತಪುರ ಕೈಗಾರಿಕಾ ಪ್ರದೇಶ, ನಂದಿನಿ ಬಡಾವಣೆ. ಆಸ್ಪತ್ರೆಯ ಉದ್ಘಾಟನೆ. ಸಾನ್ನಿಧ್ಯ- ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಅತಿಥಿಗಳು- ಸಚಿವ ಆರ್.ಅಶೋಕ, ಕಿದ್ವಾಯಿ ಆಸ್ಪತ್ರೆಯ ಗಂಥಿ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಲಕ್ಷ್ಮಯ್ಯ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ, ಶಾಸಕರಾದ ನೆ.ಲ.ನರೇಂದ್ರಬಾಬು, ಮುನಿರಾಜು, ಪಾಲಿಕೆ ಸದಸ್ಯ ನಾಗರಾಜು. ಬೆಳಿಗ್ಗೆ 11.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ ಆವರಣ. ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಣೆ. ಪ್ರತಿಮೆಗೆ ಮಾಲಾರ್ಪಣೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿಗಳು- ಸಚಿವ ಆರ್.ಅಶೋಕ, ಸಂಸದ ಅನಂತಕುಮಾರ್. ಅಧ್ಯಕ್ಷತೆ- ಶಾಸಕ ಡಾ.ಡಿ.ಹೇಮಚಂದ್ರಸಾಗರ್. ಬೆಳಿಗ್ಗೆ 11. ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಬೆಳಿಗ್ಗೆ 11.30.

ರಂಗಾಭರಣ ಕಲಾಕೇಂದ್ರ: ರವೀಂದ್ರ ಕಲಾಕ್ಷೇತ್ರ. ರಂಗಾಭರಣ ಪ್ರತಿಭೋತ್ಸವ ಕಾರ್ಯಕ್ರಮ. ಅತಿಥಿಗಳು- ಸಂಸದ ಡಿ.ಬಿ.ಚಂದ್ರೇಗೌಡ, ಸಿಐಡಿ ಡಿಜಿಪಿ ಶಂಕರ್ ಬಿದರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ. ಸಂಜೆ 4.

ರಂಗ ಸಂಸ್ಥಾನ: ಕುವೆಂಪು ರಂಗಮಂದಿರ, ಸುಮಂಗಲಿ ಸೇವಾಶ್ರಮ, ಚೋಳನಾಯಕನಹಳ್ಳಿ, ಹೆಬ್ಬಾಳ. ಜಾನಪದ ಮಧುರ ಜೇನು ಕಾರ್ಯಕ್ರಮ. ಉದ್ಘಾಟನೆ- ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ. ಅತಿಥಿಗಳು- ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ, ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್. ಅಧ್ಯಕ್ಷತೆ- ಆಶ್ರಮದ ಸಂಸ್ಥಾಪಕ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ. ಬೆಳಿಗ್ಗೆ 10.30.

ಜನತಾದಳ (ಎಸ್): ಜೆಬಾ ಸಭಾಂಗಣ, ಮೋದಿರಸ್ತೆ, ಡಿ.ಜೆ.ಹಳ್ಳಿ. ಪಕ್ಷದ ಅಲ್ಪಸಂಖ್ಯಾತ ವರ್ಗಗಳ ವಿಭಾಗದ ಸಭೆ. ಅತಿಥಿಗಳು- ಜೆಡಿಎಸ್ ನಗರ ಜಿಲ್ಲಾ ಅಧ್ಯಕ್ಷ ಎಂ.ಎಸ್.ನಾರಾಯಣರಾವ್, ಮಾಜಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್, ಆರ್.ಕೃಷ್ಣಪ್ಪ, ಮಾಜಿ ಶಾಸಕ ಜಿ.ಚಂದ್ರಣ್ಣ, ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಆರ್.ರತನ್‌ಸಿಂಗ್. ಬೆಳಿಗ್ಗೆ 11.

ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ನವ ಕರ್ನಾಟಕ ಪ್ರಕಾಶನ: ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಜಕ್ಕೂರು. ಪ್ರೊ.ಸಿ.ಎನ್.ಆರ್.ರಾವ್ ಅವರ `ಮಿತಿಯಿಲ್ಲದ ಏಣಿ~, `ನ್ಯಾನೊ ಪ್ರಪಂಚ~, `ನ್ಯಾನೊವರ್ಲ್ಡ್~ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿಗಳು- ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಪ್ರೊ.ರೊದ್ದಂ ನರಸಿಂಹ, ಲೇಖಕರಾದ ಡಾ.ಎಚ್.ಎಸ್.ನಿರಂಜನಾರಾಧ್ಯ, ಇಂದುಮತಿ ರಾವ್. ಅಧ್ಯಕ್ಷತೆ- ಕೇಂದ್ರದ ಅಧ್ಯಕ್ಷ ಪ್ರೊ.ಎಂ.ಆರ್.ಎಸ್.ರಾವ್. ಬೆಳಿಗ್ಗೆ 11.

ಸಮತಾ ಸೈನಿಕ ದಳ: ಚಾವಡಿ ಸಭಾಂಗಣ, ಕನ್ನಡ ಭವನ. ಡಾ.ಅನಸೂಯಕಾಂಬ್ಳೆ ಅವರ `ಮತ್ಸ್ಯಗಂಧಿಯ ಹಾಡು~ ಕವನ ಸಂಕಲನ ಬಿಡುಗಡೆ ಸಮಾರಂಭ. ಅತಿಥಿಗಳು- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಸಾಹಿತಿ ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಚಿಂತಕಿ ದು.ಸರಸ್ವತಿ. ಅಧ್ಯಕ್ಷತೆ- ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ. ಸಂಜೆ 5. 

ಅಪೊಲೋ ಆಸ್ಪತ್ರೆ: ಬನ್ನೇರುಘಟ್ಟ ರಸ್ತೆ. ವಿಶ್ವ ದೃಷ್ಟಿ ದಿನದ ಅಂಗವಾಗಿ ನೇತ್ರದಾನ ಕುರಿತ ಜಾಗೃತಿ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಳ. ಮಧ್ಯಾಹ್ನ 12.

ಬಸವ ಸಮಿತಿ: ಅರಿವಿನ ಮನೆ, ಬಸವ ಸಮಿತಿ. ಅರಿವಿನ ಮನೆ ಕಾರ್ಯಕ್ರಮ. `ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ~ ಉಪನ್ಯಾಸ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್. ಅತಿಥಿ- ಡಾ.ವಿಮಲಾ ರಾಜಗೋಪಾಲ್. ಅಧ್ಯಕ್ಷತೆ- ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವಾಡಿಗ. ಸಂಜೆ 6.

ಪಿ.ಇ.ಎಸ್. ತಾಂತ್ರಿಕ ವಿದ್ಯಾಲಯ: ಹನುಮಂತನಗರ. `ಭಾರತದ ಸಂವಿಧಾನ~ ಕುರಿತು ಉಪನ್ಯಾಸ. ಬೆಳಿಗ್ಗೆ 11.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ: ಟೆರಿ ವಾಣಿಜ್ಯ ಸಂಕೀರ್ಣ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 2ನೇ ಹಂತ, ದೊಮ್ಮಲೂರು. `ಮೋರ್ಚಿಂಗ್ ತರಂಗ್~ ವಾದ್ಯ ಸಂಗೀತ ಕಾರ್ಯಕ್ರಮ. ಎಲ್.ಭೀಮಾಚಾರ್ ಮತ್ತು ತಂಡದಿಂದ. ಸಂಜೆ 6.30.

 ರಂಗದರ್ಶಿ
ಸಮಾನ ಮನಸ್ಕರು:
ಎ.ಡಿ.ಎ.ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ. `ಕೋಮಲ ಗಾಂಧಾರ~ ನಾಟಕ ಪ್ರದರ್ಶನ- ಹೊಸಬರು ರಂಗ ತಂಡದಿಂದ. ಸಂಜೆ 6.30.

ಧಾರ್ಮಿಕ ಕಾರ್ಯಕ್ರಮ
ದೇವಗಿರಿ ಗುರು ಸೇವಾ ಸಮಿತಿ:
ದೇವಗಿರಿ ರಾಯರ ಮಠ, 24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. `ಭಾಗವತ ಪಂಚಮಸ್ಕಂದ~ ಪ್ರವಚನ- ಬನ್ನಂಜೆ ಗೋವಿಂದಾಚಾರ್ಯ. ಸಂಜೆ 6.30.

ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯ ಶರ್ಮ. ಬೆಳಿಗ್ಗೆ 7.45.

ಇಸ್ಕಾನ್: ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಶಯನ ಆರತಿ. ರಾತ್ರಿ 8.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎ.ಪಿ.ಕೆ.ರಸ್ತೆ, 2ನೇ ಬಡಾವಣೆ, ತ್ಯಾಗರಾಜನಗರ. `ಛಾಂದಗ್ಯೋಪನಿಷತ್ತು~ ಪ್ರವಚನ- ಸುದರ್ಶನ ಶರ್ಮ. ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT