ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು- ಅಕ್ಟೋಬರ್ 8, ಶನಿವಾರ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 8, ಶನಿವಾರ
ಕರ್ನಾಟಕ ಚಲನಚಿತ್ರ ಅಕಾಡೆಮಿ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬಿಬಿಎಂಪಿ ಕಚೇರಿ ಎದುರು. ಬೆಳ್ಳಿಹೆಜ್ಜೆಯಲ್ಲಿ ನಟ ಅನಂತನಾಗ್ ಅವರೊಂದಿಗೆ ಸಂವಾದ. ಸಂಜೆ 4.30.

ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ. ಸಂಸ್ಕೃತಿ ಚಿಂತನ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನಾ ಸಮಾರಂಭ. ಸಾನ್ನಿಧ್ಯ- ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು-ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಸಾಹಿತಿ ಜರಗನಹಳ್ಳಿ ಶಿವಶಂಕರ್. ಅಧ್ಯಕ್ಷತೆ-ವಿ.ವಿ. ಕುಲಪತಿ ಪ್ರೊ.ಎನ್.ಪ್ರಭುದೇವ್. ಬೆಳಿಗ್ಗೆ 11.

ಸುಚಿತ್ರ ಕಲಾಕೇಂದ್ರ: ಕಿ.ರಂ.ನುಡಿಮನೆ, ಸುಚಿತ್ರ ಆವರಣ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. `ಸಾಹಿತ್ಯ ಸಂಜೆ~ ಕಾರ್ಯಕ್ರಮದಲ್ಲಿ ಶಿವರಾಮಕಾರಂತರ ಕುರಿತು ಉಪನ್ಯಾಸ-ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ. ಸಂಜೆ 5.30.

ಸಮತಾ ಸೈನಿಕದಳ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮತ್ತು ಪಂಪ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ಅಭಿನಂದನಾ ಸಮಾರಂಭ. ಸಾನ್ನಿಧ್ಯ- ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ. ಅತಿಥಿಗಳು- ಸಾಹಿತಿಗಳಾದ ದೇವನೂರು ಮಹಾದೇವ, ಬಿ.ಟಿ.ಲಲಿತನಾಯಕ್, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್. ಅಧ್ಯಕ್ಷತೆ- ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್. ಬೆಳಿಗ್ಗೆ 11.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಿ.ವಿ.ಜಿ. ಸಭಾಂಗಣ, ಬಸವನಗುಡಿ ರಸ್ತೆ. ಶಿವಾನಿ ಮರುಳ್ಕರ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಸಂಜೆ 6.

ಸ್ವಭಾನು ಸಂಗೀತ ಶಾಲೆ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. 6ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ವಭಾನು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಗಾಯಕಿ ಬಿ.ಕೆ.ಸುಮಿತ್ರಾ. ಗೀತಗಾಯನ-ಶಶಿಧರ್ ಕೋಟೆ, ಗೀತಾ ಸತ್ಯಮೂರ್ತಿ. ಬೆಳಿಗ್ಗೆ 11.30.

ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು: ಬಸವನಗುಡಿ. ವಾಸ್ತುಶಿಲ್ಪ ಎಂಜಿನಿಯರಿಂಗ್ ಸಂಬಂಧಪಟ್ಟಂತೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಕಾಲೇಜಿನ ಟ್ರಸ್ಟಿ ಡಾ.ದಯಾನಂದ ಪೈ, ಕಾರ್ಯದರ್ಶಿ ಬಿ.ಎಸ್. ರಾಗಿಣಿ ನಾರಾಯಣ. ಬೆಳಿಗ್ಗೆ 6.

ದಿ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ. ಪ್ರಿಯಾಂಕ ನಿಶಿತಾ ಜೋಯಿಸ್ ಅವರಿಂದ ಸಂಗೀತ ಕಾರ್ಯಕ್ರಮ. ಸಂಜೆ 6.15.

ಎಂಇಎಸ್ ಕಲಾವೇದಿ: ಎಂಇಎಸ್ ಕಾಲೇಜು, ಮಲ್ಲೇಶ್ವರ. ಸರ್ಗೂರು ನರಸಿಂಹ ಮೂರ್ತಿ ದತ್ತಿ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮ. ಸಂಜೆ 6.30.

ವೀರಶೈವ ಸಮಾಜ: ನಾದಬ್ರಹ್ಮ ಪ್ರಾರ್ಥನ ಮಂದಿರ, 1ನೇ ಅಡ್ಡರಸ್ತೆ, ವೇಣುಗೋಪಾಲ ರೆಡ್ಡಿ ಬಡಾವಣೆ, ಬನ್ನೇರುಘಟ್ಟ ರಸ್ತೆ. ಶರಣ ಸಂಜೆ ಕಾರ್ಯಕ್ರಮ. ಅತಿಥಿ- ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ್ ಬಾದವಡಗಿ. ವೀರಶೈವ ಧರ್ಮ ಮತ್ತು ಆಚರಣೆ ಕುರಿತು ಉಪನ್ಯಾಸ- ಡಾ.ಹೇಮಾ ಪಿ.ರುದ್ರಪ್ಪ. ಸಂಜೆ 6.

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ: ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ, ಅರಮನೆ ರಸ್ತೆ. `ಕ್ಲೀಷೆ ಮತ್ತು ಸೃಜನಶೀಲತೆ ನಡುವಿನ ಬೆಳವಣಿಗೆ~ ಕುರಿತು ಉಪನ್ಯಾಸ- ಸಮಾಜ ವಿಜ್ಞಾನಿ ಶಿವ ವಿಶ್ವನಾಥ್. ಸಂಜೆ 5.

ಪಿಇಎಸ್ ಕಾಲೇಜು: ಪ್ರೊ.ಎಂ.ಆರ್.ಡಿ ಸಭಾಂಗಣ, ಪಿಎಎಸ್ ಕಾಲೇಜು, ಬನಶಂಕರಿ 3ನೇಹಂತ. `ಶಿಕ್ಷಣ ಮತ್ತು ಮಾನವ ಅಭ್ಯುದಯ~ ಕುರಿತು ಉಪನ್ಯಾಸ- ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ. ಅಧ್ಯಕ್ಷತೆ- ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ. ಬೆಳಿಗ್ಗೆ 10.30.

ಪದವಿ ಪೂರ್ವ ಶಿಕ್ಷಣ ಇಲಾಖೆ: ಸ್ಫೂರ್ತಿಧಾಮ, ಮಾಗಡಿ ಮುಖ್ಯರಸ್ತೆ. `ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಮುನ್ನಡೆ~ ಕುರಿತು ಉಪನ್ಯಾಸ- ವಿಜಯ ರಾಘವನ್. ಬೆಳಿಗ್ಗೆ 9.30.

ಕ್ರೈಸ್ಟ್ ವಿಶ್ವವಿದ್ಯಾಲಯ: ಕೆಂಗೇರಿ. ಪ್ರತಿಭಾ ಪ್ರದರ್ಶನ. ಸಂಜೆ 6.

ರಂಗದರ್ಶಿ
ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಸಿನಿಮ್ಯಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್-ದಿ ಕ್ರೌನ್ ಪ್ರಿನ್ಸ್~ ನಾಟಕ ಪ್ರದರ್ಶನ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಯಲ್ಲಮ್ಮ ದೇವಿ ದೇವಾಲಯ: ಸುಂಕೇನಹಳ್ಳಿ, ಬಸವನಗುಡಿ ಉದ್ಯಾನ ರಸ್ತೆ. ಯಲ್ಲಮ್ಮದೇವಿಯ 7ನೇ ವಾರ್ಷಿಕೋತ್ಸವ. ಕಳಶ ಸ್ಥಾಪನೆ, ಮಹಾಮಂಗಳಾರತಿ. ಸಂಜೆ 7.

ಅಸ್ಸಿಸಿಯಾ ಸಂತ ಫ್ರಾನ್ಸಿಸ್‌ರ ದೇವಾಲಯ: ಕೆಂಗೇರಿ ಉಪನಗರ. ವಾರ್ಷಿಕೋತ್ಸವದ ಪ್ರಯುಕ್ತ ಜಪಸ್ವರ ಬಲಿಪೂಜೆ ಮತ್ತು ಪ್ರಬೋಧನೆ- ಫಾಧರ್ ವಿ.ಜೆ.ಮೆನೇಜೆಸ್, ಕಾಪೂಚಿನ್. ಸಂಜೆ 6.

ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ:  ವಿದ್ಯಾರಣ್ಯಪುರ. ಆತ್ಮಾಲಯ ಶಾಲೆಯ ಪದ್ಮಜಾ ವೆಂಕಟೇಶ್ ಅವರಿಂದ ದೇವಿ ಮಹಾತ್ಮೆ ಆಧಾರಿತ ಭರತನಾಟ್ಯ ಪ್ರದರ್ಶನ. ಸಂಜೆ 6.30.

ಓಂ ಚಾರಿಟಬಲ್ ಟ್ರಸ್ಟ್: ರಾಜೇಶ್ವರಿ ನಿಲಯ, ಪೂರ್ವ ಆಂಜನೇಯ ಬೀದಿ. ಸಾಂಸ್ಕೃತಿಕ ಕಾರ್ಯಕ್ರಮ.       ಬೆಳಿಗ್ಗೆ 11.

ಬಿಎಚ್‌ಇಎಲ್ ಬಸವ ಕಲ್ಯಾಣ ಸಮಿತಿ: ಶಿವರುದ್ರಪ್ಪ ಭೂಮರೆಡ್ಡಿ ಸ್ಮಾರಕ ರಜಮಹೋತ್ಸವ ಭವನ, 8ನೇ ಅಡ್ಡರಸ್ತೆ, ಚಂದ್ರ ಬಡಾವಣೆ, ವಿಜಯನಗರ. `ಅನುಭವ ಮಂಟಪ~ ಕುರಿತು ಉಪನ್ಯಾಸ- ಛಲವಾದಿ ಗುರುಪೀಠದ ಅಧ್ಯಕ್ಷ ಬಸವ ನಾಗಿದೇವ ಶರಣ. ಸಂಜೆ 4.

 ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ: 5ನೇ ಮುಖ್ಯರಸ್ತೆ, ಎಂ.ವಿ.ಉದ್ಯಾನ, ಹಲಸೂರು. ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ. ಬೆಳಿಗ್ಗೆ 8.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT