ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು, ಜೂನ್ 6, ಸೋಮವಾರ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ವಿಧಾನಸೌಧ ಪಶ್ಚಿಮ ದ್ವಾರದ ಮುಂಭಾಗ. ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 29ನೇ ಪುಣ್ಯ ತಿಥಿ ಆಚರಣೆ. ಅತಿಥಿಗಳು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎ.ನಾರಾಯಣಸ್ವಾಮಿ. ಬೆಳಿಗ್ಗೆ 10.

ಕರ್ನಾಟಕ ತೆಲುಗು ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ. ಡಾ.ಎನ್.ಟಿ.ರಾಮರಾವ್ ಅವರ 89 ನೇ ಜನ್ಮ ದಿನೋತ್ಸವ ಮತ್ತು 2011ನೇ ಸಾಲಿನ ಎನ್.ಟಿ.ರಾಮರಾವ್ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಕೇಂದ ಸಚಿವೆ ಡಾ.ಡಿ.ಪುರಂದರೇಶ್ವರಿ, ಭಾರತ ಚಲನಚಿತ್ರ ಒಕ್ಕೂಟ ಉಪಾಧ್ಯಕ್ಷ ಎ.ಆರ್.ರಾಜು, ಚಿತ್ರ ನಿರ್ಮಾಪಕ ಡಾ.ಡಿ.ರಾಮಾನಾಯ್ಡು, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್. ಪ್ರಶಸ್ತಿ ಪುರಷ್ಕೃತರು- ಚಿತ್ರನಟಿ ಡಾ.ಭಾರತಿ ವಿಷ್ಣುವರ್ಧನ್, ನಟ ಶಿವರಾಜ್‌ಕುಮಾರ್. ಅಧ್ಯಕ್ಷತೆ- ಕರ್ನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು. ಸಂಜೆ 5.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ: ಧನ್ವಂತರಿ ಸಭಾಂಗಣ, 4ನೇ ಬಡಾವಣೆ, ಜಯನಗರ. ದಂತ ವೈದ್ಯಕೀಯ ಶಿಕ್ಷಣ (ಬಿಡಿಎಸ್) 2008 ರ ನಿಯಮಾವಳಿಗಳ ಪುನರ‌್ರಚನೆ ಕುರಿತ ಕಮ್ಮಟ ಕಾರ್ಯಾಗಾರ. ಅತಿಥಿಗಳು- ಸಚಿವ ಎಸ್.ಎ.ರಾಮದಾಸ್, ಭಾರತೀಯ ದಂತ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಡಿ. ಮಜುಂದಾರ್. ಅಧ್ಯಕ್ಷತೆ- ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ. ಬೆಳಿಗ್ಗೆ 10.

ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಪ್ರಶಸ್ತಿ ಪುರಷ್ಕೃತರು- `ಪ್ರಜಾವಾಣಿ~ ಪತ್ರಿಕೆ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್. ಅಧ್ಯಕ್ಷತೆ- ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್. ಸಂಜೆ 5.

ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರ ಸಮನ್ವಯ ಸಮಿತಿ: ಪುರಭವನ. ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರ ಸಮನ್ವಯ ಸಮಿತಿ ಉದ್ಘಾಟನೆ- ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಡಿ.ನದಾಫ್. ಅತಿಥಿಗಳು- ಎನ್‌ಸಿಬಿಇ ಉಪಾಧ್ಯಕ್ಷ ಪಿ.ಎ.ಮಂಜುನಾಥ್, ದೇನಾ ಬ್ಯಾಂಕ್ ನಿವೃತ್ತ ನೌಕರರ ದಕ್ಷಿಣ ವಿಭಾಗ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಿ.ಟಿ.ಆರ್.ರೆಡ್ಡಿ, ಯೂಕೊ ಬ್ಯಾಂಕ್ ನಿವೃತ್ತ ನೌಕರರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಕೃಷ್ಣ. ಅಧ್ಯಕ್ಷತೆ- ಸಮಿತಿಯ ಅಧ್ಯಕ್ಷ ಶಾಂತರಾಜು. ಸಂಜೆ 4.

ಭಾರತೀಯ ಸಮಾಜ ಸೇವಾ ಟ್ರಸ್ಟ್: ವಿವೇಕಾನಂದ ಶಿಕ್ಷಣ ಕೇಂದ್ರ, 4ನೇ ಹಂತ, ಜಯನಗರ. ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಅತಿಥಿಗಳು- ಪರಿಸರ ತಜ್ಞ ಅ.ನ.ಯಲ್ಲಪ್ಪ ರೆಡ್ಡಿ, ಶಾಸಕ ಕೃಷ್ಣ ಬೈರೇಗೌಡ, ಬೆಂಗಳೂರು ದೂರದರ್ಶನ ಕೇಂದ್ರ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ, ಶಾಶ್ವತ ಹಿಂದುಳಿದ ಆಯೋಗದ ಮಾಜಿ ಸದಸ್ಯ ಪ್ರೊ.ಎನ್.ವಿ.ನರಸಿಂಹಯ್ಯ. ಅಧ್ಯಕ್ಷತೆ- ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ. ಬೆಳಿಗ್ಗೆ 9.30.

ಬೆಟ್ಟಹಲಸೂರು ಗ್ರಾಮದೇವತಾ ಮುತ್ಯಾಲಮ್ಮದೇವಿ ಪರಿಸರ ಸಂರಕ್ಷಣಾ ಸಮಿತಿ: ಸರ್ಕಾರಿ ಮಾಧ್ಯಮಿಕ ಶಾಲೆ, ಮುತ್ಯಾಲಮ್ಮ ದೇವಸ್ಥಾನದ ಪಕ್ಕ, ಬೆಟ್ಟಹಲಸೂರು. ವಿಶ್ವ ಪರಿಸರ ದಿನಾಚರಣೆ. ಉದ್ಘಾಟನೆ- ಸಂಸದ ಡಿ.ಬಿ.ಚಂದ್ರೇಗೌಡ. ಅತಿಥಿಗಳು- ಶಾಸಕರಾದ ಕೃಷ್ಣ ಬೈರೇಗೌಡ, ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ. ಅಧ್ಯಕ್ಷತೆ- ವೇದಿಕೆ ಅಧ್ಯಕ್ಷ ಎಂ.ನಾಗರಾಜ್. ಬೆಳಿಗ್ಗೆ 11.

ಸಪ್ತಗಿರಿ ಮುದ್ರಣ ಮತ್ತು ಪ್ರಕಾಶನ: ಪಂಪ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು. ಪ್ರೊ.ಸಂಪಿಗೆ ತೋಂಟದಾರ್ಯ ಅವರ `ತಮಾಷೆ ಸುಳಿ~ ಮತ್ತು `ಕಾಮನ ಬಿಲ್ಲು~ ಪುಸ್ತಕ ಬಿಡುಗಡೆ. ಅತಿಥಿಗಳು- ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಎಲ್.ಎನ್.ಮುಕುಂದರಾಜ್, ಪ್ರೊ.ಸಂಪಿಗೆ ತೋಂಟಾದಾರ್ಯ. ಅಧ್ಯಕ್ಷತೆ- ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ವೀರಣ್ಣ. ಸಂಜೆ 5.30.

ಬಸವ ಸಮಿತಿ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ರಸ್ತೆ. ವ್ಯವಸಾಯ ಹಾಗೂ ಅದರ ಬಿಕ್ಕಟ್ಟುಗಳು ಕುರಿತ ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸ- ಪತ್ರಕರ್ತ ಮಂಜುನಾಥ ಅದ್ದೆ. ಅಧ್ಯಕ್ಷತೆ- ಸಮಿತಿ ಅಧ್ಯಕ್ಷ ಅರವಿಂದ ಜತ್ತಿ. ಸಂಜೆ 6.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಉದ್ಯಾನ, ಬಸವನಗುಡಿ. ಕೆ.ಜಿ.ಸುಬ್ರಾಯಶರ್ಮಾ ಅವರ `ಪೀಯೂಷ ಧಾರಾ~ ಗ್ರಂಥ ಬಿಡುಗಡೆ- ಎಸ್.ರಾಮಚಂದ್ರ ಅಯ್ಯರ್. ಅತಿಥಿಗಳು- ಸಿ.ಕೆ.ಸುಬ್ಬನರಸಿಂಹ, ಯು.ಎಚ್.ಸುಬ್ರಹ್ಮಣ್ಯ, ಎಸ್.ಆರ್.ಅನಂತಮೂರ್ತಿ. ಅಧ್ಯಕ್ಷತೆ- ಪ್ರೊ.ಟಿ.ಅಶ್ವತ್ಥನಾರಾಯಣ ರಾವ್. ಬೆಳಿಗ್ಗೆ 9.

ಹಂಸಲೇಖ ದೇಸಿ ಕಾಲೇಜು: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. `ಶಿವರಾತ್ರಿ~ ನಾಟಕ ಪ್ರದರ್ಶನ. ಕಾಲೇಜು ವಿದ್ಯಾರ್ಥಿಗಳ ತಂಡ. ಸಂಜೆ. 6.30.

ಭಾರತೀಯ ವಿದ್ಯಾಭವನ: ಭವನ ಪಾಲಿಕೆ ಸಾರ್ವಜನಿಕ ಶಾಲೆ, ನಂ 21, 5ನೇ ಮುಖ್ಯರಸ್ತೆ, ಶ್ರೀರಾಂಪುರ. ಉಚಿತ ಆರೋಗ್ಯ ತಪಾಸಣಾ ಶಿಬಿರ. ಉದ್ಘಾಟನೆ- ಭಾರತೀಯ ವಿದ್ಯಾಭವನ ಉಪಾಧ್ಯಕ್ಷ ಎಚ್.ಕೆ.ಕೇಜ್ರಿವಾಲ್. ಅತಿಥಿಗಳು- ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಕೆ.ಆರ್.ನಿರಂಜನ್, ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ. ಬೆಳಿಗ್ಗೆ 9.30.

  ಧಾರ್ಮಿಕ ಕಾರ್ಯಕ್ರಮಗಳು
ಅವರ್ ಸ್ಕೂಲ್
: ವಿದ್ಯಾಭಾರತೀ ಸಭಾಂಗಣ, ಅವರ್ ಸ್ಕೂಲ್ ಆವರಣ,  2ನೇ ಹಂತ, ಬನಶಂಕರಿ. ಪ್ರವಚನ- ಹಿರೇಮಗಳೂರು ಕಣ್ಣನ್. ಸಂಜೆ 6.15.

ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್‌ಎಸ್‌ಎಂಆರ್‌ವಿ ಕಾಲೇಜು, ಟಿ ಬಡಾವಣೆ, ಜಯನಗರ. `ಧ್ಯಾನ ಮತ್ತು ಅಂತರಂಗದ ವಿಕಾಸ~ ಕುರಿತು ಪ್ರವಚನ- ನಿಮಿಷಾವಾಣಿ. ಸಂಜೆ 6.30.

ಶಂಕರ ಸೇವಾ ಸಮಿತಿ: ಶಾರದಾಂಬನಗರ, ಜಾಲಹಳ್ಳಿ. 27ನೇ ವರ್ಷದ ಪ್ರತಿಷ್ಠಾನ ಮಹೋತ್ಸವ. ಲಲಿತಾ ಸಹಸ್ರನಾಮ ಹೋಮ. ಬೆಳಿಗ್ಗೆ 8.30.

ಸಾಯ ಗೀತಾಂಜಲಿ: ಸತ್ಯ ಸಾಯಿ ಸೇವಾ ಕೇಂದ್ರ, 21ನೇ ಮುಖ್ಯರಸ್ತೆ, ಜೆ.ಪಿ.ನಗರ. ಭಜನೆ. ಸಂಜೆ 6.20.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT