ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಫೆಬ್ರುವರಿ 19, ಭಾನುವಾರ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್: ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ವಸಂತನಗರ. ಛತ್ರಪತಿ ಶಿವಾಜಿ ಮಹಾರಾಜರ 385ನೇ ಜಯಂತ್ಯುತ್ಸವ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಬೆಳಿಗ್ಗೆ 10.30.

ಬಿಜೆಪಿ ಯುವ ಮೋರ್ಚಾ: ಜಗನ್ನಾಥ ಭವನ, ಮಲ್ಲೇಶ್ವರ. ರಾಜ್ಯ ಯುವ ನೀತಿ ಕುರಿತ ವಿಚಾರ ಸಂಕಿರಣ. ಅತಿಥಿಗಳು- ಡಿ.ವಿ.ಸದಾನಂದ ಗೌಡ, ಮೋರ್ಚಾದ ಅಧ್ಯಕ್ಷ ವಿ. ಸುನಿಲ್‌ಕುಮಾರ್.
ಬೆಳಿಗ್ಗೆ 10.30.

ಬಿಬಿಎಂಪಿ: ದಾಸಪ್ಪ ಆಸ್ಪತ್ರೆ ಆವರಣ, ಪುರಭವನ ಮುಂಭಾಗ. ಪೋಲಿಯೊ ಲಸಿಕೆ ಕಾರ್ಯಕ್ರಮ. ಸಚಿವ ಆರ್.ಅಶೋಕ, ಮೇಯರ್ ಪಿ.ಶಾರದಮ್ಮ. ಬೆಳಿಗ್ಗೆ 10.30.

ಭಾರತ ಸರ್.ಎಂ.ವಿಶ್ವೇಶ್ವರಯ್ಯ ಸಪ್ತಸ್ವರ ಕಲೆ ಮತ್ತು ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್: ಡಾ.ರಾಜ್‌ಕುಮಾರ್ ಕಲಾಕ್ಷೇತ್ರ, ರಾಜಾಜಿನಗರ. ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಗೀತ ರಚನೆಕಾರರಾದ ಗೀತಪ್ರಿಯ, ಡಾ.ದೊಡ್ಡರಂಗೇಗೌಡ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್. ಸಂಜೆ 6.

ಕರ್ನಾಟಕ ಲೇಖಕಿಯರ ಸಂಘ: ಸಚಿವಾಲಯ ಕ್ಲಬ್, ಎಂ.ಎಸ್.ಬಿಲ್ಡಿಂಗ್ ಎದುರು, ಕಬ್ಬನ್ ಉದ್ಯಾನ. ವಾರ್ಷಿಕೋತ್ಸವ ಸಮಾರಂಭ. ಲೇಖಕಿ ಹೇಮಲತಾ ಮಹಿಷಿ ಅವರಿಗೆ ಎಚ್.ಎಸ್ ಪಾರ್ವತಿ ದತ್ತಿನಿಧಿ ಪ್ರಶಸ್ತಿ ಪ್ರದಾನ. ಸನ್ಮಾನಿತರು-ಎಲ್.ವಿ.ಶಾಂತಕುಮಾರಿ, ಪ್ರೊ.ಎನ್.ಎಸ್.ಲೀಲಾ, ಪ್ರೊ.ಬಿ.ವೈ. ಲಲಿತಾಂಬ, ಟಿ.ಗಿರಿಜಾ, ರಜಿಯಾ ಬಳಬಟ್ಟಿ. ಸಂಚಾರಿ ಥಿಯೇಟರ್‌ನಿಂದ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರ `ಊರ್ಮಿಳಾ~ ನಾಟಕ ಪ್ರದರ್ಶನ. ಅಭಿನಂದನಾ ಭಾಷಣ: ಡಾ.ಎನ್.ಗಾಯತ್ರಿ. ಬಿ.ಕೆ.ಸರೋಜಾ ಅವರ `ಅಪೂರ್ವ ಮಿಲನ~ ಕೃತಿ ಬಿಡುಗಡೆ. ಸಂಜೆ 4.

ಶ್ರೀರಾಮ ಕಲಾ ವೇದಿಕೆ:  ಭಾರತೀಯ ವಿದ್ಯಾಭವನ, ಖಿಂಚಾ ಸಭಾಂಗಣ, ರೇಸ್‌ಕೋರ್ಸ್ ರಸ್ತೆ. ಮಹಾಶಿವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ನಯನ್ ಘೋಷ್ ಮತ್ತು ಈಶಾನ್ ಘೋಷ್ ಅವರಿಂದ ತಬಲಾ ಯುಗಳ ವಾದನ. ವೆಂಕಟೇಶ ಕುಮಾರ ಅವರಿಂದ ಗಾಯನ. ಸನ್ಮಾನಿತರು- ಕೇಂದ್ರ ಸಂಗೀತ ಅಕಾಡೆಮಿಯ ಸದಸ್ಯೆ ಸುಮಾ ಸುಧೀಂದ್ರ. ಬೆಳಿಗ್ಗೆ 10.

ಸುಚಿತ್ರಾ: ನಂ.27, 9ನೇ ಮುಖ್ಯ ರಸ್ತೆ, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ತಿಂಗಳ ವಿಶೇಷ ಉಪನ್ಯಾಸ ಮಾಲೆಯಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ `ಸಂಸ್ಕೃತ ಭಾಷೆ, ಸಂಸ್ಕೃತಿ: ಕೆಲವು ಸತ್ಯ-ಮಿಥ್ಯಗಳು~ ಕುರಿತು ಉಪನ್ಯಾಸ. ಅತಿಥಿಗಳು: ವಿಮರ್ಶಕ ಡಾ.ಪಿ.ವಿ.ನಾರಾಯಣ, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ಸಂಶೋಧಕರಾದ ಡಾ.ಜಯಂತಿ ಮನೋಹರ್. ಸಂಜೆ 5.

ಬೆಂಗಳೂರು ಜಪಾನ್ ಶಿಕ್ಷಕರ ಸಂಘ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಜಪಾನ್ ಹಬ್ಬ. ಬೆಳಿಗ್ಗೆ 11.

ಆಕೃತಿ ಪುಸ್ತಕ: 3ನೇ ಬ್ಲಾಕ್, ರಾಜಾಜಿನಗರ. ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರೊಂದಿಗೆ ಸಂವಾದ. ಬೆಳಿಗ್ಗೆ 10.30.

ಸರಸ ಸಂವಹನ ಸಮ್ಮಿಲನ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24/3, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಉದ್ಘಾಟನೆ: ವಿಜ್ಞಾನಿ ಪ್ರೊ.ಕೆ.ಜೆ.ರಾವ್. `ಸರಸ ಸಂವಹನ~ ಮತ್ತು `ಓ ನನ್ನ ನೆನಪೆ~ ಕೃತಿ ಬಿಡುಗಡೆ. ಬೆಳಿಗ್ಗೆ 10.

ಕವಿಗಳ ಅಂತರರಾಷ್ಟ್ರೀಯ ಸಂಘ: ವಲ್ಲಭನಿಕೇತನ, ಕುಮಾರ ಪಾರ್ಕ್ ಪೂರ್ವ. ಶಿವಾನಂದ ವೃತ್ತ. ಶಿವರಾತ್ರಿ ವಿಶೇಷ ಕವಿಗೋಷ್ಠಿ. ಅತಿಥಿ: ಬೆಂಗಳೂರು ವಿವಿಯ ಡಾ. ರಾಧಿಕಾ ರಂಜಿನಿ. ಬೆಳಿಗ್ಗೆ 10.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ರಚನಾ ಮುರಳೀಧರ್ ಅವರಿಂದ ಸುಗಮ ಸಂಗೀತ. ಸಂಜೆ 6.

ಸಂಗೀತ ಕೃಪಾ ಕುಟೀರ: 39, 4ನೇ ಬ್ಲಾಕ್, ತ್ಯಾಗರಾಜನಗರ. ಪುರಂದರದಾಸರ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ. ವಿಷ್ಣು ಸಹಸ್ರನಾಮ ಸ್ತೋತ್ರ ಪಠನೆ. ಭರತ್ ಅತ್ರೇಯಸ್ ಅವರಿಂದ `ಕೊಳಲು ವಾದನ~, ತ್ಯಾಗರಾಜರ ಪಂಚರತ್ನಗಳ ಗಾಯನ. ಬೆಳಿಗ್ಗೆ 9.

ರಾಗ ಸಂಗಮ: ಹರಿದಾಸ ಸಂಘ, ಕೆ.ಆರ್.ಪುರ. ಪ್ರೊ. ಟಿ.ಎಸ್.ರಮಾ ಅವರಿಂದ ಗಾಯನ. ಎಸ್. ಯಶಸ್ವಿ (ಪಿಟೀಲು), ಎನ್.ವಾಸುದೇವ್ (ಮೃದಂಗ), ದಯಾನಂದ ಮೋಹಿತೆ (ಘಟ). ಸಂಜೆ 6.

ಗುರುಕೃಪಾ ಸ್ಕೂಲ್ ಆಫ್ ಮ್ಯೂಸಿಕ್: ಸಂಗೀತ ರಾಜನ್ (ರಾಜನ್-ನಾಗೇಂದ್ರ) ಮತ್ತು ತಬಲಾ ಕಲಾವಿದ ಗೋವಿಂದರಾವ್ ಗರ್ಗ್ ಅವರಿಗೆ ಪದ್ಮನಾಭ ಶಾಸ್ತ್ರಿ ಪ್ರಶಸ್ತಿ. ಬೆಳಿಗ್ಗೆ 9.30.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ: ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್. ಹೊರ ವರ್ತುಲ ರಸ್ತೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ.
ಉದ್ಘಾಟನೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ. ಅತಿಥಿಗಳು: ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎನ್.ಆರ್.ವಿಶುಕುಮಾರ್. ಒಕ್ಕಲಿಗರ ಸಂಘದ ಅಧ್ಯಕ್ಷ ನೀಲಕಂಠಗೌಡ. ಬೆಳಿಗ್ಗೆ 10.

ರಂಗದರ್ಶಿ ಮೂವಿ ಥಿಯೇಟರ್: ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ. ವಿ ಮೂವ್ ತಂಡದ `ಮಾಲ್ಗುಡಿ ಡೇಸ್~ ನಾಟಕ ಪ್ರದರ್ಶನ. ಸಂಜೆ 5.30.

ಕರ್ನಾಟಕ ನಾಟಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಡಾ.ಪಂಡಿತ್ ಪುಟ್ಟರಾಜ ನಾಟ್ಯ ಸಂಘ ಅಭಿನಯಿಸುವ `ಚಿನ್ನದ ಗೊಂಬೆ~ ನಾಟಕ ಪ್ರದರ್ಶನ. ಸಂಜೆ 7.

ಧಾರ್ಮಿಕ ಕಾರ್ಯಕ್ರಮ
ಖಾನೇ ಮುನೇಶ್ವರ ಸ್ವಾಮಿ ಸೇವಾ ಟ್ರಸ್ಟ್:
ನಂ.2, ಗೋವಿನಾಯಕನಹಳ್ಳಿ, ಶ್ರೀಖಾನೆ ಮುನೇಶ್ವರ ಸ್ವಾಮಿ ದೇವಸ್ಥಾನದ ಆವರಣ, 14ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ, 1ನೇ ಹಂತ. ದೇವಸ್ಥಾನದ ಆವರಣ. ದೇವಾಲಯ ಜೀರ್ಣೋದ್ಧಾರ. ಬೆಳಿಗ್ಗೆ 10.30.

ಅಖಿಲ ಭಾರತೀಯ ಮಧ್ವ ಮಹಾ ಮಂಡಳ: ಕತ್ತರಿಗುಪ್ಪೆ ಮುಖ್ಯ ರಸ್ತೆ. ವಿದ್ಯಾಪೀಠ. ಪೂರ್ಣ ಪ್ರಜ್ಞಾ ವಿದ್ಯಾಪೀಠ, `ಸರ್ವ ಮೂಲ ಗ್ರಂಥ-ದಶೋಪನಿಷತ್ ಪರಿಚಯಾತ್ಮಕ ಚಿಂತನೆ~ ಕುರಿತು ಉಪನ್ಯಾಸ. ಮಧ್ಯಾಹ್ನ 2.45. ತ್ಯಾಗರಾಜ ಗಾನಸಭಾ ಟ್ರಸ್ಟ್: ವಾಣಿ ವಿದ್ಯಾ ಕೇಂದ್ರ, 1246, 4ನೇ ಮುಖ್ಯ ರಸ್ತೆ, ಆದಿಗುರು ಶ್ರೀ ಪುರಂದರ ದಾಸರ-ಸಂತ ತ್ಯಾಗರಾಜರ ಆರಾಧನಾ ಮಹೋತ್ಸವ. ಬೆಳಿಗ್ಗೆ 8.

ಹರಿದಾಸ ಸೇವಾ ಬಳಗ: ಶ್ರೀಮದ್ ಜಯತೀರ್ಥ ಬೃಂದಾವನ ಸನ್ನಿಧಾನ, ಉತ್ತರಾದಿ ಮಠ. ಬಸವನಗುಡಿ. ಹರಿನಾಮ ಸ್ಮರಣೆ. ವಾರ್ಷಿಕೋತ್ಸವ. ಹರಿಭಜನೆ, ಸುಮಧ್ವವಿಜಯ. ಟಿ.ಎಸ್.ಅನ್ವಿತಾ ಅವರಿಂದ ದಾಸರ ಪಾದಗಳು. ಜಿ.ಎನ್.ಆಕಾಶ್ ಅವರಿಂದ ಕೀಬೋರ್ಡ್.
ಬೆಳಿಗ್ಗೆ 7.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT