ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಸೆಪ್ಟೆಂಬರ್ 15, ಗುರುವಾರ

Last Updated 14 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಕರ್ನಾಟಕ ಕೈಗಾರಿಕಾ ವಾಣಿಜ್ಯೋದ್ಯಮ ಮಹಾಸಂಸ್ಥೆ: ವಿಧಾನಸೌಧ, ಬ್ಯಾಂಕ್ವೆಟ್ ಸಭಾಂಗಣ. ಸಂಸ್ಥಾಪಕರ ದಿನಾಚರಣೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಡಾ.ವಿ.ಎಸ್.ಆಚಾರ್ಯ, ಮುರುಗೇಶ್ ಆರ್.ನಿರಾಣಿ, ಎಸ್.ಸುರೇಶ್‌ಕುಮಾರ್. ಸಂಜೆ 4.15.

ಕೈಮಗ್ಗ ಮತ್ತು ಜವಳಿ ಇಲಾಖೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣ, ಕೆಂಪೇಗೌಡರಸ್ತೆ. `2010- 11ನೇ ಸಾಲಿನ ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಒಂದು ದಿನದ ಕಾರ್ಯಾಗಾರ ಉದ್ಘಾಟನೆ- ಸಚಿವ ವರ್ತೂರು ಪ್ರಕಾಶ್. ಅತಿಥಿಗಳು- ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಶಾಸಕರಾದ ಜೆ.ನರಸಿಂಹಸ್ವಾಮಿ, ಎಂ.ವಿ.ನಾಗರಾಜು, ವೆಂಕಟಸ್ವಾಮಿ, ವಿಧಾನ ಪರಿಷತ್ ಸದಸ್ಯ ಈ.ಕೃಷ್ಣಪ್ಪ, ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ. ಅಧ್ಯಕ್ಷತೆ- ಸಚಿವ ಬಿ.ಎನ್.ಬಚ್ಚೇಗೌಡ. ಬೆಳಿಗ್ಗೆ 10.

ಸರ್.ಎಂ.ವಿಶ್ವೇಶ್ವರಯ್ಯ ವಿಚಾರ ವೇದಿಕೆ: ಕನ್ನಡ ಭವನ. ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಅಂಧ ವಾದ್ಯಗೋಷ್ಠಿ ಕಲಾವಿದರಿಗೆ ಗೌರವ ಅಭಿನಂದನೆ. ಸಾನ್ನಿಧ್ಯ- ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ. ಅತಿಥಿಗಳು- ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ಉಪಮೇಯರ್ ಎಸ್.ಹರೀಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ. ಅಧ್ಯಕ್ಷತೆ- ಸಚಿವ ವಿ.ಸೋಮಣ್ಣ. ಬೆಳಿಗ್ಗೆ 11.

ನ್ಯಾಷನಲ್ ಪದವಿ ಪೂರ್ವ ಕಾಲೇಜು: ಡಾ.ಎಚ್.ನರಸಿಂಹಯ್ಯ ಮಲ್ಟಿ ಮಿಡಿಯಾ ಸಭಾಂಗಣ, ಪಂಪಮಹಾಕವಿ ರಸ್ತೆ, ಬಸವನಗುಡಿ. `ಅಂತರರಾಷ್ಟ್ರೀಯ ಅರಣ್ಯ ವರ್ಷ 2011~. ಉದ್ಘಾಟನೆ- ಸಚಿವ ಸಿ.ಪಿ.ಯೋಗೀಶ್ವರ್. ಅತಿಥಿಗಳು- ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಪಾಲಿಕೆ ಸದಸ್ಯ ಎಸ್.ಅನಿಲ್‌ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಡಾ.ಸುಭಾಷ್ ಭರಣಿ, ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ವಿಭಾಗದ ಉಪ ನಿರ್ದೇಶಕ ಉಮಾ ಬಸವಣ್ಯಪ್ಪ, ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್. ಬೆಳಿಗ್ಗೆ 11.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ: ಕಂಠೀರವ ಕ್ರೀಡಾಂಗಣ. 2011- 12ನೇ ಸಾಲಿನ ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳ ಉದ್ಘಾಟನೆ- ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮರಿಯಪ್ಪ. ಅತಿಥಿಗಳು- ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಸಂಸದ ಪಿ.ಸಿ.ಮೋಹನ್, ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಕೆ.ಸತ್ಯನಾರಾಯಣ. ಅಧ್ಯಕ್ಷತೆ- ಶಾಸಕ ಆರ್.ರೋಷನ್ ಬೇಗ್.    ಬೆಳಿಗ್ಗೆ 10.30.

ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು: ಡಾ.ಪ್ರೇಮಚಂದ್ರ ಸಾಗರ್ ಸಭಾಂಗಣ, ಕುಮಾರಸ್ವಾಮಿ ಬಡಾವಣೆ. ಎಂಜಿನಿಯರ್ಸ್‌ ದಿನಾಚರಣೆ ಹಾಗೂ `ವಿಪತ್ತು ಉಪಶಮನಕ್ಕೆ ಎಂಜಿನಿಯರ್‌ಗಳ ಸಿದ್ಧತೆ~ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿಗಳು- ದೆಹಲಿಯ ವಿಶ್ವಬ್ಯಾಂಕ್‌ನ ಹಿರಿಯ ಸಾಮಾಜಿಕ ಅಭಿವೃದ್ಧಿ ತಜ್ಞ ಡಾ.ಎಸ್.ಸತೀಶ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ.ಶರ್ಮಾ, ಇಂಡಿಯನ್ ವಾಟರ್ ವರ್ಕ್ಸ್ ಅಸೋಸಿಯೇಷನ್ ಮುಖ್ಯಸ್ಥ ಬಿ.ಶ್ರೀನಿವಾಸ ರೆಡ್ಡಿ. ಅಧ್ಯಕ್ಷತೆ- ದಯಾನಂದ ಸಾಗರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ.ಡಿ.ಪ್ರೇಮಚಂದ್ರ ಸಾಗರ್. ಬೆಳಿಗ್ಗೆ 10.

ಪಿಇಎಸ್ ಪಿಯು ಕಾಲೇಜು: ಕುವೆಂಪು ಸಭಾಂಗಣ, ಹನುಮಂತನಗರ. ಇಕೊ ಕ್ಲಬ್ ಉದ್ಘಾಟನೆ. ಉದ್ಘಾಟನೆ-ಪರಿಸರವಾದಿ ಡಾ.ಅ.ನಾ.ಯಲ್ಲಪ್ಪರೆಡ್ಡಿ. ಅಧ್ಯಕ್ಷತೆ-ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಆರ್.ದೊರೆಸ್ವಾಮಿ. ಬೆಳಿಗ್ಗೆ 11.

ಸುರಾನಾ ಕಾಲೇಜು: ಜಿ.ಸಿ.ಸುರಾನಾ ಸಭಾಂಗಣ, ಮೈಸೂರು ತುಮಕೂರು ರಸ್ತೆ, ಕೆಂಗೇರಿ ಉಪನಗರ. `ಕಾರ್ಪೊರೇಟ್ ಆಡಳಿತ~ ಕುರಿತು ರಾಷ್ಟ್ರೀಯ ಸಮ್ಮೇಳನ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಐಐಎಂನ ಪ್ರಾಧ್ಯಾಪಕ ಡಾ.ಎಸ್.ರಘುನಾಥ್, ಜಿಡಿಎ ಪ್ರತಿಷ್ಠಾನದ ಮುಖ್ಯಸ್ಥ ದಿಲೀಪ್ ಸುರಾನಾ. ಬೆಳಿಗ್ಗೆ 10.

ಎಚ್.ಎ.ಎಲ್.ಕೇಂದ್ರೀಯ ಕನ್ನಡ ಸಂಘ: ಒಡೆಯರ್ ಸಭಾಂಗಣ, ಕೇಂದ್ರೀಯ ಕನ್ನಡ ಗ್ರಂಥಾಲಯ, ಎಚ್.ಎ.ಎಲ್.ಆಸ್ಪತ್ರೆಯ ಹತ್ತಿರ. ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ವಿಚಾರ ಸಂಕಿರಣ. ಉದ್ಘಾಟನೆ- ಹಿರಿಯ ಸಾಹಿತಿ ಮಾ.ಚಿ.ಕೃಷ್ಣ. ಅತಿಥಿಗಳು- ಸಂಘದ ಅಧ್ಯಕ್ಷ ಬಿ.ವಿ.ಮನೋಹರ್, ಸಂಘದ ಕಾರ್ಯದರ್ಶಿ ವಸಂತ ಕುಮಾರ್, ಎಇಸಿಎಸ್ ಮಾಜಿ ನಿರ್ದೇಶಕ ಪಿ.ಡಿ.ಮೋಹನ್, ಪ್ರಧಾನ ಕಾರ್ಯದರ್ಶಿ ಎಸ್.ರೇಣುಕ. ಅಧ್ಯಕ್ಷತೆ- ಬೆನ್‌ಕಾಮ್ಸ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಡಿಸೈನ್ ಸಂಸ್ಥೆಯ ಸಂಸ್ಥಾಪಕ ರವೀಂದ್ರನಾಥ್ ಪಟ್ಟಣಶೆಟ್ಟಿ. ಮಧ್ಯಾಹ್ನ 3.30.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ: ಸಭಾಂಗಣ, ಭಾರತೀಯ ವಿಜ್ಞಾನ ಸಂಸ್ಥೆ. ಸರ್.ಎಂ.ವಿಶ್ವೇಶ್ವರಯ್ಯ ಅವರ 151ನೇ ಜನ್ಮದಿನಾಚರಣೆ. `ಕರ್ನಾಟಕ ಮತ್ತು ರಾಷ್ಟ್ರಕ್ಕೆ ವಿಶ್ವೇಶ್ವರಯ್ಯ ಅವರ ಕೊಡುಗೆ~ ಕುರಿತು ವಿಶೇಷ ಉಪನ್ಯಾಸ- ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನದ ಟ್ರಸ್ಟಿ ಡಾ.ಬಿ.ವಿ.ಎ.ರಾವ್. ಅಧ್ಯಕ್ಷತೆ- ಭಾರತೀಯ ವಿಜ್ಞಾನ ಸಂಸ್ಥೆಯ ಹವಾಮಾನ ಬದಲಾವಣೆ ಕೇಂದ್ರದ ಮುಖ್ಯಸ್ಥ ಪ್ರೊ.ಜೆ.ಶ್ರೀನಿವಾಸನ್. ಸಂಜೆ 4

ಕರ್ನಾಟಕ ವಿದ್ಯುತ್ ನಿಗಮ, ಪದವೀಧರ ಎಂಜಿನಿಯರ್‌ಗಳ ಸಂಘ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಎಂಜಿನಿಯರ್‌ಗಳ ದಿನಾಚರಣೆ. ಅತಿಥಿಗಳು- ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮತ್ತೂರು ಕೃಷ್ಣಮೂರ್ತಿ, ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಆರ್.ಶ್ರೀನಿವಾಸಮೂರ್ತಿ. ಅಧ್ಯಕ್ಷತೆ- ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ.  ಸಂಜೆ 4.30.

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ: ನಯನ ಸಭಾಂಗಣ, ಕನ್ನಡ ಭವನ. ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ. ಸಾನ್ನಿಧ್ಯ- ಕೊಳದ ಮಠದ ಡಾ.ಶಾಂತವೀರಸ್ವಾಮೀಜಿ, ಕೂಡಲ ಸಂಗಮ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ- ಹಿರಿಯ ನಟ ಎಸ್.ಶಿವರಾಂ. ಅತಿಥಿಗಳು- ಪಾಲಿಕೆ ಸದಸ್ಯ ಎಸ್.ಕೇಶವಮೂರ್ತಿ, ರಾಯುಡು ಸಮಾಜಸೇವಾ ಸಂಸ್ಥೆ ಅಧ್ಯಕ್ಷ ಈಶ್ವರ್ ಎಸ್.ರಾಯುಡು. ಅಧ್ಯಕ್ಷತೆ- ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ. ಸಂಜೆ 4.30.

ಕನ್ನಡ ಯುವಜನ ಸಂಘ: ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಬಗ್ಗೆ ಉಪನ್ಯಾಸ. ಉಪನ್ಯಾಸಕರು-ಚಿಂತಕ ಸಿ.ವಸಂತರಾಜು. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ. ಪ್ರಸ್ತಾವನೆ-ವಕೀಲ ಬಿ.ಭದ್ರೇಗೌಡ. ಸಂಜೆ 6.

ಗುಡ್‌ನೈಟ್ ಸೂರ್ಯ ಉತ್ಸವ: ಸೇವಾಸದನ, ಮಲ್ಲೇಶ್ವರ. 35 ನಗರಗಳಲ್ಲಿ 365 ದಿನ ಸಂತಸದ ಕ್ಷಣಗಳನ್ನು ಹರಡುವ ಅಂಗವಾಗಿ ರಮಾ ವೈದ್ಯನಾಥನ್ ಅವರಿಂದ ಶಾಸ್ತ್ರೀಯ ನೃತ್ಯ. ಸಂಜೆ 6.30.

ಬಿಎನ್‌ಎಂ ಪದವಿ ಕಾಲೇಜು: ಜೆಎಸ್‌ಎಸ್ ಸಭಾಂಗಣ, 17ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ. ಮುಖ್ಯ ಅತಿಥಿ-ಕಂಪೆನಿ ಕಾರ್ಯದರ್ಶಿ ವೇದಾವತಿ ಆರ್.ಕಬಾಡಿ. ಅಧ್ಯಕ್ಷತೆ-ಬಿಎನ್‌ಎಂ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಸುನಂದಾ ಪಿ.ಜಾಧವ್. ಬೆಳಿಗ್ಗೆ 10.30.

ಯಲ್ಲಮ್ಮ ದಾಸಪ್ಪ ತಾಂತ್ರಿಕ ಸಂಸ್ಥೆ: ರಘುವನಹಳ್ಳಿ, ಕನಕಪುರ ಮುಖ್ಯ ರಸ್ತೆ. ಬಿ.ಇ. ಪ್ರಥಮ ಸೆಮಿಸ್ಟರ್ ತರಗತಿಗಳ ಉದ್ಘಾಟನಾ ಸಮಾರಂಭ. ಉದ್ಘಾಟಕರು-ಹಲಸೂರಿನ ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದ. ವಿದ್ವಾನ್ ಕೆ.ಗುರುರಾಜ್ ಅವರಿಂದ ಆಶೀರ್ವಚನ. ಉಪಸ್ಥಿತಿ-ಪ್ರಾಂಶುಪಾಲ ಡಾ.ಎ.ಆರ್.ಆನಂದಕುಮಾರ್, ವ್ಯವಸ್ಥಾಪಕ ಟ್ರಸ್ಟಿ ಡಾ.ಡಿ.ರಾಮಚಂದ್ರಪ್ಪ. ಬೆಳಿಗ್ಗೆ 11.

ರಾಷ್ಟ್ರೀಯ ಉಳಿತಾಯ ಸಂಸ್ಥೆ: ಶೇಷಾದ್ರಿಪುರ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆ. ಶೇಷಾದ್ರಿಪುರ. ಶಾಲಾ ಉಳಿತಾಯ `ಬ್ಯಾಂಕುಗಳ ಸಂಚಯಿಕ ದಿನ~ ಆಚರಣೆ. ಮುಖ್ಯ ಅತಿಥಿ-ಕರ್ನಾಟಕ ವೃತ್ತದ ಅಂಚೆ ಸೇವೆಗಳ ನಿರ್ದೇಶಕಿ ಮತ್ತು ಪ್ರಧಾನ ಅಂಚೆ ಪ್ರಬಂಧಕರು ಶೇವುಲಿ ಬರ್ಮನ್. ಅಧ್ಯಕ್ಷತೆ-ಶಾಲಾ ಸಂಸ್ಥೆಯ ಗೌರವ ಸಹಾಯಕ ಕಾರ್ಯದರ್ಶಿ ಸರೋಜಾ ಕೆ.ಎಂ.ನಂಜಪ್ಪ. ಮಧ್ಯಾಹ್ನ 2.30.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ವಿಜಯನಗರ. ಕನ್ನಡ ಸಂಘ ಉದ್ಘಾಟನೆ- ಲೇಖಕಿ ವೈದೇಹಿ. ಅತಿಥಿ- ಲೇಖಕಿ ಡಾ.ಎಚ್.ಎಸ್.ಶ್ರೀಮತಿ. ಅಧ್ಯಕ್ಷತೆ- ಪ್ರಾಂಶುಪಾಲ ಡಾ.ಎನ್.ನಾಗರಾಜ್.         ಬೆಳಿಗ್ಗೆ 11.30.

ರಂಗದರ್ಶಿ
ರಂಗಶಂಕರ:
ಜೆ.ಪಿ.ನಗರ. ಅಂತರಂಗ ತಂಡದಿಂದ, `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ.ಕೆ.ಎನ್.ಗಣೇಶಯ್ಯ ಅವರ ಕಥೆ ಆಧಾರಿತ ಶಾಲಭಂಜಿಕೆ ನಾಟಕ ಅಭಿನಯ. ರಂಗಸ್ವರೂಪ-ಎಸ್.ಆರ್.ಗಿರೀಶ್, ಸ್ವರ ಸಂಯೋಜನೆ-ನಾರಾಯಣ ರಾಯಚೂರ, ಗೀತ ಸಾಹಿತ್ಯ-ರಾಮನಾಥನ್, ಗಾಯನ-ಸಂಧ್ಯಾ ಶ್ರೀನಾಥ್, ಆರ್.ಹರ್ಷ, ಅರ್ಪಿತ ಬೆಂಕಿಪುರ, ಶಶಾಂಕ್. ಹಿನ್ನೆಲೆ ಸಂಗೀತ-ಕೆ.ರಾಘವೇಂದ್ರ, ರಂಗಪರಿಕರ ಶಶಿಧರ ಅಡಪ. ನಿರ್ವಹಣೆ-ಅಂಕಲ್ ಶ್ಯಾಮ್.        ಸಂಜೆ 7.30.

ಉದಯ ಕಲಾನಿಕೇತನ: ಗೋಣಿಪುರ, ಕುಂಬಳಗೋಡು, ಕೆಂಗೇರಿ. ಹಿರಿಯ ಚಲನಚಿತ್ರ ನಟ ದಿ.ಉದಯಕುಮಾರ್ ರಚಿಸಿರುವ `ಕೃಷ್ಣಪ್ರಿಯ ಕನಕ~ ರಂಗಪ್ರಯೋಗ. ನಿರ್ದೇಶನ ರೇಣುಕಾ ಬಾಲಿ ಉದಯಕುಮಾರ್. ಸಂಜೆ 7.

ಧಾರ್ಮಿಕ ಕಾರ್ಯಕ್ರಮ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:
ಎಪಿಕೆ ರಸ್ತೆ, ತ್ಯಾಗರಾಜನಗರ. `ಕಾಠಕೋಪನಿಷತ್ತು~ ಪ್ರವಚನ- ಅನಂತಶರ್ಮಾ ಭುವನಗಿರಿ.     ಬೆಳಿಗ್ಗೆ 9.30.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಶಿರಡಿ ಸಾಯಿ ದೇವಸ್ಥಾನ, 7ನೇ ಅಡ್ಡರಸ್ತೆ, ವಾಲ್ಮಿಕಿ, ರಾಮಮೂರ್ತಿನಗರ. `ಗುರು ಮಹಿಮೆ~ ಪ್ರವಚನ- ಸ್ವಾಮಿ ಚಂದ್ರೇಶಾನಂದಜೀ. ಸಂಜೆ 5.30.

ಚಿನ್ಮಯ ಮಿಷನ್: 9ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮಲ್ಲೇಶ್ವರ. `ಶಿವಾಪರಾಧ ಕ್ಷಮಾಪಣ ಸೋತ್ರಮ್~ ಪ್ರವಚನ- ವಸುಮನ ಚೈತನ್ಯ. ಸಂಜೆ 6.

ವಿಜಯನಗರ ಮಧ್ವ ಸೇವಾ ಟ್ರಸ್ಟ್: ಗಂಗಾಧರ ಬಡಾವಣೆ, 8ನೇ ಮುಖ್ಯರಸ್ತೆ, ಎಂ.ಸಿ.ಬಡಾವಣೆ. `ಭೀಷ್ಮಪರ್ವ- ದ್ರೋಣಪರ್ವ~ ಪ್ರವಚನ- ಜಯತೀರ್ಥಾಚಾರ್ಯ ಮಳಗಿ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT