ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬಗೆ ಬಗೆ ಮೇಳ

ನಿತ್ಯೋತ್ಸವ
Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ರಾಜಸ್ತಾನಿ ಮೇಳ
ಭಾರತದ ವಿವಿಧೆಡೆಯ ನೇಕಾರರು, ಕಲಾಕಾರರು ಸಿದ್ಧಪಡಿಸಿದ ಹತ್ತಿ, ರೇಷ್ಮೆ ಜವಳಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಜುಲೈ 26ರಿಂದ ಆಗಸ್ಟ್ 4ರವರೆಗೆ ನಡೆಯಲಿದೆ.

ಆಂಧ್ರಪ್ರದೇಶದ ಮಂಗಳಗಿರಿ, ವೆಂಕಟಗಿರಿ ಅಪ್ಪಟ ರೇಷ್ಮೆ ಸೀರೆಗಳು, ತಮಿಳುನಾಡಿನ ಕಾಂಜೀವರಂ ರೇಷ್ಮೆ ವಸ್ತ್ರಗಳು, ಗುಜರಾತ್‌ನ ಬಾಂದನಿ, ಪಟೋಲಾ, ಪಶ್ಚಿಮ ಬಂಗಾಳದ ಬಲೂಚಾರಿ, ರಾಜಸ್ತಾನದ ಬಂಧೇಜ್, ಛತ್ತೀಸ್‌ಗಡದ ಕೋಸಾ ಸಿಲ್ಕ್, ಕರ್ನಾಟಕದ ಚಿಂತಾಮಣಿ, ಕಸೂತಿ ವಸ್ತ್ರಗಳ ರಾಶಿಯೇ ಪ್ರದರ್ಶನಗೊಳ್ಳಲಿದೆ.

ಇದೀಗ ಮದುವೆ ಸಡಗರ ಮತ್ತು ಮುಂಗಾರು ಋತುವಿನ ಸಂಭ್ರಮ. ಇದೇ ಸಂದರ್ಭದಲ್ಲಿ `ರಾಮ್ ರಹೀಂ ಮಹಿಳಾ ಗ್ರಾಮೋದ್ಯೋಗ ಸಮಿತಿ' ಸದಸ್ಯರು, ಕರಕುಶಲಕಾರರು, ನೇಕಾರರು ನಗರಕ್ಕೆ ಆಗಮಿಸಿದ್ದು, ವಿಶಿಷ್ಟವಾಗಿ ನೇಯ್ಗೆ ಮಾಡಿದ, ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗದಿಂದಲೇ ತಯಾರಿಸಿದ ಗುಣಮಟ್ಟದ ಹತ್ತಿ, ರೇಷ್ಮೆ ವಸ್ತ್ರಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

`ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಜವಳಿ ಇಷ್ಟಪಡುವವರಿಗೆ, ಸಮಾರಂಭಗಳಲ್ಲಿ ಧರಿಸಲು ವೈಶಿಷ್ಟ್ಯಪೂರ್ಣವಾದ ದಿರಿಸು ಬಯಸುವವರಿಗೆ ವಿಪುಲವಾದ ಆಯ್ಕೆಗಳು ಇಲ್ಲಿವೆ' ಎಂದರು ಪ್ರದರ್ಶನದ ಸಂಯೋಜಕರಾದ ಸಂಜಯ್ ಕುಮಾರ್.ರಾಜಸ್ತಾನದ ಶ್ರೀಮಂತ ಶೈಲಿಯ ವಾಲ್ ಹ್ಯಾಂಗಿಂಗ್ಸ್, ರಾಜಸ್ತಾನಿ ಚಪ್ಪಲಿಗಳು, ಕೈಯಲ್ಲೇ ತಯಾರಿಸಿದ ಜೈಪುರದ ಕನ್ನಡಿ, ಬೆಡ್‌ಷೀಟ್, ಕುಷನ್ ಕವರ್, ಖೇಕ್ಡಾ ಬೆಡ್‌ಷೀಟ್, ಮೀರತ್ ಖಾದಿ ಶರ್ಟ್ ಮತ್ತು ಕುರ್ತಾ, ಭಡೋಯ್ ಕಾರ್ಪೆಟ್, ಬನಾರಸಿ ಸೀರೆ, ಹಿತ್ತಾಳೆ ಕಲಾಕೃತಿಗಳು, ಮರದ ಆಟಿಕೆಗಳು, ಪಶ್ಚಿಮ ಬಂಗಾಳದ ಶಾಂತಿನಿಕೇತನ್, ಕಾಂತಾವರ್ಕ್, ಬ್ಯಾಗ್‌ಗಳು, ಮುರ್ಷಿದಾಬಾದ್ ರೇಷ್ಮೆ ಸೀರೆಗಳು, ಸೆಣಬಿನ ಕೈಚೀಲ-ಚಪ್ಪಲಿ, ಕೊಲ್ಕತಾದ ಪ್ರಿಂಟೆಡ್ ವಸ್ತ್ರಗಳು, ಉತ್ತರ ಪ್ರದೇಶದ ಹೆಸರಾಂತ ಬನಾರಸ್ ರೇಷ್ಮೆ ಮತ್ತು ಹತ್ತಿ ಸೀರೆಗಳು, ಧರ್ಮಾವರಂ ರೇಷ್ಮೆ ಸೀರೆಗಳು ಮಾರಾಟಕ್ಕಿವೆ. ಅಷ್ಟೇ ಅಲ್ಲದೆ, ಸಹರಾನ್‌ಪುರದ ಪೀಠೋಪಕರಣಗಳು, ಡಿಸೈನರ್ ಬ್ಲೌಸ್‌ಗಳು, ಡಾಬು, ಕಲಾಂಕರಿ, ಕಾಂತಾ, ಕಚ್, ಕಸೂತಿ, ಕಶೀದಾ ಮೊದಲಾದ ವಸ್ತ್ರಾಭರಣಗಳು ಕೊಳ್ಳಲು ಲಭ್ಯ. ಧುಪಿಯಾನ್ ಸಿಲ್ಕ್, ಟಿಜಿ ಸಿಲ್ಕ್, ಸ್ಪೈನ್ ಸಿಲ್ಕ್ ಜವಳಿಗಳೂ ಸಿಗುತ್ತವೆ. ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ.

ವಿನ್ಯಾಸಕ ಸೀರೆ, ಆಭರಣಗಳ ಪ್ರದರ್ಶನ ಮೇಳ

ಚೆನ್ನೈ ಮೂಲದ ವಿನ್ಯಾಸಕಿ ಉಷಾ ಶ್ರೀಧರ್ ಅವರ ವಿನ್ಯಾಸದ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ನಗರದ ಎರಡು ಕಡೆ ಇಂದಿನಿಂದ ಆರಂಭಿಸಲಿದ್ದಾರೆ.

ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್ ಮುಂಭಾಗದಲ್ಲಿರುವ ರೇನ್‌ಟ್ರೀ ಕಟ್ಟಡದಲ್ಲಿ ಜು. 26 ಮತ್ತು 27ರಂದು ಹಾಗೂ ಮಲ್ಲೇಶ್ವರ ಎಂಟನೇ ಮುಖ್ಯರಸ್ತೆಯಲ್ಲಿರುವ ಕೆನರಾ ಯೂನಿಯನ್ ಸಭಾಂಗಣದಲ್ಲಿ ಜುಲೈ 29ರಿಂದ ಆಗಸ್ಟ್ 4ರವರೆಗೆ ಅವರ ಸಂಗ್ರಹದ ಪ್ರದರ್ಶನ, ಮಾರಾಟ ನಡೆಯಲಿದೆ.

ಕಾಂಚೀವರಂನಲ್ಲಿ ಕಟ್‌ವರ್ಕ್, ಆರಿ, ಕಲಂಕಾರಿ ಅಪ್ಲಿಕ್, ಕುಂದನ್ ಹಾಗೂ ಮಿರರ್ ವರ್ಕ್‌ಗಳಲ್ಲಿ ಮೂಡಿಬಂದಿರುವ ವಿನ್ಯಾಸಗಳು ಸೀರೆಗೆ ಸಮೃದ್ಧ ನೋಟ ನೀಡುತ್ತವೆ. ಕಾಮನಬಿಲ್ಲಿನ ಬಣ್ಣಗಳನ್ನು ವಿವಿಧ ವಿನ್ಯಾಸಗಳಲ್ಲಿ ಬಳಸಲಾಗಿದೆ.

ಅಲ್ಲದೆ ರೇಷ್ಮೆ, ಹತ್ತಿ ಮಿಶ್ರಿತ ರೇಷ್ಮೆ, ಕೈಮಗ್ಗ ಮುಂತಾದ ಫ್ಯಾಬ್ರಿಕ್‌ನ ಸೀರೆಗಳು ಹಾಗೂ ಡ್ರೆಸ್ ಮೆಟೀರಿಯಲ್‌ಗಳೂ ಇಲ್ಲಿವೆ. ಈ ಬಾರಿಯೂ ವಿವಿಧ ಬಗೆಯ ರೆಡಿಮೇಡ್ ರವಿಕೆಗಳನ್ನೂ ಉಷಾ ಶ್ರೀಧರ್ ವಿನ್ಯಾಸ ಮಾಡಿ ಪ್ರದರ್ಶನಕ್ಕೆ ತಂದಿದ್ದಾರೆ.

ಈ ಪ್ರದರ್ಶನದಲ್ಲಿ ದೀಪಿಕಾ ವಿನ್ಯಾಸಗೊಳಿಸಿದ ಆಭರಣಗಳೂ ಲಭ್ಯವಿದ್ದು ಒಂದೇ ಸೂರಿನಡಿ ಮಿಕ್ಸ್ ಅಂಡ್ ಮ್ಯಾಚ್ ಮಾಡಲು ಅವಕಾಶವಿದೆ. ಮಾಹಿತಿಗೆ ಸಂಪರ್ಕಿಸಿ: 094440 22785.

ಬಳೆ ಮೇಳ
ವಜ್ರಾಭರಣಗಳ ಮಾರಾಟದಲ್ಲಿ ಖ್ಯಾತಿ ಪಡೆದಿರುವ ಕೀರ್ತಿಲಾಲ್ಸ್, ಇದೀಗ ಬಳೆಗಳ ಉತ್ಸವವನ್ನು ಆಯೋಜಿಸಿದೆ. ಜುಲೈ 19ರಿಂದ ಪ್ರಾರಂಭವಾಗಿರುವ ಈ ಮೇಳ ಎರಡು ವಾರಗಳ ಕಾಲ, ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ಸಮಕಾಲೀನ, ಕ್ಲಾಸಿಕ್, ದಿನ ಬಳಕೆಗೆ, ಪಾರ್ಟಿಯಲ್ಲಿ ಧರಿಸಲು ಬೇಕಾದಂಥ ಬಳೆಗಳಿದ್ದು, ಪ್ಲಾಟಿನಂ ಹಾಗೂ ಇಟಾಲಿಯನ್ ಲೈಟ್‌ವೇಟ್‌ನಿಂದ ರೂಪಿತವಾಗಿವೆ. `ಕೀರ್ತಿಲಾಲ್ಸ್' ನಿರ್ದೇಶಕ ಸೂರಜ್ ಕುಮಾರ್ ಮಾತನಾಡಿ, `ನೂತನ ಹಾಗೂ ವಿಭಿನ್ನವಾದ ವಿಶಿಷ್ಟ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸುವುದು ನಮ್ಮ ಆದ್ಯತೆ.

ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದು ಮದುವೆ ಸಂದರ್ಭವಾದ್ದರಿಂದ ಮದುಮಗಳು ಬಯಸುವ ಬಳೆಗಳು ನಮ್ಮಲ್ಲಿ  ದೊರೆಯಲಿವೆ' ಎಂದಿದ್ದಾರೆ. ಸ್ಥಳ: ನೀಲಾದ್ರಿ ಪ್ಲಾಜಾ, ನಂ.4, ರಾಜಾರಾಮ್ ಮೋಹನ್ ರಾಯ್ ರಸ್ತೆ, ರಿಚ್‌ಮಂಡ್ ವೃತ್ತದ ಬಳಿ. 

ಗ್ರಾಮೀಣ ಪ್ರದರ್ಶನ ಮೇಳ

ರಾಜಸ್ತಾನದ ಕಲೆ ಮತ್ತು ಕರಕುಶಲ ಸಂಸ್ಥೆ ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಜುಲೈ 26ರಿಂದ ಆಗಸ್ಟ್ 4ರವರೆಗೆ `ರಾಜಸ್ತಾನಿ ಗ್ರಾಮೀಣ ಮೇಳ'ವನ್ನು ಆಯೋಜಿಸಿವೆ.

ಈ ಮೇಳದಲ್ಲಿ ದೇಶದ ವಿವಿಧೆಡೆಯ ನುರಿತ ನೇಕಾರರು ರೇಷ್ಮೆ ಮತ್ತು ಹತ್ತಿಯಿಂದ ಸಿದ್ಧಪಡಿಸಿದ ವಸ್ತ್ರಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ಶಾಂತಿನಿಕೇತನ್ ಕಾಂತಾ ಸಿಲ್ಕ್ ಸೀರೆ, ವಿವಿಧ ರಾಜ್ಯಗಳ ಭಿನ್ನ ಶೈಲಿಯ ಹತ್ತಿ ಮತ್ತು ರೇಷ್ಮೆ ಸೀರೆ, ಕಾಂತಾ ವರ್ಕ್ ಡ್ರೆಸ್ ಮೆಟೀರಿಯಲ್ಸ್, ಪ್ರಿಂಟೆಡ್  ರೇಷ್ಮೆ ಸೀರೆ, ಪಶ್ಚಿಮ ಬಂಗಾಳದ ಬುಟಿಕ್ ಸೀರೆ ಮತ್ತು ಡ್ರೆಸ್ ಮೆಟೀರಿಯಲ್ಸ್, ಭಾಗಲ್ಪುರದ ರೇಷ್ಮೆ ಡ್ರೆಸ್ ಮೆಟೀರಿಯಲ್ಸ್, ಕೈಯಿಂದಲೇ ಮುದ್ರಣ ಮಾಡಿದ (ಹ್ಯಾಂಡ್ ಬ್ಲಾಕ್ ಪ್ರಿಂಟ್) ಸೀರೆ, ಖಾದಿ ರೇಷ್ಮೆ, ಬಿಹಾರದ ರೇಷ್ಮೆ ಮತ್ತು ಹತ್ತಿಯ ಚೂಡಿದಾರ್ ಹಾಗೂ ಡ್ರೆಸ್ ಮೆಟೀರಿಯಲ್ಸ್ ಇಲ್ಲಿವೆ. ಸಮಯ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ. ಪ್ರದರ್ಶನ ಕುರಿತ ಮಾಹಿತಿಗಾಗಿ:  74119 70184 / 96632 92148.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT