ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬಿಎಸ್‌ವೈ ರಣತಂತ್ರ

Last Updated 13 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ಪಕ್ಷ ರಚನೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅವಳಿ ನಗರದ ಮುಖಂಡರೊಂದಿಗೆ ಶುಕ್ರವಾರ ಬಿರುಸಿನ ಚರ್ಚೆ ನಡೆಸಿದರು.

ಬೆಳಗಾವಿಯಿಂದ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಅವರು ಶಾಸಕರೂ ತಮ್ಮ ಬೀಗರೂ ಆದ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರ ಮನೆಯಲ್ಲಿ ಸಂಜೆಯ ವರೆಗೂ ಚರ್ಚೆ ನಡೆಸಿದರು. ಅವರೊಂದಿಗೆ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಕರ್ನಾಟಕ ನವೀಕರಿಸಬಲ್ಲ ಇಂಧನ ನಿಗಮದ ಅಧ್ಯಕ್ಷ ಸಿ.ಎಂ.ನಿಂಬಣ್ಣವರ ಇದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.

ಚಿಕ್ಕನಗೌಡ್ರ ಅವರ ಅನು ಪಸ್ಥಿತಿ ಯಲ್ಲಿ ಅವರ ನಿವಾಸದಲ್ಲಿ ಸಭೆ ನಡೆಸಿದ ಯಡಿ ಯೂರಪ್ಪ ಅವ ರನ್ನು ಈ ಭಾಗದ ಸುಮಾರು 80 ಮಂದಿ ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ಇವರ ಪೈಕಿ ಕೆಲ ಮಾಜಿ ಶಾಸಕರು ಕೂಡ ಇದ್ದರು ಎನ್ನಲಾಗಿದೆ.

ಹೊಸ ಪಕ್ಷಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು, ಚಿಹ್ನೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಯಡಿಯೂರಪ್ಪ ಅವರು ಬೆಂಬಲಿಗರ ಅಭಿಪ್ರಾಯ ಕೇಳಿದರು, ಮುಂದಿನ ತಿಂಗಳಲ್ಲಿ ಬೀದರ್‌ನಿಂದ `ಬಿಎಸ್‌ವೈ ರಥಯಾತ್ರೆ~ ನಡೆಸಿ ತಮ್ಮ ಸಾಧನೆಗಳನ್ನು ಜನತೆಗೆ ತಿಳಿಸುವ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆದಿದೆ. ಬಳಿಕ ಯಡಿಯೂರಪ್ಪ ಅವರು ತಮ್ಮ ಆಪ್ತರೊಂದಿಗೆ ಬೆಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT